VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 9, 2010

ಉಬ್ಬಸ ಗುಣಪಡಿಸಿದ ಸ್ವಾಮೀಜಿಯ ಸೇವೆ: ರಂಜಿತಾ


ಚೆನ್ನೈ, ಮಂಗಳವಾರ, 9 ಮಾರ್ಚ್ 2010 : ನಿತ್ಯಾನಂದ ಸ್ವಾಮಿ ಅಶ್ಲೀಲ ಟೇಪ್ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಭೂಗತವಾಗಿರುವ, ಕನ್ನಡ ಚಿತ್ರದಲ್ಲಿಯೂ ನಟಿಸಿವು ತಮಿಳು ನಟಿ ರಂಜಿತಾ, ಟಿವಿ ಚಾನೆಲ್‌ಗಳು ಬಹಿರಂಗಪಡಿಸಿರುವ ಬೆಡ್‌ರೂಂ ಕೃತ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಪ್ರೀತಿಪಾತ್ರ ಸ್ವಾಮೀಜಿಗೆ ಇದು ತಾನು ಮಾಡುತ್ತಿದ್ದ ಸೇವೆಯಾಗಿದ್ದು, ಇದರಲ್ಲೇನು ತಪ್ಪಿಲ್ಲ ಎಂದು ಆಕೆ ತಮಿಳು ಪಾಕ್ಷಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾಳೆ.

ಮಾತ್ರವಲ್ಲದೆ ಸ್ವಾಮೀ ನಿತ್ಯಾನಂದರು ತನ್ನ ಉಬ್ಬಸವನ್ನು ಒಂದೇ ದಿನದಲ್ಲಿ ಗುಣಪಡಿಸಿದ್ದರು ಎಂದು ಪಾಕ್ಷಿಕಕ್ಕೆ ದೂರವಾಣಿ ಮೂಲಕ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾಳೆ.

ಸೆಕ್ಸ್ ಸಿಡಿಯಲ್ಲಿ ಸ್ವಾಮೀಜಿ ಜೊತೆಗಿದ್ದ ಮಹಿಳೆ ತಾನಲ್ಲ ಎಂದು ರಂಜಿತಾ ಎಲ್ಲಿಯೂ ನಿರಾಕರಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಮಾಧ್ಯಮಗಳಂತೂ ಪ್ರಕರಣವನ್ನು ಯದ್ವಾತದ್ವಾ ತಿರುಚಿವೆ. ಅವರಿಗೂ ನನಗೂ ಇದ್ದ ಸಂಬಂಧ ಪಾರದರ್ಶಕವೇ ಆಗಿದೆ. ನಿತ್ಯಾನಂದರ ಖಾಸಗಿ ಕೊಠಡಿಯಲ್ಲಿ ಅವರಿಗೆ ಆಹಾರ ನೀಡುವುದು, ಮಸಾಜು ಮಾಡುವುದು ಮುಂತಾದ ಸೇವೆಗಳನ್ನು ನಾನು ಸಾಮಾನ್ಯವಾಗಿ ಮಾಡುತ್ತಿದ್ದೆ. ಆಶ್ರಮದಲ್ಲಿರುವವರೆಲ್ಲರಿಗೂ ಇದು ತಿಳಿದೇ ಇದೆ. ತಡರಾತ್ರಿವರೆಗೂ ಅಲ್ಲಿರುತ್ತಿದ್ದೆ ಎಂದೂ ರಂಜಿತಾ ಕುಮುದಂ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾಳೆ.

ನನ್ನ ಸ್ವಾಮೀಜಿ ಬಗ್ಗೆ ನನಗೆ ತಿಳಿದಿದೆ. ಅವರೊಬ್ಬ ಮಹಾನ್ ಆತ್ಮ. ಮತ್ತು ಅವರು ಪರಿಶುದ್ಧಾತ್ಮರಾಗಿ ಸಾಬೀತುಪಡಿಸಲಿದ್ದಾರೆ ಎಂದೂ ರಂಜಿತಾ ಹೇಳಿದ್ದಾಳೆ.

No comments: