VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 11, 2010

ಮುಸ್ಲಿಮರಿಗೆ ಮೀಸಲಾತಿಗಾಗಿ ಒತ್ತಾಯಿಸಿ ಬೃಹತ್‌ ಸಮಾವೇಶ


ಮಂಗಳೂರು: ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ವತಿಯಿಂದ ನಾಳೆ 3.30ಕ್ಕೆ ನೆಹರೂ ಮೈದಾನದಲ್ಲಿ ಬೃಹತ್‌ ಸಾರ್ವಜನಿಕ ಸಮಾವೇಶ ನಡೆಯಲಿದೆ.
ನಿನ್ನೆ ಸುದ್ಧಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಜಿಲ್ಲಾಧ್ಯಕ್ಷ ಅನ್ವರ್‌ ಸಾದತ್‌ 2006ರಲ್ಲಿ ರಾಜಿಂದರ್‌ ಸಾಚಾರ್‌ ಸಮಿತಿ, ಬಳಿಕ ಬಂದ ಜಸ್ಟಿಸ್‌ ರಂಗನಾಥ್‌ ಮಿಶ್ರ ಕಮಿಷನ್‌, ತನ್ನ ವರದಿಯಲ್ಲಿ ದೇಶದ ಮುಸ್ಲಿಮರು ತೀರಾ ಹಿಂದುಳಿದವ ರಾಗಿದ್ದು ಬಡತನದ ರೇಖೆಗಿಂತಲೂ ಕೆಳಮಟ್ಟದಲ್ಲಿ ಜೀವನ ಸಾಗಿಸು ತ್ತಾರೆಂದು ವರದಿ ಮಾಡಿದೆ.
ಅಲ್ಲದೆ ಸರಕಾರಿ ಉದ್ಯೋಗ ಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಅಲ್ಪಸಂಖ್ಯಾತರಿಗೆ ಶೇಕಡಾ 15, ಅದರಲ್ಲೂ ಮುಸ್ಲಿಮರಿಗೆ 10 ಶೇಕಡಾ ಮೀಸಲಿಡಬೇಕೆಂದು ಸಾಚಾರ್‌ ಸಮಿತಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರೆ, ಮಿಶ್ರಾ ಕಮಿಷನ್‌ ಓಬಿಸಿ ಕೋಟಾ ಶೇಕಡಾ 27 ಮೀಸಲಾತಿ ಯಲ್ಲಿ 8.4 ಶೇಕಡಾವನ್ನು ಅಲ್ಪಸಂಖ್ಯಾ ತರಿಗೆ ಅದರಲ್ಲೂ ಮುಸ್ಲಿಮರಿಗೆ ಆರು ಶೇಕಡಾ ಮೀಸಲಾತಿ ನೀಡ ಬೇಕು. ಪರಿಶಿಷ್ಟ ಜಾತಿಗಳಿಗೆ ನೀಡುವ ಮೀಸಲಾತಿಯನ್ನು ಮುಸ್ಲಿಂ ಮತ್ತು ಕ್ರೈಸ್ತರಿಗೂ ವಿಸ್ತರಿಸಬೇಕೆಂದು ಶಿಫಾರಸ್ಸು ಮಾಡಿದೆ.ಆದರೆ ಅದನ್ನು ಪೂರೈಸಬೇಕಾದ ಸರಕಾರ ಮುಸ್ಲಿಮರಿಗೆ ಯಾವುದೇ ಸವಲತ್ತು ನೀಡದೆ ಕೇವಲ ಓಟ್‌ಬ್ಯಾಂಕ್‌ ಆಗಿ ಉಪಯೋಗಿಸಿದೆ ಎಂದು ಸಾದಾತ್‌ ಆರೋಪಿಸಿದರು.
ಪ್ರಸ್ತುತ ಸನ್ನಿವೇಶದಲ್ಲಿ ಮುಸ್ಲಿಮರಿಗೆ ಮೀಸಲಾತಿ ಅಗತ್ಯವಿದ್ದು, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಪಿ.ಎಫ್‌.ಐ ಬಯಸಿದೆ. ಇದಕ್ಕಾಗಿ ಕಾರ್ಯಪ್ರವೃತ್ತವಾಗಿರುವ ಸಂಘಟನೆಯ ಫೆ.2010ರಲ್ಲಿ ರಾಷ್ಟ್ರೀಯ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂ ಡಿದ್ದು ಈಗಾಗಲೇ ದೇಶದ ವಿವಿಧೆ ಡೆಗಳಲ್ಲಿ ವಿಚಾರಗೋಷ್ಠಿ , ವಾಹನ ರ್ಯಾಲಿ, ಸಾರ್ವಜನಿಕ ಸಭೆ, ಪೋಸ್ಟರ್‌, ಭಿತ್ತಿಪತ್ರ ವಿತರಣೆ ಬೀದಿ ನಾಟಕ ಗಳನ್ನೂ ಹಮ್ಮಿಕೊಂಡಿದೆ.
ದ.ಕ.ದಲ್ಲೂ ಇಂತಹ ಕಾರ್ಯ ಕ್ರಮವನ್ನು ಯಶಸ್ವಿಯಾಗಿ ಪೂರೈಸಿ ರುವ ಸಂಘಟನೆ ನಾಳೆ ಪುರಭವನದಲ್ಲಿ ಬೃಹತ್‌ ಕಾರ್ಯಕ್ರಮ ಹಮ್ಮಿಕೊಂ ಡಿದ್ದು ಇದರಲ್ಲಿ 10 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆಯೆಂ ದರು. ಸಭೆಯಲ್ಲಿ ಎಸ್‌.ಡಿ.ಪಿ.ಐ ರಾಷ್ಟ್ರಾಧ್ಯಕ್ಷರಾದ ಇ.ಅಬೂಬಕ್ಕರ್‌, ಪಿ.ಎಫ್‌.ಐ ರಾಷ್ಟ್ರೀಯ ಕಾರ್ಯದರ್ಶಿ , ಕೆ.ಎಂ.ಶರೀಫ್‌, ಮುಖ್ಯ ಭಾಷಣ ಮಾಡಲಿದ್ದು ವಿವಿಧ ಧರ್ಮದ ಗುರು ಗಳು, ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆಂದು ಸಾದಾತ್‌ ತಿಳಿಸಿದ್ದಾರೆ. ಸುದ್ಧಿಗೋಷ್ಠಿ ಯಲ್ಲಿ ಸಂಘಟನೆಯ ಮುಖಂಡರಾದ ಹೈದರ್‌, ಇಕ್ಬಾಲ್‌ ಮತ್ತು ಹನೀಫ್‌ ಉಪಸ್ಥಿತರಿದ್ದರು.

No comments: