VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 13, 2010

ಭಾರತದ ಅಸ್ಥಿರ ಬೌಲಿಂಗ್‌ ಲಾಭ ಎತ್ತುತ್ತೇವೆ: ಸಂಗಕ್ಕರ

ಬುಧವಾರ ನಡೆಯಲಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತದ ಬೌಲಿಂಗ್ ದುರ್ಬಲತೆ ಮತ್ತು ಅಸ್ಥಿರತೆಯ ಲಾಭವನ್ನು ನಾವು ಪಡೆಯಲಿದ್ದೇವೆ ಎಂದು ಶ್ರೀಲಂಕಾ ಕಪ್ತಾನ ಕುಮಾರ ಸಂಗಕ್ಕರ ಹೇಳಿದ್ದಾರೆ.

ನಾವು ಕಳೆದ ಎರಡು ಅಥವಾ ಮೂರು ತಿಂಗಳುಗಳಿಂದ ಅಥವಾ ಅದಕ್ಕಿಂತಲೂ ಹೆಚ್ಚು ಸಮಯದಿಂದ ಅವರ ಬೌಲಿಂಗ್ ಮೇಲೆ ಒತ್ತಡ ಹೇರುತ್ತಿದ್ದೇವೆ. ಅದನ್ನೇ ಮುಂದಿನ ಪಂದ್ಯದಲ್ಲೂ ಮುಂದುವರಿಸಲಿದ್ದೇವೆ. ಆದರೆ ಅದೇ ಹೊತ್ತಿಗೆ ಯಾವುದೇ ತಂಡ ಅಥವಾ ಯಾವುದೇ ಆಟಗಾರನನ್ನು ಕೀಳಂದಾಜಿಸುವ ಪ್ರಶ್ನೆಯೇ ಇಲ್ಲ. ಫೈನಲ್ ಪಂದ್ಯವನ್ನು ಗೆಲ್ಲಲು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿದ್ದೇವೆ ಎಂದು ಇಲ್ಲಿನ ಶೇರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ಸಂಗಕ್ಕರ ತಿಳಿಸಿದ್ದಾರೆ.

ಭಾರತದ ವಿರುದ್ಧ ಸೋಲುಂಡಿದ್ದ ಭಾನುವಾರದ ಪಂದ್ಯದ ಪರಿಸ್ಥಿತಿಯಿಂದ ನಾವು ಹೊರ ಬಂದಿದ್ದು, ಅದನ್ನು ಮರೆತೇ ಬಿಟ್ಟಿದ್ದೇವೆ. ಆ ಪಂದ್ಯದಲ್ಲಿ ನಮ್ಮದು ಕೆಟ್ಟ ನಿರ್ವಹಣೆಯಾಗಿತ್ತು. ಇದು ಬ್ಯಾಟ್, ಬಾಲ್ ಮತ್ತು ಫೀಲ್ಡಿಂಗ್‌ನಲ್ಲಿ ಕೂಡ. ಹಾಗಾಗಿ ಮುಂದಿನ ಪಂದ್ಯದಲ್ಲಿ ತಾಜಾತನದೊಂದಿಗೆ ಅಂಗಣಕ್ಕಿಳಿಯಲಿದ್ದೇವೆ. ಅತ್ಯುತ್ತಮ ತಯಾರಿ ನಡೆಸಿರುವ ನಾವು ಗೆಲುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತೋಡಿಕೊಂಡರು.

ಮಂಜು ಬೀಳುತ್ತಿರುವುದನ್ನು ಪರಿಗಣಿಸಿದಲ್ಲಿ ಈ ಟೂರ್ನಮೆಂಟ್‌ನಲ್ಲಿ ಎರಡನೇ ಅವಧಿಯಲ್ಲಿ ಬೌಲಿಂಗ್ ಮಾಡುವ ತಂಡ ಗೆಲ್ಲಬಹುದೇ ಎಂಬ ಪ್ರಶ್ನೆಗೆ ಸಂಗಕ್ಕರ, ಖಂಡಿತಾ ಗೆಲ್ಲಬಹುದಾಗಿದೆ; ಆದರೆ ಅದಕ್ಕೂ ಮೊದಲು ದೊಡ್ಡ ಮೊತ್ತವನ್ನು ಕಲೆ ಹಾಕಿರಬೇಕು ಮತ್ತು ಬೌಲಿಂಗ್‌ನಲ್ಲಿ ಕಠಿಣ ನಿಯಂತ್ರಣ ಹೊಂದಿರಬೇಕು. ಯಾರಾದರೂ ಕನಿಷ್ಠ 270ರಿಂದ 280ರಷ್ಟು ರನ್ ಕಲೆ ಹಾಕುವುದು ಅಗತ್ಯ ಎಂದರು.

ಫಾರ್ಮ್‌ನಲ್ಲಿರುವ ಮತ್ತು ಟೂರ್ನಮೆಂಟ್‌ನಲ್ಲೇ ಗರಿಷ್ಠ 273 ರನ್ ದಾಖಲಿಸಿರುವ ವಿರಾಟ್ ಕೋಹ್ಲಿಯವರ ವಿರುದ್ಧ ಯಾವುದಾದರೂ ತಂತ್ರಗಾರಿಕೆ ಹೆಣೆಯಲಾಗಿದೆಯೇ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು.

ಅವರು ಅತ್ಯುತ್ತಮ ಲಯ ಹೊಂದಿದ್ದಾರೆ. ಅವರ ಬಗ್ಗೆ ಬೌಲಿಂಗ್ ಲೈನ್ ಮತ್ತು ಲೆನ್ತ್ ಕುರಿತು ಹೆಚ್ಚಿನ ಗಮನ ಹರಿಸಲಿದ್ದೇವೆ ಎಂದರು.

Webdunia

No comments: