




ಮಂಗಳೂರಿನ ಬೆಂದೂರ್ ಚರ್ಚ್‌ನಲ್ಲಿ ಮೊಂಬತ್ತಿ ಹಿಡಿದುಕೊಂಡ ಬಾಲೆಯ ಪ್ರಾರ್ಥನೆ.ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನಲ್ಲಿ ಪ್ರಾರ್ಥನೆಗೆ ಸೇರಿರುವ ಕ್ರೈಸ್ತರು.
ಮಂಗಳೂರು/ ಉಡುಪಿ,ಎ.೪: ದ.ಕನ್ನಡ, ಉಡುಪಿ,ಕಾಸರಗೋಡು ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಯೇಸುಕ್ರಿಸ್ತರ ಪುನರುತ್ಥಾನದ ಪುಣ್ಯದಿನ ಈಸ್ಟರ್ ಹಬ್ಬವನ್ನು ಶ್ರದ್ಧೆ, ಸಂಭ್ರಮೋಲ್ಲಾಸಗಳಿಂದ ಆಚರಿಸಿದರು.
ಚರ್ಚ್‌ಗಳಲ್ಲಿ ಶನಿವಾರ ಮಧ್ಯರಾತ್ರಿ ವಿಶೇಷ ಪ್ರಾರ್ಥನೆ ನೆರವೇರಿತು. ಕ್ರೈಸ್ತ ಬಾಂಧವರು ಮೇಣದ ಬತ್ತಿ ಉರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಂಗಳೂರಿನ ರೊಸಾರಿಯೋ ಕೆಥೀಡ್ರಲ್ ಚರ್ಚ್‌ನಲ್ಲಿ ಮಂಗಳೂರಿನ ಬಿಷಪ್ ರೈ|ರೆ| ಡಾ| ಎಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ರೊಸಾರಿಯೋ ಚರ್ಚ್‌ನ ಧರ್ಮಗುರು ಫಾ| ಸ್ಟ್ಯಾನಿ ಗೋವಿಯಸ್ ಅವರ ಸಹಭಾಗಿತ್ವದಲ್ಲಿ ಶನಿವಾರ ರಾತ್ರಿ ಸಂಭ್ರಮದ ಬಲಿಪೂಜೆ ಅರ್ಪಿಸಿದರು.
ಮನೆಗಳಲ್ಲಿ ಕ್ರೈಸ್ತ ಬಾಂಧವರು ವಿವಿಧ ಬಗೆಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿ ಹಬ್ಬದೂಟವನ್ನು ಸವಿದರು. ಆಬಾಲವೃದ್ಧರಾದಿಯಾಗಿ ಹೊಸ ಉಡುಪುಗಳನ್ನು ತೊಟ್ಟು ಸಂಭ್ರಮಿಸಿದರು.
No comments:
Post a Comment