VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 13, 2010

ರಣಜಿ ಫೈನಲ್: ಕರ್ನಾಟಕ ಗೆಲುವಿನ ಗುರಿ 338 ರನ್

ಮೈಸೂರು: ಕೊನೆಗೂ ಮುಂಬೈಯನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 234ಕ್ಕೆ ಆಲೌಟ್ ಮಾಡಿರುವ ಕರ್ನಾಟಕ 338 ರನ್ನುಗಳ ಗೆಲುವಿನ ಗುರಿಯನ್ನು ಪಡೆದುಕೊಂಡಿದೆ. ಕಳೆದೆರಡು ದಿನಗಳಿಂದ ನಾಟಕೀಯ ತಿರುವುಗಳನ್ನೇ ಕಾಣುತ್ತಿರುವ ರಣಜಿ ಫೈನಲ್ ಪಂದ್ಯದ ಕರ್ನಾಟಕ ಇನ್ನಿಂಗ್ಸ್ ಒಂದು ವಿಕೆಟ್ ಪತನದೊಂದಿಗೆ ಆರಂಭವಾಗಿದೆ.

ಸಂಕ್ಷಿಪ್ತ ಸ್ಕೋರ್:
ಮುಂಬೈ ಮೊದಲ ಇನ್ನಿಂಗ್ಸ್ - 233
ಕರ್ನಾಟಕ ಮೊದಲ ಇನ್ನಿಂಗ್ಸ್ - 130
ಮುಂಬೈ ಎರಡನೇ ಇನ್ನಿಂಗ್ಸ್ - 234
ಕರ್ನಾಟಕ ಎರಡನೇ ಇನ್ನಿಂಗ್ಸ್ - 38/1 (15 ಓವರು)

ಇತ್ತೀಚಿನ ಮಾಹಿತಿಗಳ ಪ್ರಕಾರ ಮುರಳೀಧರನ್ ಗೌತಮ್ ವಿಕೆಟನ್ನು ಕಳೆದುಕೊಂಡಿರುವ ಕರ್ನಾಟಕ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದು, ಕೆ.ಬಿ. ಪವನ್ (23*) ಮತ್ತು ಗಣೇಶ್ ಸತೀಶ್ (12*) ಕ್ರೀಸಿನಲ್ಲಿದ್ದಾರೆ.

ಬೃಹತ್ ಮೊತ್ತವನ್ನೇ ಗುರಿಯಾಗಿ ಪಡೆದಿರುವ ರಾಬಿನ್ ಉತ್ತಪ್ಪ ಪಡೆಗೆ ಎರಡು ದಿನಗಳ ಅವಕಾಶವಿದ್ದರೂ, ವಿಕೆಟ್ ಉಳಿಸಿಕೊಳ್ಳುವುದೇ ಮಹತ್ವದ್ದಾಗಿದೆ. ಈ ಕಾರಣದಿಂದ ತೀವ್ರ ಒತ್ತಡದಿಂದಲೇ ಕರ್ನಾಟಕ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.

ಮುಂಬೈ ಇನ್ನಿಂಗ್ಸ್...
ನಿನ್ನೆಯೇ ಐದು ವಿಕೆಟುಗಳನ್ನು ಕಳೆದುಕೊಂಡಿದ್ದ ರಮೇಶ್ ಪೊವಾರ್ ನೇತೃತ್ವದ ಪ್ರವಾಸಿ ತಂಡಕ್ಕೆ ಇಂದು ಧವಳ್ ಕುಲಕರ್ಣಿ (87) ಮತ್ತು ಅಭಿಷೇಕ್ ನಾಯರ್ (50) ತಮ್ಮ ಅರ್ಧಶತಕಗಳ ಮೂಲಕ ಆಸರೆಯಾಗಿದ್ದರು. ಕುಲಕರ್ಣಿಯವರಂತೂ ಕ್ರೀಸಿಗಂಟಿಕೊಂಡು ಕೊನೆಯ ಹಂತದವರೆಗೂ ಕರ್ನಾಟಕ ಬೌಲರುಗಳಿಗೆ ಕಬ್ಬಿಣದ ಕಡಲೆಯಾಗಿದ್ದರು.

ರಣಜಿ ಟ್ರೋಫಿ ಫೈನಲ್ ಮೂರನೇ ದಿನದಾರಂಭದಲ್ಲೇ ವಿಕೆಟ್ ಕಿತ್ತು ಸವಾರಿ ನಡೆಸುವ ಕರ್ನಾಟಕದ ಆಸೆಯನ್ನು ಮುಂಬೈ ನಿರಾಕರಿಸುತ್ತಲೇ ಮಧ್ಯಾಹ್ನದವರೆಗೆ ಮುಂದುವರಿಯಿತು. 300ಕ್ಕೂ ಹೆಚ್ಚು ಮುನ್ನಡೆ ಪಡೆದು ಕರ್ನಾಟಕವನ್ನು ಒತ್ತಡಕ್ಕೆ ಸಿಲುಕಿಸುವ ಮುಂಬೈ ತಂತ್ರ ಬಹುತೇಕ ಯಶಸ್ವಿಯೂ ಆಗಿದೆ.

ಇಂದು ಅಭಿಷೇಕ್ ನಾಯರ್ (50), ಅಜಿತ್ ಅಗರ್ಕರ್ (4), ಇಕ್ಬಾಲ್ ಅಬ್ದುಲ್ಲಾ (15), ಧವಳ್ ಕುಲಕರ್ಣಿ (87), ಆವಿಷ್ಕಾರ್ ಸಾಲ್ವಿ (0) ವಿಕೆಟುಗಳು ಪತನವಾದವು. 28 ರನ್ ಗಳಿಸಿದ ರಮೇಶ್ ಪೊವಾರ್ ಅಜೇಯರಾಗುಳಿದಿದ್ದಾರೆ.

83.3 ಓವರುಗಳಲ್ಲಿ 234 ರನ್ನುಗಳಿಗೆ ಸರ್ವಪತನ ಕಂಡ ಮುಂಬೈ 338 ರನ್ನುಗಳ ಮುನ್ನಡೆ ಪಡೆದುಕೊಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟುಗಳನ್ನು 71 ರನ್ನುಗಳಿಗೆ ಪಡೆದ ಅಭಿಮನ್ಯು ಮಿಥುನ್ ಮಿಂಚಿದ್ದಾರೆ. ವಿನಯ್ ಕುಮಾರ್ ಪಾಲಿಗೆ ಮೂರು ಹಾಗೂ ಸುನಿಲ್ ಜೋಶಿ ಒಂದು ವಿಕೆಟ್ ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 233ಕ್ಕೆ ಸರ್ವಪತನ ಕಂಡಿದ್ದ ಮುಂಬೈ, ಕರ್ನಾಟಕವನ್ನು 130 ರನ್ನುಗಳಿಗೇ ಸೀಮಿತಗೊಳಿಸಿತ್ತು. ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಮನೀಷ್ ಪಾಂಡೆ ಮತ್ತು ಗಣೇಶ್ ಸತೀಶ್ ಅವರಂತಹ ಪ್ರಭಾವಿ ದಾಂಡಿಗರೂ ವಿಫಲರಾಗಿದ್ದರು. ಆ ಮೂಲಕ 103 ರನ್ನುಗಳ ಇನ್ನಿಂಗ್ಸ್ ಹಿನ್ನಡೆ ಕರ್ನಾಟಕಕ್ಕೆ ಒದಗಿತ್ತು.

webdunia

No comments: