VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 11, 2010

ಮಂಗಳೂರು: ಹಲ್ಲೆ ಪ್ರಕರಣ: ಆರೋಪಿಗಳ ಸೆರೆ







ಮಂಗಳೂರು: ಸುರತ್ಕಲ್‌ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದು ನ್ಯಾಯಾಲಯ ಬುಧವಾರ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿದೆ.
ಇಡ್ಯಾ ಬಳಿ ಕಬಡ್ಡಿ ಆಡುತ್ತಿದ್ದ ಅಲ್ಪಾದ್‌ ಮತ್ತು ತೌಫೀಕ್‌ ಎಂಬವರಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಡ್ಯಾ ಗ್ರಾಮದ ಸುರತ್ಕಲ್‌ ಸದಾಶಿವ ನಗರ ನಿವಾಸಿ ಚೇತನ್‌ (19), ಹೊಸಬೆಟ್ಟುವಿನ ಹರೀಶ್‌ ಪೂಜಾರಿ (24) ಎಂಬವರನ್ನು ಬಂಧಿಸಲಾಗಿತ್ತು. ಹಿಂದೂ ಸಂಘಟನೆಯ ಕಚೇರಿಯ ಬಳಿ ಕಬಡ್ಡಿಯಾಡುತ್ತಿದ್ದುದೇ ಹಲ್ಲೆಗೆ ಕಾರಣ ಎಂದು ಆರೋಪಿಗಳು ತಿಳಿಸಿ ದ್ದಾರೆನ್ನಲಾಗಿದೆ.
ಅದೇ ದಿನ ಮಹೀಂದ್ರ ಎಂಬವರಿಗೆ ಕೃಷ್ಣಾಪುರದ ಬಳಿ ಹಲ್ಲೆ ನಡೆಸಿದ ಆರೋಪಿಗಳಾದ ಚೊಕ್ಕಬೆಟ್ಟುವಿನ ಮಹಮ್ಮದ್‌ ರಫೀಕ್‌ (21) ಮತ್ತು ಅಬ್ದುಲ್‌ ಸಲಾಂ (23) ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

No comments: