VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 12, 2010

ಮತಾಂತರಿ ದಲಿತರು, ಮುಸ್ಲಿಮರಿಗೆ ಮೀಸಲಾತಿಗೆ ಬಿಡಲ್ಲ: ಬಿಜೆಪಿ

ನವದೆಹಲಿ, ಶುಕ್ರವಾರ, 12 ಮಾರ್ಚ್ 2010( 10:37 IST )
-->
ಮುಸ್ಲಿಮರು, ಇತರ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ವಿಸ್ತರಿಸಬೇಕು ಮತ್ತು ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕೆಂಬ ರಂಗನಾಥ್ ಮಿಶ್ರಾ ಆಯೋಗದ ಶಿಫಾರಸುಗಳನ್ನು ಸರಕಾರ ಜಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.ರಂಗನಾಥ್ ಮಿಶ್ರಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ಕೆಲವು ಪಕ್ಷಗಳು ತಮ್ಮ ಬೇಡಿಕೆಗಳನ್ನು ಮುಂದಿಡುತ್ತಿವೆ. ಇದರ ವಿರುದ್ಧ ನಾವು ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಡಲಿದ್ದೇವೆ. ಇದನ್ನು ಜಾರಿಗೊಳಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.ಆಯೋಗದ ಶಿಫಾರಸುಗಳನ್ನು ವಿರೋಧಿಸಿ ನಡೆಸಲಾಗುತ್ತಿರುವ 'ಅನುಸೂಚಿತ ಜಾತಿ ಆರಕ್ಷಣ ಬಚಾವೋ ಮಂಚ್' ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಸುಷ್ಮಾ ಮಾತನಾಡುತ್ತಿದ್ದರು.ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಾದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಮತ್ತು ಬಂಗಾರು ಲಕ್ಷ್ಮಣ್ ಕೂಡ ಪಾಲ್ಗೊಂಡಿದ್ದರು.ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವುದರಿಂದ ದಲಿತರೆನ್ನುವ ಕಾರಣದಿಂದ ಶಾಪವನ್ನು ಸಹಿಸಿಕೊಳ್ಳುತ್ತಿರುವವರಿಗೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ ಹೊರತು ಅವರ ಸಮಾಜಕ್ಕೆ ಸಹಕಾರವಲ್ಲ ಎಂದು ಸ್ವರಾಜ್ ಅಭಿಪ್ರಾಯಪಟ್ಟರು.ಮತಾಂತರಿಗಳಿಗೆ ಮೀಸಲಾತಿ ನೀಡಬೇಕೆನ್ನುವುದು ಹಲವು ಸಮಯದಿಂದ ನಡೆಯುತ್ತಿರುವ ಪಿತೂರಿಯಾಗಿದೆ. ಆದರೆ ನಿಮ್ಮ ಒಗ್ಗಟ್ಟು ಮತ್ತು ಬಿಜೆಪಿಯ ತೀವ್ರ ವಿರೋಧದ ಕಾರಣದಿಂದ ಇದನ್ನು ಜಾರಿಗೆ ಬರುವುದು ಸಾಧ್ಯವಿಲ್ಲ ಎಂದರು.ಆಯೋಗದ ವರದಿ ಕಾನೂನು ವಿರೋಧಿ, ಅಸಾಂವಿಧಾನಿಕ ಮತ್ತು ಸಂಸ್ಕೃತಿಯ ವಿರುದ್ಧದ ಪಿತೂರಿ ಎಂದು ಬಣ್ಣಿಸಿರುವ ಜೇಟ್ಲಿ, ಸರಕಾರಕ್ಕೆ ಕಠಿಣ ಎಚ್ಚರಿಕೆಯನ್ನು ರವಾನಿಸಿದ್ದು, 'ಆ ವರದಿಯನ್ನು ಕನಿಷ್ಠ ಓದುವ ಅಗತ್ಯವೂ ಇಲ್ಲ' ಎಂದಿದ್ದಾರೆ.ಪರಿಶಿಷ್ಟ ಜಾತಿ ಸ್ಥಾನಮಾನದಿಂದ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು ಮತ್ತು ಪಾರ್ಸಿಗಳನ್ನು ಕೈ ಬಿಟ್ಟ 1950 ಪರಿಶಿಷ್ಟ ಜಾತಿ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರಗಳ ಎಲ್ಲಾ ಉದ್ಯೋಗ ವಿಭಾಗಗಳಲ್ಲೂ ಮುಸ್ಲಿಮರಿಗೆ ಶೇ.10ರ ಮೀಸಲಾತಿ ಕಡ್ಡಾಯ ಮಾಡಬೇಕು. ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಶೇ.5ರಷ್ಟು ಮೀಸಲಾತಿ ನೀಡಬೇಕು ಎಂದು ರಂಗನಾಥ್ ಮಿಶ್ರಾ ಆಯೋಗ ಶಿಫಾರಸು ಮಾಡಿತ್ತು.ಅಲ್ಲದೆ ಹಿಂದೂ ಧರ್ಮದ ದಲಿತರು ಕ್ರಿಶ್ಚಿಯನ್ ಅಥವಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರೆ ಅಥವಾ ಯಾವುದೇ ಧರ್ಮದಲ್ಲಿ ದಲಿತರಿದ್ದರೆ ಅವರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕು ಎಂದು ನ್ಯಾಯಮೂರ್ತಿ ಮಿಶ್ರಾ ತನ್ನ ವರದಿಯಲ್ಲಿ ತಿಳಿಸಿದ್ದರು.

No comments: