ಮಂಗಳೂರು: ಕೇಂದ್ರದಲ್ಲಿ ಮಹತ್ವದ ಜವಾಬ್ದಾರಿ ಹೊಂದುವ ನಿರೀಕ್ಷೆಯಲ್ಲಿದ್ದ ಜನಾರ್ದನ ಪೂಜಾರಿ ಯವರಿಗೆ ಮತ್ತೊಮ್ಮೆ ನಿರಾಸೆ ಯಾಗಿದೆ.
ಚುನಾವಣಾ ರಾಜಕಾರಣದಿಂದ ದೂರ ಸರಿದು ಪ್ರಭಾವಿ ಹುದ್ದೆ ಅಲಂಕ ರಿಸುವ ಅವರ ಆಸೆಗೆ ದೆಹಲಿಯಲ್ಲಿರುವ ಕರಾವಳಿ ನಾಯಕರು ಅಡ್ಡಗಾಲಾಗುತ್ತಿದ್ದಾರೆ ಎನ್ನುವ ಮಾತಿದೆ. ಈಗ ನಡೆದ ರಾಜ್ಯಪಾಲರ ನೇಮಕಾತಿಯ ಪಟ್ಟಿ ನೋಡಿದಾಗ ಇದು ಹೌದೆಂತೆ ನ್ನಿಸಲೂಬಹುದು.
ಕಳೆದ ಲೋಕಸಭಾ ಚುನಾವಣೆ ಯಲ್ಲಿ ಸೋತ ಬಳಿಕ ಜನಾರ್ದನ ಪೂಜಾರಿ ತನ್ನ ಪ್ರತಿಷ್ಟೆಯನ್ನು ಪುನಃ ಸ್ಥಾಪಿಸಲು ಇನ್ನಿಲ್ಲದ ಶ್ರಮ ವಹಿಸು ತ್ತಿದ್ದಾರೆ. ಅವರ ಶ್ರಮದ ಬಹು ಭಾಗ ದೆಹಲಿಗೆ ಮೀಸಲಾಗಿರುವುದು ವಿಶೇಷ.
ತನ್ನ ಜೀವಮಾನ ಇಡೀ ದೆಹಲಿ ಕೇಂದ್ರಿತ ರಾಜಕಾರಣವನ್ನೇ ಮಾಡಿ ಕೊಂಡು ಬಂದ ಜನಾರ್ದನ ಪೂಜಾರಿ ಮೂರು ಬಾರಿ ಸೋಲಿನ ಬಳಿಕವೂ ನಾಲ್ಕನೆ ಬಾರಿ ಟಿಕೆಟ್ ಗಿಟ್ಟಿಸಿದ್ದರು. ಅವರ ಪ್ರಭಾವಲಯ ಹೇಗಿರ ಬಹುದು ಎಂದು ಲೆಕ್ಕ ಹಾಕಲು ಇದೊಂದೇ ಉದಾಹರಣೆ ಸಾಕು. ಆದರೆ ಈಗ ಮತ್ತೆ ಪೂಜಾರಿ ದೆಹಲಿಯ ಹಿಡಿತ ಕಳೆದುಕೊಳ್ಳು ತ್ತಿರುವ ಲಕ್ಷಣಗಳು ಕಾಣುತ್ತಿವೆ.
ಐದು ತಿಂಗಳ ಹಿಂದೆಯೇ ಪೂಜಾರಿ ರಾಜ್ಯಪಾಲರಾಗುವ ಮಹತ್ವಾಕಾಂಕ್ಷೆಯೊಂದಿಗೆ ದೆಹಲಿಯಲ್ಲಿ ಓಡಾಡಿದ್ದರು. ಆಗ ಅವರ ಸ್ಥಾನವನ್ನು ಮಾರ್ಗರೇಟ್ ಆಳ್ವ ಆಕ್ರಮಿಸಿದರು. ಈಗ ಮತ್ತೆ ಏಳು ರಾಜ್ಯಗಳಿಗೆ ರಾಜ್ಯಪಾಲರ ನೇಮಕಾತಿಯ ಪಟ್ಟಿ ಹೊರ ಬಿದ್ದಿದೆ. ಇದರಲ್ಲಿ ಪೂಜಾರಿ ಹೆಸರು ಇದ್ದೆ ಇರುತ್ತದೆ ಎಂದು ನಿರೀಕ್ಷಿಸಲಾಗಿ ತ್ತಾದರೂ ಈ ನಿರೀಕ್ಷೆ ಹುಸಿಯಾಗಿದೆ.
ಕೇಂದ್ರದಲ್ಲಿ ಮನ್‌ಮೋಹನ್ ಸಿಂಗ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುವ ಮೊದಲು ದೆಹಲಿಯಲ್ಲಿ ಕರ್ನಾಟಕ ಕರಾವಳಿ ಮೂಲದ ಪ್ರಭಾವಿ ನಾಯಕರಾಗಿ ಜನಾರ್ದನ ಪೂಜಾರಿಯೇ ಚಾಲನೆಯಲ್ಲಿದ್ದರು. ಯಾವಾಗ ವೀರಪ್ಪ ಮೊಯ್ಲಿ ಮನ್‌ಮೋಹನ ಸಿಂಗ್‌ರ ಆತ್ಮೀಯ ಬಳಗ ಸೇರಿದರೋ, ಅಲ್ಲಿಂದ ಪೂಜಾ ರಿಯ ಪ್ರಭಾವ ಕಡಿಮೆ ಆಗ ತೊಡ ಗಿತು. ತನ್ನ ಚತುರ ಬುದ್ದಿಯಿಂದ ಸೋನಿಯಾ ಮೇಡಂ ಪ್ರೀತಿಯನ್ನು ಗಳಿಸಿರುವ ಮೊಯ್ಲಿ ದೆಹಲಿಯಲ್ಲಿ ಇರುವವರೆಗೆ ಪೂಜಾರಿಗೆ ಸ್ಥಾನಮಾನ ಸಾಧ್ಯವಿಲ್ಲ ಎಂಬ ಮಾತು ಈಗ ಚಾಲ್ತಿಯಲ್ಲಿದೆ.
ಸ್ಥಳೀಯ ಕೆಲವು ನಾಯಕರು ಕೂಡ ಪೂಜಾರಿಯನ್ನು ನಿವೃತ್ತಗೊಳಿಸಿ ಎಂಬ ಮನವಿಯನ್ನು ಸೋನಿಯಾ ಮೇಡಂಗೆ ಸಲ್ಲಿಸಿ ಬಂದಿದ್ದು, ಅದೂ ಕೂಡ ಪೂಜಾರಿಗೆ ಹಿನ್ನಡೆ ಒದಗಿಸಿ ರಲೂಬಹುದು.
ಮನೆಗೆದ್ದು ಮಾರುಗೆಲ್ಲು ಎಂಬ ನಾಣ್ಣುಡಿಯಂತೆ ಪೂಜಾರಿ ದೆಹಲಿಯ ಪ್ರಭಾವದ ಕಲ್ಪನೆಯಿಂದ ಹೊರ ಬಂದು ತನ್ನ ಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡರೆ ಅದು ಅವರ ಮುಂದಿನ ಮೆಟ್ಟಿಲಿಗೆ ಅನುಕೂಲವಾಗಬಹುದು ಎಂಬುದು ಪೂಜಾರಿಯ ಹಳೆಯ ಒಡನಾಡಿಗಳ ಹಿತನುಡಿ.
ದ.ಕ.ಜಿಲ್ಲೆಯಲ್ಲಿ ಪಕ್ಷದಲ್ಲಿರುವ ಒಳಜಗಳ ಗುಂಪುಗಾರಿಕೆ ಹೋಗಲಾ ಡಿಸಿ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲೇ ಬೇಕಾದ ಅನಿವಾ ರ್ಯತೆ ಇರುವ ಈ ಸಂದರ್ಭದಲ್ಲಿ ಪೂಜಾರಿ ತನ್ನ ಸೇವೆ ಒದಗಿಸಲೇ ಬೇಕಾಗಿದೆ ಎಂದು ಹಿಂದೆ ಅವರೊಂ ದಿಗೆ ಇದ್ದ ಈಗ ಅವರಿಂದ ದೂರ ಮಾಡಲ್ಪಟ್ಟವರ ಮಾತು.
ಪೂಜಾರಿ ಕಿಂಗ್ ಆಗಲು ಶ್ರಮ ಪಡುವುದಕ್ಕಿಂತ ಕಿಂಗ್ ಮೇಕರ್ ಆಗಿ ಬೆಳೆಯಲಿ ಎಂಬ ಆಶಾಭಾವ ಕಾರ್ಯ ಕರ್ತರು ವ್ಯಕ್ತಪಡಿಸುತ್ತಿದ್ದಾರೆ.
jayakirana
Subscribe to:
Post Comments (Atom)
No comments:
Post a Comment