VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 11, 2010

ನಿತ್ಯಾನಂದ ರಾಸಲೀಲೆ ಪ್ರಸಾರ: ಚಾನೆಲ್‌ಗಳಿಗೆ ಹೈಕೋರ್ಟ್ ತಡೆ

ಸ್ವಘೋಷಿತ ದೇವಮಾನವ ಪರಮಹಂಸ ನಿತ್ಯಾನಂದ ಸ್ವಾಮಿಯ ಸೆಕ್ಸ್ ಕಾಂಡಕ್ಕೆ ಸಂಬಂಧಿಸಿದ 'ಅಸಭ್ಯ, ಸೆನ್ಸಾರ್ ಮಾಡದ ಮತ್ತು ಖಾಸಗಿ ಬೆಡ್‌ರೂಂ ದೃಶ್ಯ'ಗಳುಳ್ಳ ವೀಡಿಯೋಗಳನ್ನು ಪ್ರಸಾರ ಮಾಡದಂತೆ ಕರ್ನಾಟಕ ಹೈಕೋರ್ಟು ಗುರುವಾರ ಖಾಸಗಿ ಟಿವಿ ಚಾನೆಲ್‌ಗಳಿಗೆ ಮಧ್ಯಂತರ ಆದೇಶ ಹೊರಡಿಸಿದೆ.

ಬಿಜೆಪಿಯ ಮಾಜಿ ಶಾಸಕ ಮತ್ತು ವಕೀಲ ಕೆ.ಎನ್.ಸುಬ್ಬಾ ರೆಡ್ಡಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ವಿ.ಗೋಪಾಲ ಗೌಡ ಮತ್ತು ಬಿ.ಎಸ್.ಪಾಟೀಲ್ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದ್ದು, ರಾಜ್ಯ ಸರಕಾರ ಮತ್ತು ಖಾಸಗಿ ಟಿವಿ ಚಾನೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದೆ ಮತ್ತು ಪ್ರಕರಣದ ವಿಚಾರಣೆಯನ್ನು ಮಾರ್ಚ್ 17ಕ್ಕೆ ನಿಗದಿಪಡಿಸಿದೆ.

ನಿತ್ಯಾನಂದ ಮತ್ತು ತಮಿಳು ನಟಿಯ ಅನೈತಿಕ ಮತ್ತು ಅಕ್ರಮ ಚಟುವಟಿಕೆಯ ದೃಶ್ಯಗಳನ್ನೊಳಗೊಂಡ ವೀಡಿಯೋ ಕ್ಲಿಪ್ಪಿಂಗ್‌ಗಳು ದೇಶಾದ್ಯಂತ ಮಾರ್ಚ್ 3ರಂದು ಪ್ರಸಾರವಾಗಿತ್ತು ಎಂದಿದ್ದಾರೆ ರೆಡ್ಡಿ. ಈ ದೃಶ್ಯಾವಳಿಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟಪರಿಣಾಮ ಬೀರುತ್ತವೆ ಹಾಗೂ ಹಿರಿಯ ಮೇಲೂ ಪ್ರಭಾವ ಬೀರುತ್ತದೆ ಎಂದು ರೆಡ್ಡಿ ವಾದಿಸಿದ್ದಾರೆ.

ಇಂತಹ ಅಶ್ಲೀಲ, ಸೆನ್ಸಾರ್ ಮಾಡದಿರುವ ಬೆಡ್ ರೂಂ ದೃಶ್ಯಾವಳಿಗಳನ್ನು ಪ್ರಸಾರ ಮಾಡಿ ಯುವ ಮನಸ್ಸುಗಳ ಸಂಸ್ಕಾರಕ್ಕೆ ಧಕ್ಕೆ ಮಾಡದಂತೆ ಮಾಧ್ಯಮಗಳಿಗೂ ನಿರ್ದೇಶನ ನೀಡುವಂತೆ ರೆಡ್ಡಿ ಕೋರಿದ್ದಾರೆ.

ನಿತ್ಯಾನಂದನನ್ನಾಗಲೀ, ಆತನ ಚಟುವಟಿಕೆಗಳನ್ನಾಗಲೀ ಸಮರ್ಥಿಸಿಕೊಳ್ಳುತ್ತಿಲ್ಲ, ಆದರೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆ ಉದ್ದೇಶದಿಂದ ಈ ಅರ್ಜಿ ಸಲ್ಲಿಸಿರುವುದಾಗಿಯೂ ರೆಡ್ಡಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಧ್ಯಂತರ ಆದೇಶ ಜಾರಿಗೊಳಿಸಿರುವ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.

No comments: