VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 16, 2010

ಬೆಂಗಳೂರು: ಪ್ರವಾದಿ ಬೋಧನೆ ಅಳವಡಿಸಿಕೊಳ್ಳಲು ಜಿ.ಎ.ಬಾವಾ ಕರೆ


ಬೆಂಗಳೂರು, ಮಾ.೧೫: ಸಮಾಜದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಈಗಿ ರುವ ದೃಷ್ಟಿಕೋನವನ್ನು ಬದಲಿಸಲು ಪ್ರವಾದಿವರ್ಯರು ಬೋಧಿಸಿದ ಮೌಲ್ಯಗಳನ್ನು ತಿಳಿಹೇಳಬೇಕು. ಅಲ್ಲದೆ ಆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು ಬ್ಯಾರಿ ಜಮಾ‌ಅತ್ ವತಿಯಿಂದ ಮೀಲಾದುನ್ನೆಬಿ ಪ್ರಯುಕ್ತ ಕನಕ ನಗರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪ್ರವಾದಿ ಮುಹಮ್ಮದ್ (ಸ)ರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸತ್ಯ ನಿಷ್ಠೆ, ಪ್ರಮಾಣಿಕತೆ, ಕ್ಷಮಾಶೀಲತೆ, ಇದ್ದುದ್ದರಲ್ಲೆ ಸಂತೃಪ್ತಿ ಪಡುವುದು ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ದುಷ್ಟ ಪ್ರವೃತ್ತಿಗಳಿಂದ ದೂರ ಉಳಿದು, ಸಮಾಜಕ್ಕೆ ಆದರ್ಶಪ್ರಾಯರಾಗಬೇಕು ಎಂದು ಬಾವಾ ಕರೆನೀಡಿದರು.

ಹಿರಿಯ ವಿದ್ವಾಂಸ ಮೌಲಾನಾ ಎಸ್.ಬಿ.ಮುಹಮ್ಮದ್ ದಾರಿಮಿ ಉಪ್ಪಿನಂಗಡಿ ಮಾತನಾಡಿ, ಇಸ್ಲಾಮಿನ ಹೆಸರಿನಲ್ಲಿ ಅನಿಸ್ಲಾಮಿಕ ಕೃತ್ಯಗಳೆ ರಾರಾಜಿಸುತ್ತಿವೆ. ವರದಕ್ಷಿಣೆಯಂತಹ ಪಿಡುಗುಗಳು ಸಮಾಜವನ್ನು ಶಾಪ ವಾಗಿ ಕಾಡುತ್ತಿವೆ.

ಸರಳ, ಸುಂದರವಾದ ಇಸ್ಲಾಮಿನ ಜೀವನ ಕ್ರಮದಿಂದ ಆಕರ್ಷಿತರಾಗಿದ್ದ ಮುಸ್ಲಿಮೇತರರು ಈಗ ಇಸ್ಲಾಮನ್ನೇ ದ್ವೇಷಿಸುವಂತಾಗಿದೆ. ಇಸ್ಲಾಮಿನ ನೈಜ ಸ್ಫೂರ್ತಿಯೊಂದಿಗೆ ಜೀವನ ನಡೆಸುವುದೆ ಸಮೂಹದ ಎಲ್ಲ ಸಮಸ್ಯೆಗಳಿಗೆ ಏಕ ಮಾತ್ರ ಪರಿಹಾರ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮೌಲಾನ ಅಬ್ದುಲ್ ಅಜೀಝ್ ಅಮ್ಜದಿ, ಮೌಲಾನ ಇಖ್ರಾರ್ ಅಹ್ಮದ್ ಮಿಸ್ಬಾಹಿ, ಜಮಾ‌ಅತ್ ಪ್ರಮುಖರಾದ ಎನ್.ಹಕೀಂ ವಿಟ್ಲ, ಡಾ.ಅಬ್ದುಲ್ ಹಮೀದ್ ತೋಡಾರ್, ಮುಹಮ್ಮದ್ ಅರಳ ಮುಂತಾದವರು ಉಪಸ್ಥಿತರಿದ್ದರು.

ಜಮಾ‌ಅತ್ ಕಾರ್ಯದರ್ಶಿ ಇಬ್ರಾಹಿಂ ಇನ್ನೋಳಿ ಸ್ವಾಗತಿಸಿದರು. ಅಮೀ ರುದ್ದೀನ್ ಪ್ರಸ್ತಾವಿಕ ಭಾಷಣ ಮಾಡಿ ದರು. ಇಬ್ರಾಹಿಂ ಎ.ಜೋಕಟ್ಟೆ ಕಾರ್ಯ ಕ್ರಮ ನಿರೂಪಿಸಿದರು. ಮುಹಮ್ಮದ್ ರಫಿಕ್ ಕೂಡ್ಲಿಪೇಟೆ ವಂದಿಸಿದರು.

No comments: