ಸವಾಯಿಮಾಧವಪುರ, ಮಾ.೧೫: ರಾಜಸ್ಥಾನದ ಸವಾಯಿ ಮಾಧವಪುರ ಜಿಲ್ಲೆಯಲ್ಲಿ ಸೋಮವಾರ ನಸುಕಿನ ವೇಳೆ ಬಸ್ಸೊಂದು ನಿಂತಿದ್ದ ವಾಹನವೊಂದಕ್ಕೆ ಢಿಕ್ಕಿ ಹೊಡೆದು ಸೇತುವೆಯ ಮೇಲಿಂದ ನೀರಿಲ್ಲದ ನದಿಯೊಂದಕ್ಕೆ ಬಿದ್ದ ಪರಿಣಾಮವಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸೇರಿದಂತೆ ೨೬ ಮಂದಿ ಬಲಿಯಾಗಿದ್ದು, ಇತರ ೩೪ ಮಂದಿ ಗಾಯಗೊಂಡಿದ್ದಾರೆ.
ವೃಂದಾವನಕ್ಕೆ ಶೈಕ್ಷಣಿಕ ಪ್ರವಾಸ ಹೋಗಿದ್ದವರು ಝಲಾವರ್‌ಗೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
೨೧ ಮಂದಿ ಸ್ಥಳದಲ್ಲೇ ಮೃತರಾಗಿದ್ದು, ಐವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ಸವಾಯಿ ಮಾಧವಪುರದ ಪೊಲೀಸ್ ಅಧೀಕ್ಷಕ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆಯನ್ನಲಾಗಿದೆ.
ಈ ನತದೃಷ್ಟ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಝಲಾವರ್‌ನ ಖಾನ್ಪುರದ ಶಿಕ್ಷಕರ ತರಬೇತಿ ಶಾಲೆಯೊಂದಕ್ಕೆ ಸೇರಿದವರಾಗಿದ್ದಾರೆ.
Mar 16, 2010
Subscribe to:
Post Comments (Atom)
No comments:
Post a Comment