VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 7, 2010

ಮೈಸೂರು : ಜ.11 ರಂದು ರಣಜಿ ಫೈನಲ್


ಬೆಂಗಳೂರು, ಜ. 7 : 11 ವರ್ಷಗಳ ಬಳಿಕ ಕನ್ನಡದ ಕ್ರಿಕೆಟ್ ಅಭಿಮಾನಿಗಳ ಕನಸು ನನಸಾಗಿದ್ದು, ಕರ್ನಾಟಕ ರಣಜಿ ತಂಡ ರಣಜಿ ಟ್ರೋಫಿ ಇತಿಹಾಸದಲ್ಲಿ 12 ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಅಪರೂಪದ ಕ್ಷಣಕ್ಕಾಗಿ 1999ರಿಂದ ಈವರೆಗೆ ಕಾಯಬೇಕಾಯಿತು. ಕೊನೆಗೂ ದ್ರಾವಿಡ್ ನೇತೃತ್ವದ ಪಡೆ ಫೈನಲ್ ತಲುಪಿ ಬಲಿಷ್ಠ ಮುಂಬೈ ತಂಡವನ್ನು ಜನವರಿ 11 ರಂದು ಮೈಸೂರಿನಲ್ಲಿ ಎದುರಿಸಲಿದೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಅವಿಸ್ಮರಣೀಯ ಕ್ಷಣವೊಂದು ನಿರ್ಮಾಣವಾಯಿತು. ಇನ್ನೊಂದೆ ಹೆಜ್ಜೆ ಇಟ್ಟ ದ್ರಾವಿಡ್ ಪಡೆ ಚಿನ್ನ ಗಳಿಗೆಯಾಗಿ ರೂಪಗೊಳ್ಳಲಿದೆ. ಕಾರಣ 7ನೇ ಟ್ರೋಫಿ ರಾಜ್ಯದ ತಂಡದ ಮಡಿಲು ಸೇರಲಿದೆ. ಉದ್ಯಾನ ನಗರಿಯಲ್ಲಿ ಉತ್ತರ ಪ್ರದೇಶ ವಿರುದ್ಧ ಬುಧವಾರ ಕೊನೆಗೊಂಡ ಸೆಮಿಫೈನಲ್ ಡ್ರಾನಲ್ಲಿ ಮುಕ್ತಾಯಕೊಂಡಿತು. ಆದರೆ, ಅಮೋಘ 367 ರನ್ ಗಳ ಮೊದಲ ಇನ್ನಿಂಗ್ಸ್ ಲೀಡ್ ಆಧಾರದ ಮೇಲೆ ಕರ್ನಾಟಕ ಫೈನಲ್ ಪ್ರವೇಶಿಸುವ ಅರ್ಹತೆ ಪಡೆದುಕೊಂಡಿತು.

ವಿಶೇಷವೆಂದರೆ ರಣಜಿ ಕ್ರಿಕೆಟ್ ನ 75ನೇ ವರ್ಷದ ಆಚರಣೆ ಸಮಯದಲ್ಲಿ ಕನ್ನಡ ನಾಡಿಗೆ ಅದೃಷ್ಟ ಒಲಿದಿದ್ದು ಅಭಿಮಾನಿಗಳಲ್ಲಿ ಪುಳಕವನ್ನುಂಟು ಮಾಡಿದೆ. ಕರ್ನಾಟಕ ಈವರೆಗೂ 11 ಬಾರಿ ಫೈನಲ್ ಪ್ರವೇಶಿಸಿದ್ದು, 6 ಬಾರಿ ಪ್ರಶಸ್ತಿ ಪಡೆದುಕೊಂಡಿದೆ. ರಾಜ್ಯ ತಂಡ 1998-99 ರಲ್ಲಿ ಕೊನೆಯ ಬಾರಿ ಫೈನಲ್ ಪ್ರವೇಶಿಸಿತ್ತು. ಸುನೀಲ್ ಜೋಶಿ ಸಾರಥ್ಯದಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಆದರೆ, ಈ ಸಾರಿ ಅನುಭವಿ ಆಟಗಾರ ರಾಹುಲ್ ದ್ರಾವಿಡ್ ಸಾರಥ್ಯದಲ್ಲಿ ತಂಡ ಮತ್ತೆ ಫೈನಲ್ ಪ್ರವೇಶಿಸಿದೆ. ಜನವರಿ 11 ರಂದು ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ನಲ್ಲಿ ಅಂತಿಮ ಹಣಾಹಣಿ ನಡೆಯಲಿದೆ. ಎದುರಾಳಿ ತಂಡ ಬಲಿಷ್ಠ ಮುಂಬೈ. ಈವರೆಗೊ ಮುಂಬೈ ದಾಖಲೆಯ 38 ಬಾರಿ ರಣಜಿ ಚಾಂಪಿಯನ್ ಆಗಿದೆ.

Source - Thatskannada

No comments: