ಉಡುಪಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರದಾದ್ಯಂತ ಹಮ್ಮಿಕೊಂಡಿರುವ ಮುಸ್ಲಿಂ ಮೀಸ ಲಾತಿ ಅಭಿಯಾನದ ಪ್ರಯುಕ್ತ ಬುಧವಾರ ಕೋಡಿಯಿಂದ ಹೊರಟ ಅಭಿಯಾನದ ವಾಹನ ಜಾಥವು ಮೂಡಗೋಪಡಿ, ಸಾಸ್ತಾನ, ಹೊನ್ನಾಳ, ಹೂಡೆ, ಮಲ್ಪೆ ಮಾರ್ಗವಾಗಿ ಕುಕ್ಕಿಕಟ್ಟೆ ತಲುಪಿ ಉಡುಪಿ ಜಾಮೀಯಾ ಮಸೀದಿ ವಠಾರದಲ್ಲಿ ಸಾರ್ವಜನಿಕ ಸಭೆಯೊಂದಿಗೆ ಅಂತ್ಯಗೊಂಡಿತು.
ಸಮಾರಂಭದಲ್ಲಿ ಮಾತನಾಡಿದ ಪಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ಅಮೀರ್ ಹಂಝ, ಪಿಎಫ್‌ಐ ಬಹುಸಂಖ್ಯಾತರಾದ ಮುಸ್ಲಿಮರನ್ನು ಎರಡನೇ ದರ್ಜೆಗೆ ಹೋಲಿಸಲಾ ಗುತ್ತಿದೆ. ಆದ್ದರಿಂದ ಪಿಎಫ್‌ಐ ಮುಸ್ಲಿಂ ಮೀಸಲಾತಿಗಾಗಿ ರಾಷ್ಟ್ರಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪುಣೆಯಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ದೆಹಲಿಯಲ್ಲಿ ಕೊನೆಗೊ ಳ್ಳಲಿದೆ. ಆದರೆ ಮೀಸಲಾತಿ ಸಂಪೂರ್ಣ ಸಿಗುವ ತನಕ ಈ ಹೋರಾಟ ಕೊನೆಗೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ತುಂಡಾದ ಆಟಿಕೆಯಂತೆ ಮುಸ್ಲಿಮರನ್ನು ರಾಜಕೀಯ ಪಕ್ಷಗಳು ಮತ್ತು ಸಂಘಪರಿವಾರ ಬಳಸಿ ಕೊಳ್ಳುತ್ತಿದೆ. ಗುಜರಾತ್‌ನಲ್ಲಿ ಮುಸ್ಲಿಮರ ಮೇಲೆ ಅನ್ಯಾಯ ನಡೆದಿದ್ದರೂ ಮುಸ್ಲಿಮರು ಎಚ್ಚೆತ್ತುಕೊಳ್ಳಲಿಲ್ಲ. ಪಿಎಫ್‌ಐ ಮುಸ್ಲಿಮರ ಮೀಸಲಾತಿ ಎಂಬ ಧ್ಯೇಯ ವಾಕ್ಯದೊಂದಿಗೆ ಮುಂದೆ ಬಂದಿರುವುದು ಸಂತೋಷ ದಾಯಕ ಎಂದು ಜಾಮೀಯಾ ಮಸೀದಿಯ ಖತಿಬರಾದ ಮೌಲಾನಾ ಅಬ್ದುಲ್ ರಹೀಂ ಖಾನ್ ಶಿರಾನಿ ಯವರು ಹೇಳಿದರು.
ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಬೇಕಾಗಿಲ್ಲ. ಬದಲಾಗಿ ಜನಸಂಖ್ಯೆ ಆಧಾರಿತ ಮೀಸಲಾತಿ ಬೇಕಾಗಿದೆ ಎಂದು ಸೋಷಿಯಲ್ ಡೆಮೋಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರಾದ ಅಬ್ದುಲ್ ರೆಹಮಾನ್ ಮಲ್ಪೆ ತಿಳಿಸಿದರು.

No comments:
Post a Comment