VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 11, 2010

ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ


ತಾನು ಮಾಡಿರುವುದು 'ಸ್ವಾಮಿ ಸೇವೆ', ಇದನ್ನು ಮಾಧ್ಯಮಗಳು ಅತಿರೇಕವಾಗಿ ಬಿಂಬಿಸಿ ಪ್ರಸಾರ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಕಾಮಿಸ್ವಾಮಿ ಹಗರಣ ಖ್ಯಾತಿ ನಟಿ ರಂಜಿತಾ, ಪರಮಹಂಸ ನಿತ್ಯಾನಂದ ಸ್ವಾಮಿಗೆ ಮಸಾಜ್ ಮಾಡುತ್ತಿರುವ ಹೊಸ ಚಿತ್ರಗಳು ಬಹಿರಂಗಗೊಂಡಿದೆ.

ನಿತ್ಯಾನಂದ ಸ್ವಾಮಿಗೆ ಮಸಾಜ್ ಮಾಡುತ್ತಿರುವ ಈ ಹೊಸ ದೃಶ್ಯಗಳನ್ನು ತಮಿಳು ಟೀವಿ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದು, ಹಲವು ಪತ್ರಿಕೆಗಳು ಕೂಡ ಚಿತ್ರಗಳನ್ನು ಪ್ರಕಟಿಸಿವೆ. ನಕ್ಕೀರನ್ ಪಾಕ್ಷಿಕದ ವೆಬ್‌ಸೈಟ್ ಮತ್ತು ಯೂಟ್ಯೂಬ್‌ಗಳಲ್ಲೂ ಹರಿದಾಡುತ್ತಿರುವ ಇದು ತಮಿಳುನಾಡಿನಾದ್ಯಂತ ಮತ್ತಷ್ಟು ಕೋಲಾಹಲ ಸೃಷ್ಟಿಗೆ ಕಾರಣವಾಗುತ್ತಿದೆ.

ಇಲ್ಲಿ ರಂಜಿತಾ ಎಂದು ಹೇಳಲಾಗಿರುವ ಮಹಿಳೆ ಸ್ವಾಮಿಯ ಅಂಗಿಯನ್ನು ಅರ್ಧದಷ್ಟು ಬಿಚ್ಚಿ, ಎಣ್ಣೆ ಹಚ್ಚಿ ಮಸಾಜ್ ಮಾಡುವ ದೃಶ್ಯಗಳಿವೆ. ಆದರೆ ಇಲ್ಲಿ ಯಾವುದೇ ಅಶ್ಲೀಲ ಎಂದು ಹೇಳಬಹುದಾದ ದೃಶ್ಯಗಳಿಲ್ಲ. ಸ್ವಾಮಿಗೆ ಸಂಪೂರ್ಣ ಮಸಾಜ್ ಮಾಡಿದ ನಂತರ ರಂಜಿತಾ ಬ್ಯಾಗ್ ಹೆಗಲಿಗೇರಿಸಿಕೊಂಡು ವಾಪಸ್ ಹೋಗುವ ದೃಶ್ಯ ವೀಡಿಯೋದಲ್ಲಿದೆ.

ಭಾರೀ ಸಾಧಕ ನಿತ್ಯಾನಂದ....
ಹೌದು, ಕಳಂಕಿತ ಸ್ವಾಮಿಯ ತಿರುವಣ್ಣಾಮಲೈ ಎಂಬಲ್ಲಿರುವ ಚಿಕ್ಕಪ್ಪ ಕುಮಾರಸ್ವಾಮಿಯವರ ಪ್ರಕಾರ ನಿತ್ಯಾನಂದ ಭಾರೀ ಸಾಧಕನಂತೆ. 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ಈ ವಿವರಗಳನ್ನು ಪ್ರಕಟಿಸಿದೆ.

ಪೂರ್ವಾಶ್ರಮದಲ್ಲಿ ರಾಜಶೇಖರನ್ ಆಗಿದ್ದ ನಿತ್ಯಾನಂದ ಸ್ವಾಮಿಗೆ ಬಾಲ್ಯದಲ್ಲಿಯೇ ಆಧ್ಯಾತ್ಮದತ್ತ ವಿಪರೀತ ಒಲವಿತ್ತು. ಕೇವಲ 10 ವರ್ಷದವನಾಗಿದ್ದಾಗಲೇ ಜ್ಯೋತಿಷಿಯೊಬ್ಬರು, ಈತ ಮುಂದೊಂದು ದಿನ ಸನ್ಯಾಸಿಯಾಗುತ್ತಾನೆ ಎಂದು ಭವಿಷ್ಯ ನುಡಿದಾಗಲೂ ಹೆತ್ತವರು ತಲೆಕೆಡಿಸಿಕೊಂಡಿರಲಿಲ್ಲ ಎಂದು ಕುಮಾರಸ್ವಾಮಿ ವಿವರಣೆ ನೀಡುತ್ತಾರೆ.

