VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 11, 2010

ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ


ಮಂಗಳೂರು, ಮಾ.೧೦: ವಿದ್ಯುತ್ ಟ್ರಾನ್ಸ್‌ಫಾರ್ಮರನ್ನು ಸ್ಪರ್ಶಿಸಿದ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉಳ್ಳಾಲದಲ್ಲಿ ನಡೆದಿದ್ದು, ಮೆಸ್ಕಾಂನ ನಿರ್ಲಕ್ಷವೇ ಘಟನೆಗೆ ಕಾರಣವೆಂದು ಆರೋಪಿಸಿದ ಸಾರ್ವಜನಿಕರು ಉಳ್ಳಾಲ ಪುರಸಭೆಗೆ ಮುತ್ತಿಗೆ ಹಾಕಿದರು.

ಮುಕ್ಕಚೇರಿ ಹಿಲರಿ ನಗರದ ಮುಹಮ್ಮದ್ ಶರೀಫ್(೧೯) ಮೃತ ದುರ್ದೈವಿ. ಈತ ಆಕಸ್ಮಿಕವಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಪರ್ಶಿಸಿದ್ದುದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಘಟನೆಯ ವಿವರ: ಇಸ್ಮಾಯೀಲ್ ಶಮೀರ್ ಮತ್ತು ಮುಹಮ್ಮದ್ ಶರೀಫ್ ಎಂಬವರು ಉಳ್ಳಾಲ ದರ್ಗಾ ಬಳಿಯ ಮನೆಯೊಂದರ ಬಳಿ ಕೂಲಿ ಕೆಲಸದಲ್ಲಿ ನಿರತರಾಗಿದ್ದರು. ಮುಹಮ್ಮದ್ ಶರೀಫ್ ಇಂದು ಬೆಳಗ್ಗೆ ಅಲ್ಲಿಯೇ ಕೈಗೆಟಕು ವಂತಿದ್ದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದು, ಈ ಸಂದರ್ಭ ವಿದ್ಯುತ್ ಪ್ರವಹಿಸಿ ಆಘಾತಕ್ಕೀಡಾದ ಈತನನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದ ಎನ್ನಲಾಗಿದೆ.

ಪುರಸಭೆಗೆ ಮುತ್ತಿಗೆ: ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಇಂದು ಮಧ್ಯಾಹ್ನ ಉಳ್ಳಾಲ ಪುರಸಭೆಗೆ ಮುತ್ತಿಗೆ ಹಾಕಿದ್ದು, ಈ ಸಂದರ್ಭ ಕೌನ್ಸಿಲರ್‌ರೊಬ್ಬರ ಮೇಲೆ ಹಲ್ಲೆಗೆ ಮುಂದಾದರು ಹಾಗೂ ತಡೆಯಲು ಬಂದ ನೌಕರ ಪ್ರೇಮಾನಂದ ಎಂಬವ ರಿಗೆ ಹಲ್ಲೆ ನಡೆಸಿದರು ಎನ್ನಲಾಗಿದೆ.

ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಸದಾನಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪುರಸಭೆಗೆ ಮುತ್ತಿಗೆ ಹಾಕಿದ ೨೨ ಮಂದಿ ಯನ್ನು ಬಂಧಿಸಿದ್ದಾರೆ ಹಾಗೂ ಕೌನ್ಸಿಲರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ರಿಕ್ಷಾ ಚಾಲಕ ತಾರನಾಥ ಎಂಬಾತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಯುವಕನ ಮೃತ್ಯು ಹಾಗೂ ಪುರಸಭೆಗೆ ಮುತ್ತಿಗೆ ಘಟನೆಗಳಿಂದ ಉಳ್ಳಾಲದಲ್ಲಿ ಕೆಲಕಾಲ ಅಶಾಂತಿಯ ವಾತಾವರಣ ಸೃಷ್ಟಿಯಾಯಿತು. ಸ್ಥಳಕ್ಕೆ ಧಾವಿಸಿದ ಪಣಂಬೂರು ಡಿವೈ‌ಎಸ್‌ಪಿ ಗಿರೀಶ್ ಮತ್ತು ಉಳ್ಳಾಲ ವೃತ್ತನಿರೀಕ್ಷ ಕರು ಹಾಗೂ ಸಿಬ್ಬಂದಿಗಳು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಮೂರು ಪ್ರಕರಣ ದಾಖಲು: ಶರೀಫ್ ಮೃತಪಟ್ಟ ಘಟನೆಗೆ ಸಂಬಂಧಿಸಿ ಅವರ ಜೊತೆ ಕೆಲಸ ಮಾಡುತ್ತಿದ್ದ ಇಸ್ಮಾಯೀಲ್ ಶಮೀರ್ ಎಂಬವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು, ಮೆಸ್ಕಾಂ ಮತ್ತು ಪುರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಚಂದ್ರಹಾಸ ಎಂಬವರ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪ್ರತಿಭಟನೆಗೆ ಕಂಡುಕೊಂಡ ದಾರಿ ಸರಿಯಲ್ಲ: ಈ ಕುರಿತು ಪತ್ರಿಕೆ ಯೊಂದಿಗೆ ಮಾತನಾಡಿದ ಉಳ್ಳಾಲ ಪುರಸಭೆಯ ಅಧ್ಯಕ್ಷ ಯು.ಎ. ಇಸ್ಮಾಯೀಲ್, ಮೆಸ್ಕಾಂನ ನಿರ್ಲಕ್ಷ ದಿಂದ ಈ ದುರ್ಘಟನೆ ಸಂಭವಿಸಿದೆ. ಆದರೆ ಬಳಿಕ ನಡೆದ ಬೆಳವಣಿಗೆ ವೈಯಕ್ತಿಕವಾಗಿ ತನಗೆ ನೋವನ್ನುಂಟು ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅನ್ಯಾಯವನ್ನು ಪ್ರತಿಭಟಿ ಸುವ ಹಕ್ಕಿದೆ. ಆದರೆ, ಇಲ್ಲಿ ಪುರಸಭೆಗೆ ಮುತ್ತಿಗೆ ಹಾಕಿದ ಕೆಲವು ಯುವಕರು ಪ್ರತಿಭಟನೆಗೆ ಕಂಡುಕೊಂಡ ದಾರಿ ಸರಿಯಾಗಿರಲಿಲ್ಲ” ಎಂದು ತಿಳಿಸಿದ್ದಾರೆ.

No comments: