ಮಂಗಳೂರು: ಮಂಗಳವಾರ ಸಂಜೆ ಪಿಲಿಕುಳದ ಕೆರೆಗೆ ಹಾರಿ ಯುವಜೋಡಿ ಆತ್ಮಹತ್ಯೆ ಯತ್ನಿಸಿದ ಘಟನೆ ತಿರುವು ಪಡೆದಿದ್ದು, ಮೃತಪಟ್ಟ ಯುವಕ ಸಂತೋಷ್ ಫ್ರಾಂಕಿ ಮಥಾಯಿಸ್(29) ತನ್ನ ಪ್ರೇಮಿಯ ರಕ್ಷಣೆಗಾಗಿ ಕೆರೆಗೆ ಹಾರಿ ಮೃತ್ಯುವಶವಾಗಿರುವುದು ತಿಳಿದು ಬಂದಿದೆ. ಫ್ರಾಂಕಿ ಮಥಾಯಿಸ್(29) ಮತ್ತು ಶಕ್ತಿನಗರ ನಿವಾಸಿ ಅಶಾ ಡಿಸಿಲ್ವ(21) ನಡುವೆ ಕಳೆದ ಆರು ವರ್ಷಗಳಿಂದ ಪ್ರೀತಿ ಬೆಳೆದಿತ್ತು. ಅನಿಶಾ ತನ್ನ ಗೆಳತಿಯ ಮೂಲಕ ಫ್ರಾಂಕಿಗೆ ಪರಿಚಯವಾಗಿದ್ದಳು. ಫ್ರಾಂಕಿ ಕುಲಶೇಖರದಲ್ಲಿ ಎಲೆಕ್ಟ್ರಿಕಲ್ ಗುತ್ತಿಗೆ ಕೆಲಸ ಮಾಡುತ್ತಿದ್ದರೆ ಅನಿಶಾ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾಳೆ. ಇವರಿಬ್ಬರೂ ಜತೆಯಾಗಿ ಪಿಲಿಕುಳಕ್ಕೆ ಬರುವುದು ಇದೇ ಮೊದಲಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಲಿ ಪಡೆದ `ಸಂಶಯ: ಅನಿಶಾಳನ್ನು ಪ್ರೀತಿಸುತ್ತಿದ್ದ ಫ್ರಾಂಕಿಗೆ ಆಕೆಯ ಮೇಲೆ ಸಣ್ಣಪುಟ್ಟ ಕಾರಣಕ್ಕೆ ಸಂಶಯವಿತ್ತು. ತನ್ನ ಕರೆ ಬರುವಾಗ ಆಕೆಯ ಮೊಬೈಲ್ ಬ್ಯುಸಿ ಬರುತ್ತಿದ್ದರೆ ಯಾರೊಂದಿಗೆ ಮಾತಾಡುತ್ತಿದ್ದೆ ಎಂದು ಕೇಳುತ್ತಿದ್ದ. ಅನಿಶಾ ತನ್ನ ಪ್ರೇಮಿಯ ಸಂಶಯದ ನಡವಳಿಕೆಯಿಂದ ನೊಂದಿದ್ದಳು. ಇದೇ ಮುಂದುವರಿದ ಇವರ ಪ್ರೀತಿಯ ಕತೆ ಫ್ರಾಂಕಿ ಸಾವಿನಲ್ಲಿ ಕೊನೆಗೊಂಡಿತು ಎನ್ನಲಾಗುತ್ತಿದೆ. ಮಂಗಳವಾರ ಮಧ್ಯಾಹ್ನದ ವೇಳೆ ಪಿಲಿಕುಳಕ್ಕೆ ಆಗಮಿಸಿದ್ದ ಜೋಡಿ ಕೆರೆಯ ದಂಡೆಯಲ್ಲಿ ಕುಳಿತು ಮಾತಾಡುತ್ತಿತ್ತು. ಈ ನಡುವೆ ಅನಿಶಾ ಜತೆ ಫ್ರಾಂಕಿ ಆಕೆಯ ಫೋನ್ ಆಗಾಗ ಬ್ಯುಸಿ ಆಗಿರುವ ಬಗ್ಗೆ ಸಂಶಯದಿಂದ ವಿಚಾರಿಸಿದನೆನ್ನಲಾಗಿದೆ. ಈ ವೇಳೆ ಅನಿಶಾ ಹಿಂದೆ ಮುಂದೆ ಯೋಚಿಸದೆ ನದಿಗೆ ಹಾರಿದ್ದಳು. ತನ್ನ ಪ್ರೇಮಿಯನ್ನು ಬದುಕಿಸಲೇಬೇಕು ಎಂದು ನೀರಿಗೆ ಹಾರಿದ ಫ್ರಾಂಕಿ ಸಂತೋಷ್ ಮಥಾಯಿಸ್ ಅನಿಶಾಳನ್ನು ೀರಿನಲ್ಲಿ ಮುಳುಗದಂತೆ ರಕ್ಷಿಸಿದನಾದರೂ ತಾನು ಮಾತ್ರ ಮೇಲೆ ಬರಲಾರದೆ ಮೃತಪಟ್ಟಿದ್ದಾನೆ.
ಪ್ರೀತಿಯ ನಡುವೆ ಹುಟ್ಟಿಕೊಂಡ ಸಣ್ಣ ಸಂಶಯದಿಂದ ಸಂತೋಷ್ ಫ್ರಾಂಕಿ ಮಥಾಯಿಸ್ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರೆ, ಅನಿಶಾ ಡಿಸಿಲ್ವ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಮನೆಮಂದಿ ಪ್ರೀತಿಯ ಫ್ರಾಂಕಿಯನ್ನು ಕಳೆದುಕೊಂಡ ನೋವಿನಲ್ಲಿ ಶೋಕಸಾಗರದಲ್ಲಿ ಮುಳುಗಿದ್ದಾರೆ.

No comments:
Post a Comment