VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 14, 2010

ಅಗರ್ಕರ್ ಮತ್ತೆ ಕಿತಾಪತಿ!

ಕರ್ನಾಟಕ ವಿರುದ್ಧ ಗ್ಲೇಡ್ಸ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ಉಪ ನಾಯಕ ಅಜಿತ್ ಅಗರ್ಕರ್ ಮತ್ತೆ ಅಸಭ್ಯವಾಗಿ ವರ್ತಿಸಿದ್ದಾರೆ.


ಮೈಸೂರು: ಕರ್ನಾಟಕ ವಿರುದ್ಧ ಗ್ಲೇಡ್ಸ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ಉಪ ನಾಯಕ ಅಜಿತ್ ಅಗರ್ಕರ್ ಮತ್ತೆ ಅಸಭ್ಯವಾಗಿ ವರ್ತಿಸಿದ್ದಾರೆ.

ಪಂದ್ಯದ ಮೊದಲ ದಿನ ಅನುಚಿತ ವರ್ತನೆ ತೋರಿದ್ದಕ್ಕಾಗಿ ಮ್ಯಾಚ್ ರೆಫರಿ ಎಸ್.ರಮೇಶ್ ವಿಧಿಸಿರುವ ಪಂದ್ಯ ಸಂಭಾವನೆಯ 25 ಸಾವಿರ ರೂಪಾಯಿ ದಂಡ ಅಗರ್ಕರ್ ಅವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ಆ ಸೇಡನ್ನು ಕರ್ನಾಟಕ ಆಟಗಾರರ ಮೇಲೂ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತಿದೆ.

ಬುಧವಾರ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದಾಗಿನಿಂದ ಅವರು ಕಿತಾಪತಿ ಶುರು ಮಾಡಿದರು. ಬಳಿಕ ಮಿಥುನ್ ಬೌಲಿಂಗ್‌ನಲ್ಲಿ ಅಗರ್ಕರ್ ನೀಡಿದ ಕ್ಯಾಚ್ ಪಡೆದ ರಾಬಿನ್ ಉತ್ತಪ್ಪ ಚೆಂಡನ್ನು ಅಂಗಳದಲ್ಲಿ ಕುಕ್ಕಿದರು. ಇದರಿಂದ ಅಗರ್ಕರ್ ಮತ್ತಷ್ಟು ಸಿಟ್ಟಾದರು. ಉತ್ತಪ್ಪ ವಿರುದ್ಧವೂ ರೆಫರಿಗೆ ದೂರು ನೀಡುವಂತೆ ಅಂಪೈರ್‌ಗಳತ್ತ ಎರಡು ನಿಮಿಷ ಕೈ ತೋರಿಸಿ ಗೊಣಗಿದರು. ಈ ಸಂದರ್ಭದಲ್ಲಿ ಉತ್ತಪ್ಪ ಅವರತ್ತ ತೆರಳಿದ ಅಂಪೈರ್‌ಗಳಾದ ಅಮೀಶ್ ಸಾಹೀಬಾ ಹಾಗೂ ಸಂಜಯ್ ಹಜಾರೆ ಸಮಾಲೋಚನೆ ನಡೆಸಿದರು.

ಚೆಂಡನ್ನು ನೆಲಕ್ಕೆ ಕುಕ್ಕಿದ ಸಂಬಂಧ ಅಂಪೈರ್‌ಗಳು ಉತ್ತಪ್ಪ ವಿರುದ್ಧ ಮ್ಯಾಚ್ ರೆಫರಿಗೆ ದೂರು ನೀಡಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಸಂಬಂಧ ರೆಫರಿ ರಮೇಶ್ ಗುರುವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಅಗರ್ಕರ್ ಔಟಾಗಿ ಪೆವಿಲಿಯನ್‌ಗೆ ಬಂದ ಮೇಲೂ ತಮ್ಮ ಸಿಟ್ಟು ವ್ಯಕ್ತಪಡಿಸಿದ್ದಾರೆ. ಸೋಮವಾರ ವಿವಾದಕ್ಕೆ ಕಾರಣವಾದ ರನ್‌ಔಟ್ ಸಂಬಂಧ ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದ್ದರು. ರನ್‌ಔಟ್ ಎಂದು ತೀರ್ಪು ನೀಡಿದ ಮೇಲೂ ಕ್ರೀಸ್ ಬಿಡಲು ತಡಮಾಡಿದ್ದರು.

ಬಿಸಿಸಿಐನ ಒಂದನೇ ಸ್ತರದ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ನಿರ್ಧಾರಕ್ಕೆ ಬಂದ ರೆಫರಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದರು. ಆದರೆ ಎರಡನೇ ದಿನವೂ ಅವರು ಬೌಲಿಂಗ್ ವೇಳೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.

Prajavani

No comments: