ಕಾಸರಗೋಡು: ಅತ್ಯಂತ ನಿಗೂಢ ರೀತಿಯಲ್ಲಿ ನಾಪತ್ತೆಯಾ ಗಿದ್ದ ನಗರದ ರಖಂ ಮೀನು ವ್ಯಾಪಾರಸ್ಥ, ಇಲ್ಲಿನ ನಾಯ ಮ್ಮಾರ್‌ಮೂಲೆ ನಿವಾಸಿ ಮಮ್ಮಞ ಯಾನೆ ಮುಹಮ್ಮದ್(42) ಅವರು ನಿನ್ನೆ ಸುರಕ್ಷಿತವಾಗಿ ಮನೆ ಸೇರಿದ್ದರು.
ನಿನ್ನೆ ಸಾಯಂಕಾಲ ಮೂರು ವರೆ ಗಂಟೆಗೆ ಅವರು ಮನೆ ತಲು ಪಿದಾಗ ಕಳೆದ ನಾಲ್ಕು ದಿನಗಳಿಂದ ಕಾಸರಗೋಡಿನಾದ್ಯಂತ ಕುತೂಹಲ ಕೆರಳಿಸಿದ್ದ ಪ್ರಕರಣಕ್ಕೆ ತೆರೆಬಿದ್ದಿದೆ. ಆದರೆ ಇವರು ನಾಪತ್ತೆಯಾದ ಬಗ್ಗೆ ಕಾರಣಗಳು ಇನ್ನೂ ನಿಗೂಢವಾಗಿದೆ.
ನಿನ್ನೆ ಸಾಯಂಕಾಲ ಬಾಡಿಗೆ ಆಟೋರಿಕ್ಷಾವನ್ನಿಳಿದು ಕುಂಟುತ್ತಾ ಮನೆ ಕಡೆಗೆ ನಡೆದು ಬಂದಿದ್ದ ಮಮ್ಮಞ ಶಾರೀರಿಕ ಹಾಗೂ ಮಾನ ಸಿಕವಾಗಿ ಬಹಳಷ್ಟು ಬಳಲಿದ್ದರು. ಬಾಯಿಯಿಂದ ಸರಿಯಾಗಿ ಮಾತು ಬರುತ್ತಿರಲಿಲ್ಲ. ಕೆಂಪಾದ ಕಣ್ಣಿನಿಂದ ಕಣ್ಣೀರಿಳಿಯುತ್ತಿತ್ತು. ದೇಹದಲ್ಲಿಡೀ ಜಜ್ಜಿದ ಗಾಯಗಳಿದ್ದವು. ಮುಖ ತೀವ್ರ ವಾಗಿ ಬಾತುಕೊಂಡಿತ್ತು. ಕಾಲುಗಳಲ್ಲಿ ಭಾರೀ ಗಾಯಗಳಿದ್ದು, ಕುಂಟುತ್ತಿದ್ದರು.
ಮನೆಗೆ ಬಂದ ಮಾಧ್ಯಮದವರ ಮುಂದೆ ಕ್ಷೀಣ ಸ್ವರದಿಂದ ಮಾತನಾ ಡಿದ ಮಮ್ಮಞ, ನನ್ನನೇನೂ ಕೇಳಬೇಡಿ, ನನಗೆ ಯಾರ ಮೇಲೂ ಆರೋಪವಿಲ್ಲ. ಮಕ್ಕಳ ಪುಣ್ಯದಿಂದಾಗಿ ನನ್ನ ಪ್ರಾಣ ಬಚಾವಾಯಿತಲ್ಲಾ, ಅಷ್ಟು ಸಾಕು. ನಾನು ಯಾರಲ್ಲೂ, ಏನನ್ನೂ ಹೇಳುವುದಿಲ್ಲ ಎಂದು ಗೋಗರೆದರು.
ಡಿವೈಎಸ್‌ಪಿ ನೇತೃತ್ವದ ಪೊಲೀಸರು ಇವರನ್ನು ಕಸ್ಟಡಿಗೆ ತೆಗೆದು ವಿಚಾರಣೆಗೆ ಒಳಪಡಿಸಿದಾಗ, ನಾನು ದೂರು ನೀಡುವುದಿಲ್ಲ. ದಯವಿಟ್ಟು ಬದುಕಲು ಬಿಡಿ ಎಂದು ಅಂಗಲಾಚಿ
ದರು. ಒತ್ತಡ ಹೇರಿದರೂ ಮಮ್ಮಞ ದೂರು ನೀಡಲು ತಯಾರಾಗಲಿಲ್ಲ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಮಂಗಳೂರಿನಿಂದ ದೂರವಾಣಿ: ನಿನ್ನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಂಗಳೂರಿನ ಯಾವುದೋ ಬೂತಿನಿಂದ ಮನೆಗೆ ದೂರವಾಣಿ ಕರೆ ಮಾಡಿದ ಮಮ್ಮಞ ತಾನು ಬದುಕುಳಿದು ಬಿಡುಗಡೆಯಾಗಿರುವು ದಾಗಿಯೂ, ಈ ಸ್ಥಳದ ಸ್ಪಷ್ಟ ಅರಿ ವಿಲ್ಲವೆಂದೂ, 2-3 ತಾಸುಗಳಲ್ಲಿ ಮನೆ ಸೇರುವುದಾಗಿಯೂ ಹೇಳಿ ರಿಸೀವರ್ ಇಟ್ಟಿದ್ದರು. ಮನೆ ಮಂದಿ ಆ ನಂಬರಿಗೆ ಕರೆ ಮಾಡಿದಾಗ ಅದು ಬಜ್ಪೆ ವಿಮಾನ ನಿಲ್ದಾಣಕ್ಕೆ ಮೂರು ಕಿ. ಮೀ. ಸಮೀಪದ ಅಂಗಡಿಯೊಂದರ ಕಾಯಿನ್‌ಬಾಕ್ಸ್ ಎಂದು ತಿಳಿದುಬಂತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿ ಪೊಲೀಸರು, ಊರವರು ಮಂಗಳೂರಿಗೆ ದೌಡಾಯಿಸಿದರೂ ಅಷ್ಟರಲ್ಲಿ ಮಮ್ಮಞ ಬಸ್ಸು ಮೂಲಕ ಕಾಸರಗೋಡಿಗೆ ಬಂದು ಅಲ್ಲಿಂದ ಆಟೋದಲ್ಲಿ ಮನೆಗೆ ತಲುಪಿದ್ದರು.
ಘಟನೆ ಹಿನ್ನೆಲೆ: ಮಾರ್ಚ್ ಐದರಂದು ಮಧ್ಯರಾತ್ರಿ ವೇಳೆ ಮಮ್ಮಞ ಲಕ್ಷಾಂತರ ರೂ. ಹಣದೊಂದಿಗೆ ರಾತ್ರಿ ವೇಳೆ ಬೈಕಿನಲ್ಲಿ ಮರಳಿ, ನಾಯಮ್ಮಾರ್‌ಮೂಲೆ ಮನೆ ಸಮೀಪ ಬೈಕ್‌ನಲ್ಲಿ ಕುಳಿತುಕೊಂಡಿ ದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ಬೈಕ್ ಉರುಳಿ ಬಿದ್ದಿದ್ದು, ಮಮ್ಮಞ ಚಪ್ಪಲಿ ಗಳು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದವು. ಮಮ್ಮಞ ಅವರನ್ನು ಕಾರಿನಲ್ಲಿ ಅಪರಿಸಿದ್ದವರು ಯಾರು? ಯಾತಕ್ಕಾಗಿ ಮತ್ತು ಎಲ್ಲಿಗೆ ಕರೆದುಕೊಂಡು ಹೋಗಿ ದ್ದರೆಂದು ಇನ್ನೂ ನಿಗೂಢವಾಗಿದೆ.
Subscribe to:
Post Comments (Atom)
No comments:
Post a Comment