ಜನನ ವಿವರಗಳ ದಾಖಲಾತಿ ವೇಳೆ ಮಕ್ಕಳು ತಂದೆ ಅಥವಾ ತಾಯಿಯ ಜನಾಂಗಕ್ಕೆ ಸೇರಿದವರೇ ಎಂದು ನಿರ್ಧರಿಸುವುದು ಪೋಷಕರಿಗೆ ಬಿಟ್ಟ ವಿಚಾರ ಎಂದು ಸಿಂಗಪುರ ಸರ್ಕಾರ ಘೋಷಿಸಿದೆ.
ಸಿಂಗಪುರ(ಬರ್ನಾಮ): ಜನನ ವಿವರಗಳ ದಾಖಲಾತಿ ವೇಳೆ ಮಕ್ಕಳು ತಂದೆ ಅಥವಾ ತಾಯಿಯ ಜನಾಂಗಕ್ಕೆ ಸೇರಿದವರೇ ಎಂದು ನಿರ್ಧರಿಸುವುದು ಪೋಷಕರಿಗೆ ಬಿಟ್ಟ ವಿಚಾರ ಎಂದು ಸಿಂಗಪುರ ಸರ್ಕಾರ ಘೋಷಿಸಿದೆ.
ಈ ಮೊದಲು ಮಗು ತಂದೆಯ ಜನಾಂಗಕ್ಕೆ ಮಾತ್ರ ಸೇರಿದೆ ಎಂಬ ನಿಯಮ ಜಾರಿಯಲ್ಲಿತ್ತು ಎಂದು ನಗರ ಸರ್ಕಾರದ ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.
ಕೆಲವು ವರ್ಷಗಳಿಂದೀಚೆಗೆ ಸಿಂಗಪುರದ ಜನಾಂಗೀಯ ವೈವಿಧ್ಯತೆ ಹೆಚ್ಚುತ್ತಿದ್ದು ವಲಸಿಗರ ಪ್ರವೇಶ ಹಾಗೂ ಸ್ಥಳೀಯರು ವಿದೇಶಿಯರನ್ನು ಮದುವೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಕಾನೂನಿಗೆ ತಿದ್ದುಪಡಿ ತಂದಿದೆ ಎಂದು ಕಾನೂನು ಮತ್ತು ಗೃಹ ವ್ಯವಹಾರಗಳ ಸಚಿವ ಪ್ರೊ. ಹೊ ಪೆಂಗ್ ಕೀ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಜನವರಿ 2ರಿಂದ ಈ ನಿಯಮ ಅನ್ವಯಿಸಲಿದ್ದು ಇದರ ಅನ್ವಯ ಮಗು ಯಾವ ಸಮುದಾಯಕ್ಕೆ ಸೇರಬೇಕು ಎಂದು ನಿರ್ಧರಿಸುವುದು ನಿರ್ಧರಿಸಲು ಪೋಷಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.
ಉದಾಹರಣೆಗೆ ಕಕೇಷಿಯನ್ - ಚೀನಾ ದಂಪತಿಗೆ ಹುಟ್ಟಿದ ಮಗು ಕಕೇಷಿಯನ್ ಆಗಿರಬೇಕೆ ಅಥವಾ ಚೀನಿ ಆಗಿರಬೇಕೆ ಎಂಬುದನ್ನು ಪೋಷಕರೇ ದಾಖಲೆಗಳಲ್ಲಿ ನಮೂದಿಸಲಿದ್ದಾರೆ.
Prajavani
Subscribe to:
Post Comments (Atom)
No comments:
Post a Comment