ಏಕದಿನ ಕ್ರಿಕೆಟ್‌ನಲ್ಲಿಯೂ ನಂಬರ್ ಒನ್ ಸ್ಥಾನಕ್ಕೆ ಏರಬೇಕು. ಇದು ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆಯ ಮಹತ್ವಾಕಾಂಕ್ಷೆಯ ಕನಸು.
ಮೀರ್‌ಪುರ: ಇದನ್ನು ನನಸಾಗಿಸಿಕೊಳ್ಳಲು ಸತತ ಗೆಲುವಿನ ಹಾದಿಯಲ್ಲಿ ನಡೆಯುವುದು ಮುಖ್ಯ. ಆದ್ದರಿಂದಲೇ ಇಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್‌ನಲ್ಲಿ ವಿಜಯ ಸಾಧಿಸಿ ಭಾರತವು ಟ್ರೋಫಿಯನ್ನು ಎತ್ತಿ ಹಿಡಿಯಲೇಬೇಕು.
ಈ ಸರಣಿಯ ಮೊದಲ ಪಂದ್ಯದಲ್ಲಿನ ನಿರಾಸೆ ಮರೆತು ಆನಂತರ ಸತತ ಮೂರು ಪಂದ್ಯಗಳನ್ನು ಜಯಿಸುವ ಮೂಲಕ ಬಲ ಪ್ರದರ್ಶಿಸಿರುವ ‘ಮಹಿ’ ಬಳಗ ಇನ್ನೊಂದು ಯಶಸ್ಸಿನ ಹೆಜ್ಜೆ ಇಡಬೇಕು. ಬುಧವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಿಂಹಳೀಯರನ್ನು ಬಗ್ಗುಬಡಿದಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾಕ್ಕೆ ನಿಕಟ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಲ್ಲಬಹುದು.
ಆಸ್ಟ್ರೇಲಿಯಾ ತಂಡವು 130 ರೇಟಿಂಗ್ ಪಾಯಿಂಟ್ಗಳನ್ನು ಹೊಂದಿದೆ. ಭಾರತವು 123 ಪಾಯಿಂಟುಗಳನ್ನು ತನ್ನ ಖಾತೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದೆ. ತ್ರಿಕೋನ ಸರಣಿಯಲ್ಲಿನ ವಿಜಯದ ನಂತರ ಪಾಯಿಂಟುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇನ್ನಷ್ಟು ಗಟ್ಟಿಯಾಗುತ್ತದೆ.
ಅದೃಷ್ಟದ ನಾಯಕ ಎನಿಸಿರುವ ದೋನಿ ಮುಂದಾಳತ್ವದಲ್ಲಿ ಭಾರತವು ಕಳೆದ ವರ್ಷ ನಾಲ್ಕು ಏಕದಿನ ಸರಣಿಗಳನ್ನು ಗೆದ್ದಿದೆ. ಹೊಸ ವರ್ಷದ ಆದಿಯಲ್ಲಿಯೇ ತ್ರಿಕೋನ ಸರಣಿ ಗೆದ್ದು, ಯಶಸ್ಸಿನ ಓಟವನ್ನು ಮುಂದುವರಿಸುವ ವಿಶ್ವಾಸವೂ ತಂಡದಲ್ಲಿದೆ.
ಶ್ರೀಲಂಕಾ ಈಗಾಗಲೇ ಭಾರತ ಪ್ರವಾಸದಲ್ಲಿ ಏಕದಿನ ಸರಣಿ ಸೋತಾಗಿದೆ. ಬಾಂಗ್ಲಾದಲ್ಲಿಯೂ ನಿರಾಸೆಯ ಭಯ ಅದನ್ನು ಕಾಡುತ್ತಿದೆ. ಆದರೆ ಮೊದಲ ಪಂದ್ಯದಲ್ಲಿನಂತೆ ಅಚ್ಚರಿಯ ಫಲಿತಾಂಶ ಹೊರಹೊಮ್ಮಿಸುವ ಛಲವನ್ನಂತೂ ಸಂಗಕ್ಕಾರ
ನಾಯಕತ್ವದ ಪಡೆಗಿದೆ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment