VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 16, 2010

ಉಡುಪಿ: ಮಗಳ ಮೇಲೆ ಕಾಮುಕ ತಂದೆಯ ಅತ್ಯಾಚಾರ: ಆಕ್ರೋಶಿತ ಸಾರ್ವಜನಿಕರಿಂದ ಹಲ್ಲೆ; ಆರೋಪಿ ಪೊಲೀಸರ ವಶಕ್ಕೆ


ಉಡುಪಿ, ಮಾ.೧೫: ಕಾಮುಕ ತಂದೆಯೊಬ್ಬ ಕಳೆದೊಂದು ವರ್ಷದಿಂದ ತನ್ನ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಪೈಶಾಚಿಕ ಘಟನೆಯೊಂದು ಇಲ್ಲಿಗೆ ಸಮೀಪದ ಕಡೆಕಾರಿನಿಂದ ವರದಿಯಾಗಿದೆ.

ಈ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಆಕ್ರೋ ಶಿತರಾದ ಸಾರ್ವಜನಿಕರು ಕಾಮುಕ ತಂದೆ ಯನ್ನು ಹಿಗ್ಗಾಮುಗ್ಗ ಥಳಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇದೀಗ ಆರೋಪಿ ತಂದೆ ಮಲ್ಪೆ ಪೊಲೀಸರ ವಶದಲ್ಲಿದ್ದಾನೆ.

ಕಡೆಕಾರು ಪೇಟೆಯಲ್ಲಿ ಕಳೆದ ಹಲವು ವರ್ಷಗಳಿಂದ ಸೆಲೂನೊಂದನ್ನು ನಡೆಸುತ್ತಿರುವ ಶೇಷಪ್ಪ (೪೪) ಎಂಬಾತನೇ ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿ. ಆತ ತನ್ನ ಎರಡನೆ ಹೆಂಡತಿ ಅನಿತಾರಿಂದ ಹುಟ್ಟಿದ ೧೫ರ ಹರೆಯದ ಹಿರಿಯ ಮಗಳ ಮೇಲೆ ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ.

ಶೇಷಪ್ಪನಿಗೆ ಮೊದಲೊಂದು ಮದುವೆ ಯಾಗಿದ್ದು, ಆಕೆಯಿಂದ ಇಬ್ಬರು ಮಕ್ಕಳನ್ನು ಪಡೆದಿದ್ದಾನೆ. ಮೊದಲನೆ ಹೆಂಡತಿಯಿಂದ ದೂರವಾದ ಬಳಿಕ ಅನಿತಾಳನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಅನಿತಾಳಿಂದ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ನನ್ನು ಪಡೆದಿರುವ ಶೇಷಪ್ಪ ಇದೀಗ ಕಡೆಕಾರು ಹೈಸ್ಕೂಲ್‌ನಲ್ಲಿ ಎಸ್ಸೆಸೆಲ್ಸಿಯಲ್ಲಿ ಕಲಿಯುತ್ತಿರುವ ಹಿರಿಯ ಮಗಳನ್ನು ಕಳೆದ ಒಂದು ವರ್ಷದಿಂದ ತನ್ನ ಲೈಂಗಿಕ ತೃಷೆ ತೀರಿಸಿ ಕೊಳ್ಳಲು ಬಳಸುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ತಾಯಿ ಸೇರಿದಂತೆ ಯಾರಿಗೂ ತಿಳಿಸದಂತೆ ಆಣೆ ಮಾಡಿಸಿಕೊಂಡಿದ್ದಲ್ಲದೇ ಜೀವ ಬೆದರಿಕೆಯನ್ನು ಹಾಕಿದ್ದ ಎಂದು ಮಗಳು ತಿಳಿಸಿದ್ದಾಳೆ.

ಒಂದೇ ಮನೆಯಲ್ಲಿದ್ದರೂ, ತಾಯಿಗೆ ಈ ಬಗ್ಗೆ ಇತ್ತೀಚೆಗಷ್ಟೇ ಸಂಶಯ ಮೂಡಲಾರಂಭಿ ಸಿತ್ತು. ಇತ್ತೀಚೆಗೆ ಹೆಂಡತಿಯನ್ನು ರಾತ್ರಿ ಯಕ್ಷಗಾನಕ್ಕೆಂದು ಕರೆದೊಯ್ದ ಶೇಷಪ್ಪ ಆಕೆ ಯನ್ನು ಅಲ್ಲೇ ಬಿಟ್ಟು ಗೊತ್ತಾಗದಂತೆ ಮನೆಗೆ ಮರಳಿದ್ದ. ಇದರಿಂದ ಸಂಶಯಗೊಂಡ ಅನಿತಾ, ಮನೆಗೆ ಬಂದು ಮಗಳ ಬಳಿ ವಿಚಾ ರಿಸಿದಾಗ ಆಕೆ ಕಾಮುಕ ತಂದೆ ಎಸಗುತ್ತಿದ್ದ ಈ ಕೃತ್ಯದ ಬಗ್ಗೆ ತಿಳಿಸಿದಳು ಎನ್ನಲಾಗಿದೆ.

ಈ ಸುದ್ದಿಯಿಂದ ಆಘಾತಗೊಂಡ ತಾಯಿ, ಅಕ್ಕಪಕ್ಕದವರೊಂದಿಗೆ ಗಂಡನನ್ನು ತಾನು ಕೊಂದೇ ಬಿಡುವುದಾಗಿ ತಿಳಿಸಿದ್ದು, ಇದರಿಂದ ಸುದ್ದಿ ಬಹಿರಂಗಗೊಂಡು, ಇಂದು ಆಕ್ರೋಶಿತ ಜನರು ಆತನಿದ್ದ ಸೆಲೂನ್‌ಗೆ ನುಗ್ಗಿ ಹಿಗ್ಗಾಮುಗ್ಗ ಥಳಿಸಿದರೆನ್ನಲಾಗಿದೆ. ಆರಂಭದಲ್ಲಿ ವಿಷಯ ಬಾಯಿ ಬಿಡದ ಆತ, ಜೋರಾದ ಏಟು ಬಿದ್ದ ಬಳಿಕ ಸತ್ಯವನ್ನು ಒಪ್ಪಿಕೊಂಡ. ಅಷ್ಟರಲ್ಲಿ ಸುದ್ದಿ ತಿಳಿದ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ದೂರು ದಾಖಲಿಸಿಕೊಂಡಿರುವ ಮಲ್ಪೆ ಪೊಲೀಸರು ವಿಚಾರ ಣೆಯನ್ನು ತೀವ್ರ ಗೊಳಿಸಿದ್ದಾರೆ. ಉಡುಪಿಯ ವೃತ್ತ ನಿರೀಕ್ಷಕ ಗಿರೀಶ್ ಎಸ್.ವಿ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

No comments: