VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 13, 2010

ಕಾಸರಗೋಡು: ದುಬೈಯಿ೦ದ ತ೦ದು ಪಾಕ್ನಲ್ಲಿ ಮುದ್ರಿಸಿದ ಖೋಟಾ ನೋಟು ವಶ : ಓರ್ವನ ಬ೦ಧನ

ಕಾಸರಗೋಡು, ಮಾ. ೧೨: ಕಾಸರಗೋಡು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ವಿತರಿಸಲೆಂದು ದುಬಾ ಯಿಂದ ತಂದ, ಪಾಕಿಸ್ಥಾನದಲ್ಲಿ ಮುದ್ರಿತ ೨೪.೧೮ ಲ. ರೂ. ಮುಖಬೆಲೆಯ ಖೋಟಾನೋಟು ಗಳನ್ನು ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಿಂದ ಕಸ್ಟಮ್ಸ್ (ಡಿ‌ಆರ್‌ಐ) ವಶಪಡಿಸಿಕೊಂಡು ಯುವಕನೋರ್ವನನ್ನು ಬಂಧಿಸಿದೆ.

ಆಲಪ್ಪುಳ ಚೆನ್ನಿತ್ತಲ ತಾಳಕ್ಕೆರೆ ಕಲಮ್‌ಕಾಟ್‌ವೀಡಿನ ಗೋಪಿನಾಥನ್ ಉಣ್ಣಿಕೃಷ್ಣನ್ (೩೫)ಬಂಧಿತ. ಪಾಕಿಸ್ಥಾನದಲ್ಲಿ ಮುದ್ರಣಗೊಂಡ ೧,೦೦೦ ಮತ್ತು ೫೦೦ ರೂ.ಗಳ ಮುಖಬೆಲೆಯ ಖೋಟಾನೋಟುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ದುಬಾಯಿಂದ ಎಮಿರೇಟ್ಸ್ ವಿಮಾನದಲ್ಲಿ ಆರೋಪಿ ಖೋಟಾನೋಟುಗಳೊಂದಿಗೆ ಬಂದಿಳಿದಿದ್ದನು. ಈತನ ಕೈಯಲ್ಲಿ ಎರಡು ಬ್ಯಾಗ್‌ಗಳಿದ್ದು ಒಂದರಲ್ಲಿ ಖೋಟಾನೋಟುಗಳನ್ನು ಬಚ್ಚಿಡಲಾಗಿತ್ತು.

ವೀಸಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ದುಬಾಯಲ್ಲಿ ಸೆರೆಮನೆ ವಾಸ ಅನುಭವಿಸಿ ಜೈಲಿ ನಿಂದ ಬಿಡುಗಡೆಗೊಂಡ ಬಳಿಕ ಊರಿಗೆ ಹಿಂದಿರುಗುವ ದಾರಿ ಮಧ್ಯೆ ಕೇರಳದ ಬಾಬು ಎಂಬಾತ ಬ್ಯಾಗೊಂದನ್ನು ನೀಡಿ ಇದರಲ್ಲಿ ಆಟಿಕೆಗಳಿವೆ ಎಂದೂ, ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಇದನ್ನು ಪಡೆಯಲು ಕಲ್ಲಿಕೋಟೆಯಿಂದ ಇಬ್ಬರು ವ್ಯಕ್ತಿಗಳು ಬರಲಿದ್ದಾರೆ. ಅವರ ಕೈಗೆ ಈ ಬ್ಯಾ ಗನ್ನು ನೀಡಬೇಕೆಂದು ತಿಳಿಸಿದ್ದನು. ಆದರೆ ಬ್ಯಾಗ್‌ನೊಳಗೆ ಖೋಟಾನೋಟು ಒಳಗೊಂಡ ವಿಷಯ ತಿಳಿದಿರಲಿಲ್ಲ ವೆಂದು ಬಂಧಿತ ಗೋಪಿನಾಥನ್ ಉಣ್ಣಿಕೃಷ್ಣನ್ ಅಧಿಕಾರಿಗಳಲ್ಲಿ ತಿಳಿಸಿದ್ದಾ ನೆ. ಈತ ನೀಡಿದ ಹೇಳಿಕೆಯಂತೆ ಬಾಬು ಎಂಬ ವ್ಯಕ್ತಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ಖೋಟಾನೋಟುಗಳನ್ನು ಪಾಕಿಸ್ಥಾನದ ಬೇಹುಗಾರಿಕಾ ಸಂಘಟನೆಯಾದ ಐ‌ಎಸ್‌ಐ ನೇತೃ ತ್ವದಲ್ಲಿ ಪಾಕಿಸ್ಥಾನದಲ್ಲಿ ಮುದ್ರಿಸಲಾಗಿತ್ತು. ಭಾರತದ ಆರ್ಥಿಕತೆಯನ್ನು ಬುಡಮೇಲುಗೊಳಿಸುವು ದಕ್ಕೆ ಭಾರೀ ಪ್ರಮಾಣದಲ್ಲಿ ಖೋಟಾನೋಟು ರವಾನಿಸಲಾಗುತ್ತಿದೆ. ಇದಕ್ಕಾಗಿ ನಿರುದ್ಯೋಗಿ ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದಲ್ಲದೆ ನೇಪಾಲ, ಬಾಂಗ್ಲಾದೇಶದ ಮೂಲಕ ಖೋಟಾ ನೋಟು ರವಾನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No comments: