ಕಾಸರಗೋಡು: ಚೆಂಬರಿಕ್ಕ ಹಾಗೂ ಮಂಗಳೂರು ಖಾಝಿಯಾ ಗಿದ್ದ ಸಿ.ಎಂ. ಅಬ್ದುಲ್ಲ ಮೌಲವಿ ಯವರ ಮರಣದ ತನಿಖೆ ಕೈಗೆತ್ತಿ ಕೊಂಡಿರುವ ರಾಜ್ಯ ಕ್ರೈಂ ಬ್ರಾಂಚ್ ತಂಡವು ತನಿಖೆಯನ್ನು ಕೈಗೆತ್ತಿಕೊಂ ಡಿದೆ. ರಾಜ್ಯ ಕ್ರೈಂ ಬ್ರಾಂಚ್ ತಂಡವು ಖಾಝಿಯ ಕಾರು ಚಾಲಕನನ್ನು ಕಸ್ಟಡಿಗೆ ತೆಗೆದುಕೊಂಡು ಮತ್ತೆ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಾರು ಚಾಲಕನಾದ ಅದೂರು ನಿವಾಸಿ ಹಸೈನಾರ್ ನೀಡಿದ್ದ ಹೇಳಿಕೆಯಲ್ಲಿ ತದ್ವಿರುದ್ದ ಮಾಹಿತಿಗಳು ಇರುವುದನ್ನು ಗಮನಿಸಿದ ಕ್ರೈಂ ಬ್ರಾಂಚ್ ದಳ ಈತನನ್ನು ಮರುವಿಚಾರಣೆಗೆ ಒಳಪಡಿ ಸಿದೆ. ಈ ಬಗೆಗಿನ ಮಾಹಿತಿ ನೀಡಲು ನಿರಾಕರಿಸಿರುವ ತಂಡದ ಅಧಿಕೃತರು ಖಾಝಿ ಮರಣದ ಎಲ್ಲಾ ನಿಗೂಢತೆಗಳನ್ನು ಒಂದೆರಡು ದಿನಗಳೊಳಗೆ ಭೇದಿಸುವ ಭರವಸೆ ನೀಡಿದ್ದಾರೆ. ಸದ್ಯ ಖಾಝಿಯ ಮನೆಯಿರುವ ಚೆಂಬರಿಕ್ಕ ಪ್ರದೇಶದ ಮೊಬೈಲ್ ಟವರ್‌ಗಳನ್ನು ಕೇಂದ್ರೀಕರಿಸಿ ತನಿಖೆ ಸಾಗಿದೆ. ಈ ಮಧ್ಯೆ ಕ್ರೈಂ ಬ್ರಾಂಚ್‌ನ ಐಜಿ ಆರ್ ಶ್ರೀ ಲೇಖಾ ಅವರು ಶೀಘ್ರದಲ್ಲೇ ಮತ್ತೆ ಕಾಸರಗೋಡಿಗೆ ಬರಲಿರುವುದಾಗಿ ತಿಳಿದು ಬಂದಿದೆ.
ಕೊಠಡಿ ಏಲಂ ವಿವಾದ: ಮಾತಿನ ಚಕಮಕಿ
ಮಂಗಳೂರು: ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಕೊಠಡಿಗಳನ್ನು ಏಲಂ ಮಾಡುವ ವೇಳೆ ಜನರು ನಗರಸಭೆಯಲ್ಲಿ ಮಾತಿನ ಚಕಮಕಿ ನಡೆಸಿದ್ದಾರೆ.
ಸಿಟಿ ಬಸ್ ನಿಲ್ದಾಣದಲ್ಲಿ ನಾಲ್ಕು ಕೋಣೆಗಳಿಗೆ ಮಾತ್ರ ನಿನ್ನೆ ಏಲಂ ಕರೆಯಲಾಗಿತ್ತು. ಅದರಂತೆ 1,3,6 ಸಂಖ್ಯೆಯ ಕೊಠಡಿಗಳಿಗೆ ನಿನ್ನೆ ಬಿಡ್ ಸಲ್ಲಿಸಿದ್ದರು. ಆದರೆ 3 ನೇ ಸಂಖ್ಯೆಯ ಕೊಠಡಿಗೆ ಬಿಡ್ ಕಟ್ಟದಂತೆ ಹೇಳಿದ್ದು, ಇದರಿಂದ ರೊಚ್ಚಿಗೆದ್ದ ಜನರು ನಗರಸಭೆಯ ಸದಸ್ಯರ ಜತೆ ಮಾತಿನ ಚಕಮಕಿ ನಡೆಸಿದರು. ನಿನ್ನೆ ನಡೆದ ಏಲಂನಲ್ಲಿ 1ನೇ ಕೊಠಡಿ 10 ಸಾವಿರ ರೂ, 6 ನೇ ಕೊಠಡಿ 12,300 ರೂ. ಮತ್ತು 7ನೇ ಕೊಠಡಿ 11,200ರೂ.ಗೆ ಏಲಂನಲ್ಲಿ ನೀಡಲಾಯಿತು. ಏಲಂ ನಡೆಸುವ ವೇಳೆ ಪೌರಾಯುಕ್ತರು ಗೈರು ಹಾಜರಾಗಿರುವುದು ಮತ್ತು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರ ಆರು ಮಂದಿ ಸದಸ್ಯರು ಮಾತ್ರ ಭಾಗವಹಿಸಿದ್ದ ಬಿಡ್‌ದಾರರು ಭಾಗವಹಿಸಿದ್ದರು.
ನಗರ ಸಭಾ ಸದಸ್ಯರ ಮೇಲೆ ಹಲ್ಲೆ ಯತ್ನ
ಉಡುಪಿ: ಇಲ್ಲಿನ ಬಸ್ಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಗರ ಸಭೆಯ ನಾಲ್ಕು ಅಂಗಡಿ ಕೋಣೆಗಳ ಏಲಂಗೆ ಸಾರ್ವಜನಿಕರು ಮತ್ತು ಪತ್ರಕರ್ತರಿಗೆ ಅವಕಾಶ ನೀಡದೆ ಇರುವ ಘಟನೆ ನಡೆದಿದೆ. ನಗರಸಭೆ ಸದಸ್ಯ ನವೀನ್ ಭಂಡಾರಿ, ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಮುಂತಾದವರೊಂದಿಗೆ ಸಾರ್ವಜನಿಕರು ಮಾತಿನ ಚಕಮಕಿ ನಡೆಸಿದರು. ಒಂದು ಹಂತದಲ್ಲಿ ವ್ಯಕ್ತಿಯೊಬ್ಬರು ಹಲ್ಲೆಗೂ ಮುಂದಾದರು. 1,3,6 ಮತ್ತು 7 ನಂಬ್ರದ ಅಂಗಡಿ ಕೋಣೆಗಳಿಗೆ ಏಲಂ ಕರೆಯಲಾಗಿತ್ತು. ಈ ನಡುವೆ 3ನೇ ಸಂಖ್ಯೆಯ ಅಂಗಡಿ ಕೋಣೆ ಮೊದಲೇ ಫಿಕ್ಸಿಂಗ್ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಿದ್ಯಾರ್ಥಿಗೆ ಹಲ್ಲೆ
ಪುತ್ತೂರು: ಶಾಲಾ ವಠಾರದಲ್ಲಿ ಬಿದ್ದು ಸಿಕ್ಕಿದ ಮೊಬೈಲ್ ಸೆಟ್ ಒಂದನ್ನು ತೆಗೆದುಕೊಂಡು ಹೋದನೆಂಬ ಕಾರಣಕ್ಕೆ ವಿದ್ಯಾರ್ಥಿಯೋರ್ವನಿಗೆ ಇಬ್ಬರು ಸೇರಿ ಹಲ್ಲೆ ನಡೆಸಿದ ಘಟನೆ ನಿನ್ನೆ ಕುರಿಯ ಎಂಬಲ್ಲಿ ನಡೆದಿದೆ. ಕುರಿಯ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಹಂಝ ಎಂಬವರ ಪುತ್ರ ಉಮೈದ್ (12) ಹಲ್ಲೆಗೊಳಗಾದ ವಿದ್ಯಾರ್ಥಿ. ಸ್ಥಳೀಯರಾದ ವಸಂತ ಮತ್ತು ನಾರಾಯಣ ಎಂಬವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಉಮೈದ್ ಸಹೋದರನಾದ ಕುರಿಯ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಇರ್ಷಾದ್ ಎಂಬಾತನಿಗೆ ಸೋಮವಾರ ಶಾಲಾ ವಠಾರದಲ್ಲಿ ಮೊಬೈಲ್ ಸೆಟ್ ಒಂದು ಸಿಕ್ಕಿ ಬಿದ್ದಿದ್ದು ಅದನ್ನು ಆತ ಮನೆಗೆ ಕೊಂಡೊಯ್ದಿದ್ದ. ಅಂದು ರಾತ್ರಿ ಇರ್ಷಾದ್ ಮನೆಗೆ ತೆರಳಿದ ವಸಂತ್ ಮತ್ತು ನಾರಾಯಣ ಎಂಬವರು ಮೊಬೈಲ್ ಸೆಟ್ ಪಡೆದುಕೊಂಡು ಆತನ ಸಹೋದರ ಉಮೈದ್‌ಗೆ ಹಲ್ಲೆ ನಡೆಸಿದ್ದರು. ಗುರುವಾರ ವಸಂತ ಮತ್ತು ನಾರಾಯಣ ಶಾಲಾ ವಠಾರಕ್ಕೆ ಬಂದು ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ವಿದ್ಯಾರ್ಥಿನಿ ನಾಪತ್ತೆ
ಸುಳ್ಯ : ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರೇವತಿ ಯಾನೆ ಸುಮನ (17) ಅವಳು ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ. ತನ್ನ ಎರಡು ಜೊತೆ ಬಟ್ಟೆ ಹಾಗೂ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿದ್ದಾಳೆಂದು ತಿಳಿದು ಬಂದಿದೆ. ಈ ಬಗ್ಗೆ ಯುವತಿಯ ತಂದೆ ಪೆರುವಾಜೆ ಮನೆ ತಂಗಮೂಲೆ ನಿವಾಸಿ ಶಿವಪ್ಪ ಗೌಡರವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಕ್ ಡಿಕ್ಕಿ: ಪಾದಚಾರಿ ಸಾವು
ಮಂಗಳೂರು: ತಲಪಾಡಿ ಉಚ್ಚಿಲ ಸಮೀಪ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಮಂಜೇಶ್ವರ ಹೊಸಬೆಟ್ಟು ನಿವಾಸಿ ಸುಭಾಷ್ (35) ಮೃತಪಟ್ಟವರು. ನಿನ್ನೆ ಸಂಜೆ ವೇಳೆ ಕೆಲಸ ಮುಗಿಸಿ ಮನೆ ಕಡೆಗೆ ಹಿಂತಿರುಗುತ್ತಿದ್ದ ಸಂದರ್ಭ ಉಚ್ಚಿಲ ಸಮೀಪ ಬಸ್‌ಗೆ ಕಾಯುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಇವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳಿಬ್ಬರು ನಾಪತ್ತೆ
ಶಿರ್ವ: ಕಾಲೇಜು ವಿದ್ಯಾರ್ಥಿಗಳಿಬ್ಬರು ಪರೀಕ್ಷೆಗೆಂದು ಮನೆಯಿಂದ ಹೊರಟವರು ನಾಪತ್ತೆ ಆಗಿದ್ದಾರೆ ಎಂದು ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿಯ ಶಿರ್ವ ಗ್ರಾಮದ ಕುರ್ಕಾಲು ಅರಸಿನಕಟ್ಟೆ ಶಾರದ ನಿವಾಸ ಮನೆಯ ಎ. ಎಮ್. ಸನಿಲ್‌ರವರ ಮಗ ಶಶಾಂಕ್ (16) ಮತ್ತು ಶಿರ್ವ ಹಿಂದೂ ಶಾಲೆಯ ಮನೆಯ ಪಕ್ಕದ ನಿವಾಸಿ ರಾಡ್ನಿ ಡಯಾಗೂ (16) ಸೈಂಟ್ ಮೇರಿಸ್ ಕಾಲೇಜ್‌ಗೆ ಕೊನೆಯ ಪರೀಕ್ಷೆ ಬರೆಯಲೆಂದು ಹೋಗಿದ್ದವರು ನಾಪತ್ತೆಯಾಗಿದ್ದಾರೆ ಎಂದು ಶಶಾಂಕ್‌ನ ತಾಯಿ ಸುಮತಿ ಸನಿಲ್ ಗುರುವಾರ ಶಿರ್ವ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಯುವಕ ನಾಪತ್ತೆ
ಸುಳ್ಯ: ಪೆರುವಾಜೆ ಗ್ರಾಮದ ಬಾಬು ಭಂಡಾರಿಯವರ ಮಗ ಭರತೇಶ್ (21) ನಾಪತ್ತೆಯಾಗಿದ್ದಾನೆಂದು ಆತನ ತಂದೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಭರತೇಶ್ ಬೆಳ್ಳಾರೆಯ ಸೆಲೂನ್ ಅಂಗಡಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಗನ್ ಕಳವು
ಪಡುಬಿದ್ರಿ: ಲ್ಯಾಂಕೋ ಕಂಪೆನಿಯ ಕಾವಲುಗಾರನ ಲೈಸೆನ್ಸ್ ಹೊಂದಿದ ಎಸ್.ಬಿ. ಎಮ್.ಎಲ್. ಗನ್ ಕಳವುಗೊಂಡ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಮಂದವಪುರ ಒಕ್ಕಲು ಮನೆ ನಿವಾಸಿ ಎನ್. ಎನ್. ಕಾರ್ಯಪ್ಪ ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ನಂದಿಕೂರು ಬಸ್ಸು ನಿಲ್ದಾಣ ಬದಿಯಿಂದ ಗನ್ ಕಳವಾಗಿದೆ.
Subscribe to:
Post Comments (Atom)
No comments:
Post a Comment