
ಮಂಗಳೂರು: ಮಹಿಳೆಯೊಬ್ಬರ ಕರೆಗೆ ಸ್ಪಂದಿಸಿ ಉಪಕಾರ ಮಾಡಲು ಹೋದ ವ್ಯಕ್ತಿಯೊಬ್ಬರಿಗೆ ತಂಡವೊಂದು ನಡೆಸಿದ ಹಲ್ಲೆಯಿಂದಾಗಿ ಆಸ್ಪತ್ರೆ ಸೇರಿದ ಘಟನೆ ತೋಕೂರಿನಲ್ಲಿ ನಡೆದಿದೆ.
ತೋಕೂರು 62ನೇ ಮೈಂದಗುರಿಯ ಶರೀಫ್ (38) ಎಂಬವರೇ ಹಲ್ಲೆಗೊಳಗಾ ದವರು. ಇವರು ತಮ್ಮ ಮನೆಯನ್ನು ಹಿಂದೂ ಕುಟುಂಬವೊಂದಕ್ಕೆ ಬಾಡಿಗೆಗೆ ನೀಡಿದ್ದಾರೆ. ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗು ತ್ತಿದ್ದಾಗ ಬಾಡಿಗೆ ಮನೆಯ ಮಹಿಳೆಯು ಶರೀಫ್‌ಗೆ ಕರೆ ಮಾಡಿ ಯಾರೋ ತಮ್ಮ ಮನೆಯ ಬಾಗಿಲು ಬಡಿಯುತ್ತಿದ್ದಾರೆಂದು ಹೇಳಿದ್ದರು.
ಇದಕ್ಕೆ ಸ್ಪಂದಿಸಿದ ಶರೀಫ್, ಮನೆಗೆ ಹೋಗುವ ಬದಲು ಕರೆ ಮಾಡಿದ ಮಹಿಳೆಯ ಸಹಾಯಕ್ಕೆಂದು ಧಾವಿಸಿದ್ದರು. ಇದೇ ವೇಳೆ ನಾಲ್ಕೈದು ಮಂದಿಯ ತಂಡವು ಕಾದು ಕುಳಿತು ಶರೀಫ್ ಬಂದೋಡನೆಯೇ ಅವರ ಮೇಲೆ ಮುಗಿ ಬಿದ್ದು ಅವಾಚ್ಯ ಶಬ್ದ ಗಳಿಂದ ನಿಂದನೆ ಮಾಡಿ ತಲೆಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದರೆನ್ನಲಾಗಿದೆ.
ಇತ್ತ ಶರೀಫ್ ಬಾರದಿದ್ದುದನ್ನು ಕಂಡ ಮಹಿಳೆಯು ಅವರ ಸಹೋದರನಿಗೂ ಕರೆ ಮಾಡಿದರು. ಆತನೂ ಮಹಿಳೆಯಿದ್ದ ಮನೆಯತ್ತ ಧಾವಿಸಿ ಬಂದಾಗ ಆರೋಪಿಗಳು ಪರಾರಿಯಾದರೆಂದು ಹೇಳಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಶರೀಫ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬಾತ ದಾಮು ಯಾನೆ ದಾಮೋದರ ಎಂದು ಹೇಳಲಾಗಿದ್ದು ಆತ ಏಳು ತಿಂಗಳ ಹಿಂದೆ ಕುಳಾಯಿ ಸುಪ್ರಭಾತ ಹೊಟೇಲ್‌ನಲ್ಲಿ ನಡೆದ ಕೊಲೆಯಲ್ಲಿ ಭಾಗಿಯಾಗಿದ್ದ ಮನೋಜ್ ಎಂಬಾತನ ಸಹೋದರನೆಂದು ಹಲ್ಲೆಗೊಳಗಾದ ಶರೀಫ್‌ನ ಸಂಬಂಧಿಕರು ತಿಳಿಸಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ವರಿಗಾಗಿ ಪೊಲೀಸರು ಹುಡುಕಾಟ ನಡೆಸುತಿ ್ತದ್ದಾರೆ. ಘಟನೆಯಿಂದ ಸ್ಥಳದಲ್ಲಿ ಸ್ವಲ್ಪ ಸಮಯ ಬಿಗುವಿನ ವಾತಾವರಣ ಉಂಟಾಗಿತ್ತು.
source: jayakirana
No comments:
Post a Comment