ಈಗ ಸ್ವಾಮಿಯಾಗಿರುವ ರಾಜಶೇಖರನ್ ತಂದೆ ಅರುಣಾಚಲಂ ತಿರುವಣ್ಣಾಮಲೈಯಲ್ಲೇ ಒಂದು ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಮಗ ಹತ್ತನೇ ತರಗತಿಯನ್ನು ಮುಗಿಸಿದ ಬಳಿಕ ಡಿಪ್ಲೋಮಾ ಓದಿಸುವ ಬಯಕೆ ಅವರದ್ದಾಗಿತ್ತು. ಆದರೆ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡಿದ್ದ ಈತ ಯಂತ್ರ-ಮಂತ್ರಗಳ ಮೊರೆ ಹೋಗಿದ್ದ. ಇದು ಅರುಣಾಚಲಂ ಅರಿವಿಗೆ ಬಂದಿರಲಿಲ್ಲ ಎನ್ನುವುದು ಸ್ವಾಮಿ ಚಿಕ್ಕಪ್ಪನ ಅನಿಸಿಕೆ.

ಯೋಗದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ನಿತ್ಯಾನಂದ ದೇವಿ ಭಕ್ತರಾಗಿದ್ದರು. ಕುಪ್ಪುಮ್ಮಾಳ್ ಎಂಬ ಮಹಿಳೆಯಿಂದ ದೇವಿಯ ಉಪಾಸನಾ ದೀಕ್ಷೆಯನ್ನೂ ಪಡೆದಿದ್ದ ನಿತ್ಯಾನಂದ ಯೋಗಗುರು ರಘುಪತಿ ಎಂಬವರಿಂದ ಯೋಗ ಕಲಿತಿದ್ದ.

1995ರಲ್ಲಿ ಚೆನ್ನೈಗೆ ಬಂದ ಬಾಲಕ ರಾಜಶೇಖರನ್ ಆಟೋ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಬಳಿಕ ಸನ್ಯಾಸತ್ವ ತೀವ್ರವಾಗಿ ರಾಮಕೃಷ್ಣಾಶ್ರಮಕ್ಕೆ ಸೆಳೆದಿತ್ತು. ಮನೆಯವರು ತೀವ್ರವಾಗಿ ವಿರೋಧಿಸಿದರೂ ವಿರಕ್ತಿಯ ಹಾದಿಗೆ ಹೋಗಿದ್ದ ರಾಜಶೇಖರನ್, ಹಿಮಾಲಯದಲ್ಲೂ ತಪಸ್ಸು ಮಾಡಿದ್ದ.

ಬಳಿಕ ಬೆಂಗಳೂರಿಗೆ ವಾಪಸಾಗಿ ಆಶ್ರಮ ತೆರೆದು, ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದರು. ಸಾವಿರಾರು-ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದ. ಈ ಹಂತದಲ್ಲಿ ವೈಭೋಗದಲ್ಲಿ ಮೆರೆದಾಡಿದ ಸ್ವಾಮಿಗೆ ಲೌಕಿಕ ಜೀವನದತ್ತ ಮನಸ್ಸು ವಾಲಿರಬಹುದು. ಆದರೂ ನಮಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ನಿತ್ಯಾನಂದನ ಚಿಕ್ಕಪ್ಪ ಕುಮಾರಸ್ವಾಮಿ ವಿವರಣೆ ನೀಡಿದ್ದಾರೆ.

ಕುಂಭಮೇಳಕ್ಕೆ ಪ್ರವೇಶವಿಲ್ಲ...
ವಾರಣಾಸಿಯಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪ್ರತಿಷ್ಠಿತ ಧಾರ್ಮಿಕ ಗುರುಗಳಿಗೆಂದು ಮೀಸಲಾಗಿಡುವ ಸ್ಥಳವನ್ನು ಈ ಬಾರಿ ಕಳಂಕಿತ ಸ್ವಾಮಿ ನಿತ್ಯಾನಂದರಿಗೆ ನೀಡದೇ ಇರಲು ಕುಂಭಮೇಳ ಆಡಳಿತ ಮಂಡಳಿ ನಿರ್ಧರಿಸಿದೆ.

ಪರಮಹಂಸ ನಿತ್ಯಾನಂದ ಸ್ವಾಮಿಯವರಿಗೆ ನೀಡಲು ಉದ್ದೇಶಿಸಿದ್ದ ಸ್ಥಳವನ್ನು ನಿರಾಕರಿಸಲು ನಿರ್ಧರಿಸಲಾಗಿದೆ. ಹಾಗಾಗಿ ಅವರು ಇಲ್ಲಿ ಬಂದು ಧಾರ್ಮಿಕ ಕಾರ್ಯಗಳನ್ನು ನಡೆಸುವಂತಿಲ್ಲ ಎಂದು ಕುಂಭ ಮೇಳ ಆಡಳಿತ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕುಂಭಮೇಳದಲ್ಲಿದ್ದಾರೆ: ಸ್ವಾಮಿ ವಕೀಲ
ನಿತ್ಯಾನಂದ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ಆಪಾದನೆಗಳನ್ನು ತಳ್ಳಿ ಹಾಕಿರುವ ಅವರ ವಕೀಲ ಎಂ. ಶ್ರೀಧರ್, 'ನನ್ನ ಕಕ್ಷಿದಾರ ಪ್ರಸಕ್ತ ವಾರಣಾಸಿಯ ಕುಂಭಮೇಳದಲ್ಲಿದ್ದಾರೆ. ಮಾಧ್ಯಮಗಳು ಸ್ವಾಮಿ ವಿರುದ್ಧ ಮಾಡಿರುವ ಆರೋಪಗಳು ಕಪೋಲಕಲ್ಪಿತ ಮಾತ್ರ, ಈ ಕುರಿತು ಯಾವುದೇ ದಾಖಲೆಗಳಿಲ್ಲ. ಅವರ ವಿರುದ್ಧ ಕಾನೂನಿನ ಪ್ರಕಾರ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಯಾರು ಏನು ಬೇಕಾದರೂ ಹೇಳಬಹುದಾಗಿದೆ' ಎಂದಿದ್ದಾರೆ.

ಚೆನ್ನೈಯಲ್ಲೇ ಇದ್ದಾರೆ....
ಕೆಲವು ಮೂಲಗಳ ಪ್ರಕಾರ ನಿತ್ಯಾನಂದ ಕುಂಭಮೇಳಕ್ಕೆ ಹೋಗಿಯೇ ಇಲ್ಲ. ದಾರಿ ತಪ್ಪಿಸುವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡಲಾಗುತ್ತಿದೆ. ಅವರು ಚೆನ್ನೈಯಲ್ಲೇ ಅವರ ಆಪ್ತರ ಮನೆಯಲ್ಲಿ ಅಜ್ಞಾತವಾಗಿ ಉಳಿದುಕೊಂಡಿದ್ದಾರೆ.

ತಮಿಳು ವಾರ್ತಾ ವಾಹಿನಿಯೊಂದು ನಟಿ ರಂಜಿತಾ ಜತೆ ಸ್ವಾಮಿ ಕಾಮಕೇಳಿಯಲ್ಲಿ ಪಾಲ್ಗೊಂಡ ವೀಡಿಯೋ ತುಣುಕನ್ನು ಪ್ರಸಾರ ಮಾಡಿದ ನಂತರ ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳು ಅವರ ಹುಡುಕಾಟದಲ್ಲಿವೆ. ಅವರು ಅಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಮೈಸೂರು, ತಿರುವನಮಲೈ ಮುಂತಾದೆಡೆ ಸತತ ದಾಳಿಗಳನ್ನು ನಡೆಸಲಾಗುತ್ತಿದೆ. ಆದರೆ ಇನ್ನೂ ಪತ್ತೆಯಾಗಿಲ್ಲ.

ಪದೇ ಪದೇ ಪ್ರಸಾರ ಮಾಡೋದು ಕೀಳಭಿರುಚಿಯಂತೆ!
ಹೀಗೆಂದು ಹೇಳಿರುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಗೃಹ ಸಚಿವ ವಿ.ಎಸ್. ಆಚಾರ್ಯ. ವಿದ್ಯುನ್ಮಾನ ಮಾಧ್ಯಮಗಳು ಕಳಂಕಿತ ಸ್ವಾಮೀಜಿಯ ಮಂಚಾವತಾರವನ್ನು ಪದೇ ಪದೇ ಪ್ರಸಾರ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಇವರು, ಇದು ಒಳ್ಳೆಯ ಅಭಿರುಚಿಯಲ್ಲ ಎಂದು ಸಲಹೆ ನೀಡಿದ್ದಾರೆ.

ಸ್ವಾಮಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿರುವ ವೀಡಿಯೋ ತುಣುಕನ್ನು ಪದೇ ಪದೇ ಪ್ರಸಾರ ಮಾಡುವುದು ನಮ್ಮ ಸಂಸ್ಕೃತಿಗೆ ಹೊಂದಿಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆಂದು 'ಟೈಮ್ಸ್ ಆಫ್ ಇಂಡಿಯಾ' ತನ್ನ ವರದಿಯಲ್ಲಿ ಹೇಳಿದೆ.

ಈ ಪ್ರಕರಣ ನಡೆದಿರುವುದು ಕರ್ನಾಟಕದಲ್ಲಿ ಎಂದು ತಮಿಳುನಾಡಿನ ಅಧಿಕಾರಿಗಳು ಹೇಳಿರುವುದನ್ನು ಕೇಳಿದ್ದೇನೆ. ಸ್ವಾಮಿ ಭೂಗತರಾಗಿದ್ದಾರೆ. ಈಗ ಹೇಳುತ್ತಿರುವ ಭೂಮಿ ಸರಕಾರಕ್ಕೆ ಸೇರಿಲ್ಲವಾಗಿರುವುದರಿಂದ ನಾವು ಅದನ್ನು ವಶಪಡಿಸಿಕೊಳ್ಳುವಂತಿಲ್ಲ. ಈ ಸಂಬಂಧ ಯಾರಾದರೂ ದೂರು ನೀಡಿದಲ್ಲಿ, ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

No comments: