ಬೆಳ್ತಂಗಡಿ : ಅಜ್ಜಿಬೆಟ್ಟು ಪಚ್ಚೇರಿಪಲ್ಕೆ ಯಲ್ಲಿ ವಿಶ್ವನಾಥ ಪೂಜಾರಿಯವರ ಪುತ್ರ ನವೀನ (22) ಅವರನ್ನು ಇರಿದು ಕೊಂದ ಆರೋಪಿ ಅಶೋಕ್ ಮೂಲ್ಯ (37) ಅವ ರನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಫೆ. 28ರಂದು ಮೃತ ನವೀನ್ ತನ್ನ ಗೆಳೆಯ ವಿಶ್ವನಾಥ್ ಜತೆ ಅಗಮೆ ಎಂಬಲ್ಲಿಗೆ ಹೋಗಿ ಮರಳಿ ಬರುತ್ತಿದ್ದಾಗ ದಾರಿಯಲ್ಲಿ ಕಾದು ಕುಳಿತಿದ್ದ ಅಶೋಕ್ ಮೂಲ್ಯ ತನ್ನ ಬಳಿಯಿದ ಕೋಳಿ ಬಾಲ್ನಿಂದ ಏಕಾಏಕಿ ನವೀನ್ಗೆ ತಿವಿದು ಪರಾರಿಯಾಗಿದ್ದ. ನವೀನ್ ಈ ವೇಳೆ ಗಂಭೀರವಾಗಿ ಗಾಯಗೊಂಡು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಕೋಳಿ ಬಾಲ್ ತಿವಿತ ಮಾರಕವಾಗಿ ಪರಿಣಮಿಸಿದ್ದು ನವೀನ್ ಬುಧವಾರ ಮುಂಜಾನೆ ಕೊನೆಯುಸಿರೆಳೆದಿದ್ದ.
ಪ್ರಕರಣದ ಆರೋಪಿ ಅಶೋಕ್ನನ್ನು ವೇಣೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಬಿಟ್ಟಿದ್ದರು. ಆದರೆ ನವೀನ್ ಮೃತಪಟ್ಟ ಬಳಿಕ ಹಲ್ಲೆ ಪ್ರಕರಣವನ್ನು ಕೊಲೆ ಪ್ರಕರಣವೆಂದು ಬದಲಾಯಿಸಿ ಆರೋಪಿ ಅಶೋಕ್ನನ್ನು ಬಂಧಿಸಲಾಗಿದೆ. ಅಶೋಕ ತನ್ನ ಅಂಗಡಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದರ ವಿರುದ್ಧ ನವೀನನ ತಾಯಿ ಹೋರಾಟ ಮಾಡಿದ್ದರು. ಇದರಿಂದ ಆರೋಪಿ ಅಶೋಕ ನವೀನ ಮತ್ತು ಆತನ ಕುಟುಂಬದ ವಿರುದ್ಧ ಪೂರ್ವದ್ವೇಷ ಹೊಂದಿದ್ದ ಎಂದು ತಿಳಿದು ಬಂದಿದೆ.
ಮಗನಿಗೆ ಗುಂಡು ಹಾರಿಸಿದ ತಂದೆಗೆ ಶಿಕ್ಷೆ
ಪುತ್ತೂರು : ಸುಳ್ಯ ತಾಲೂಕಿನ ಅಲೆಟ್ಟಿಯಲ್ಲಿ ಒಂದೂವರೆ ವರ್ಷದ ಹಿಂದೆ ತಂದೆಯೋರ್ವ ಮಗನಿಗೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ತಂದೆಗೆ ಪುತ್ತೂರಿನ ತ್ವರಿತ ನ್ಯಾಯಾಲಯ 4 ವರ್ಷ ಶಿಕ್ಷೆ ನೀಡಿ ತೀರ್ಪು ನೀಡಿದೆ.
ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಮಣಿಮರ್ದ್ ಎಂಬಲ್ಲಿನ ನಿವಾಸಿ ದೇವಪ್ಪ ನಾಯ್ಕ ಶಿಕ್ಷೆಗೊಳಗಾದವರು. ಕಳೆದ 7-10-2008 ರಂದು ಮಧ್ಯಾಹ್ನ ದೇವಪ್ಪ ನಾಯ್ಕರು ತನ್ನ ಪುತ್ರನಾದ ದೇವಣ್ಣ ನಾಯ್ಕರಿಗೆ ಕೋವಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆಂಬ ಆರೋಪವಿತ್ತು.
ವಿವಾದದ ಬಳಿಕ ಮನೆ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ದೇರಣ್ಣ ನಾಯ್ಕರು ಕುಡಿತದ ಚಟ ಹೊಂದಿದ್ದ ತಂದೆ ದೇವಪ್ಪ ನಾಯ್ಕರಿಗೆ ಕೇಳಿದಾಗ ಲೆಲ್ಹಾ ಹಣ ನೀಡುತ್ತಿರಲಿಲ್ಲ ಎಂಬ ಕಾರಣಕ್ಕಾಗಿ ಜಗಳ ಕಾಯುತ್ತಿದ್ದರು. ಘಟನೆಯ ದಿನ ದೇವಪ್ಪ ನಾಯ್ಕರು ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ವಿಚಾರವರಿತ ದೇರಣ್ಣ ನಾಯ್ಕ- ಸವಿತಾ ಯಾನೆ ಚಂದ್ರಾವತಿ ದಂಪತಿ ತೋಟದಿಂದ ಮನೆಯ ಅಂಗಳಕ್ಕೆ ಬರುತ್ತಿದ್ದಂತೆಯೇ ದೇವಪ್ಪ ನಾಯ್ಕರು ಮಗನಾದ ದೇರಣ್ಣ ನಾಯ್ಕರಿಗೆ ಕೋವಿಯಿಂದ ಗುಂಡು ಹಾರಿಸಿದ್ದರು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆವನ್ನು ಪೂರ್ಣಗೊಳಿಸಿದ ಪುತ್ತೂರಿನ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ವಿ.ಬಿ. ಸೂರ್ಯವಂಶಿಯವರು ಆರೋಪಿ ದೇವಪ್ಪ ನಾಯ್ಕರನ್ನು ತಪ್ಪಿತಸ್ಥರೆಂದು ಪರಿಗಣಿಸಿ ನಾಲ್ಕು ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಉದಯಶಂಕರ್ ವಾದಿಸಿದ್ದರು.
Mar 12, 2010
Subscribe to:
Post Comments (Atom)
No comments:
Post a Comment