ಗೋಹತ್ಯಾ ನಿಷೇಧ ಮಸೂದೆ ಹಿನ್ನೆಲೆ: ಸರಕಾರಕ್ಕೆ ಪೂಜಾರಿ ಪಾಠ!

ಮಂಗಳೂರು: ರಾಜ್ಯ ಸರಕಾರ ಸಂಪೂರ್ಣ ಗೋಹತ್ಯಾ ನಿಷೇಧ ಮಸೂದೆ ಜಾರಿಗೆ ತರಲು ಮುಂದಾಗಿ ರುವುದನ್ನು ಖಂಡಿಸಿರುವ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನಿನ್ನೆ ಸರಕಾರಕ್ಕೆ ಗೋವಿನ ಬಗ್ಗೆ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪಿನ ಪಾಠ ಮಾಡಿದರು.
ನಿನ್ನೆ ಸುದ್ದಿಗೋಷ್ಠಿಗಾಗಿ ಆಗಮಿಸುವ ವೇಳೆ ಕಾನೂನು ಪುಸ್ತಕ ತಂದಿದ್ದ ಪೂಜಾರಿ ಒಂದೂಕಾಲು ಗಂಟೆ ಪತ್ರಕರ್ತರೆದುರು ರಾಜ್ಯ ಸರಕಾರಕ್ಕೆ ಕಾನೂನಿನ ಬೋಧನೆ ಮಾಡಿದರು.
ಮಧ್ಯಪ್ರದೇಶ ಸರಕಾರ ನಾಲ್ಕು ಬಾರಿ ಗೋಹತ್ಯೆ ನಿಷೇಧಕ್ಕೆ ಮುಂದಾಗಿದ್ದು ಈ ಸಂದರ್ಭದಲ್ಲಿ ನಾಲ್ಕು ಬಾರಿಯೂ ಉಚ್ಛ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಗೋವುಗಳು 16 ವರ್ಷಗಳವರೆಗೆ ಉಪಯು ಕ್ತವಾಗಿದ್ದು ಬಳಿಕ ನಿರುಪಯುಕ್ತವಾಗುತ್ತವೆ. ಇದನ್ನು ಸಾಕುವುದರಿಂದ ಉಪಯುಕ್ತ ಗೋವುಗಳಿಗೆ ಆಹಾರದ ಕೊರತೆ ಎದುರಾ ಗುವುದರಿಂದ ಸಾವಿಗೂ ಕಾರಣವಾಗಬಹು ದೆಂದು ಉಚ್ಛ ನ್ಯಾಯಾಲಯದ ಆದೇಶ ವನ್ನು ಓದಿ ಹೇಳಿದರು. ಸಂಪೂರ್ಣ ಗೋ ಹತ್ಯೆ ನಿಷೇಧದಿಂದ ಕೃಷಿಕರು, ಗೋವು ಸಾಕುವವರು ಸಂಕಷ್ಟಕ್ಕೊಳಗಾಗುತ್ತಾರೆ. ನಿರುಪಯುಕ್ತ ಗೋವು ಸಾಕುವ ಖರ್ಚನ್ನು ಯಡಿಯೂರಪ್ಪ ನೀಡುತ್ತಾರಾ ಎಂದು ಪೂಜಾರಿ ಪ್ರಶ್ನಿಸಿದರು. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲು ಸಂಘ ಪರಿವಾರದ ಸೂಚನೆಗಳನ್ನು ಪಾಲಿಸುತ್ತಿರುವ ಸರಕಾರ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಇದನ್ನು ಶೀಘ್ರವೇ ಹಿಂದೆ ಪಡೆಯದಿದ್ದರೆ ಮಧ್ಯಪ್ರದೇಶ ಸರಕಾರಕ್ಕೆ ಉಚ್ಛ ನ್ಯಾಯಾಲಯದಲ್ಲಿ ಆದ ಗತಿಯೇ ರಾಜ್ಯ ಸರಕಾರಕ್ಕೂ ಆಗಲಿದೆ ಎಂದು ಭವಿಷ್ಯ ನುಡಿದರು. ಯಡಿಯೂರಪ್ಪರಿಗೆ ಕಾನೂನಿನ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಇದ್ದಿದ್ದರೆ ಅವರು ಇಂತಹ ಕಾಯ್ದೆಗೆ ಮುಂದಾಗುತ್ತಿರಲಿಲ್ಲ. ಅವರಿಗೆ ಕಾನೂನು ಗೊತ್ತಿದ್ದರೆ ಅದರ ವಿರುದ್ಧ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದ ಪೂಜಾರಿ ಯವರು, ಕಾನೂನಿನ ಬಗ್ಗೆ ಪತ್ರಕರ್ತರಿಗೂ, ಜನಸಾಮಾನ್ಯರಿಗೂ ಅರಿವು ಇರಬೇಕೆಂದು ವಿವರಿಸಿರುವುದಾಗಿ ತಮ್ಮ ಸುದೀರ್ಘ ಪಾಠದ ರಹಸ್ಯವನ್ನು ಹೊರಗೆಡಹಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಟಿ.ಕೆ. ಸುಧೀರ್, ಮಹಮ್ಮದ್ ಮಸೂದ್, ಅರುಣ್ ಕುವೆಲ್ಲೊ, ವಿಜಯ ಕುಮಾರ್ ಶೆಟ್ಟಿ, ಸುರೇಶ್ ಬಲ್ಲಾಳ್, ಕಳ್ಳಿಗೆ ತಾರನಾಥ ಶೆಟ್ಟಿ ಉಪಸ್ಥಿತರಿದ್ದರು.

-jayakirana
No comments:
Post a Comment