VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 27, 2010

ದ.ಆಫ್ರಿಕಾ ಸರಣಿಗೆ ಕರ್ನಾಟಕದ ಪಾಂಡೆ, ಮಿಥುನ್ & ಕೈಫ್?

ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಗುರುವಾರ ಪ್ರಕಟಿಸಲಿದ್ದು, ತಂಡದ ಪ್ರಮುಖ ಆಟಗಾರರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಭಾವಂತ ಆಟಗಾರರಾದ ಕರ್ನಾಟಕದ ಮನೀಷ್ ಪಾಂಡೆ, ವೇಗಿ ಅಭಿಮನ್ಯು ಮಿಥನ್ ಮತ್ತು ಉತ್ತರ ಪ್ರದೇಶದ ಮೊಹಮ್ಮದ್ ಕೈಫ್ ಆಯ್ಕೆಯಾಗುವ ಸಾಧ್ಯತೆಗಳಿವೆ.

ಬಾಂಗ್ಲಾದೇಶದಲ್ಲಿ ನಡೆದ ಟೆಸ್ಟ್ ಸರಣಿಯ ವೇಳೆ ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಯುವರಾಜ್ ಸಿಂಗ್ ಹಾಗೂ ವೇಗಿ ಎಸ್. ಶ್ರೀಶಾಂತ್ ಗಾಯಾಳುವಾಗಿದ್ದು, ಮುಂಬರುವ ಸರಣಿಗೆ ಲಭ್ಯರಾಗುವ ಬಗ್ಗೆ ಅನುಮಾನ ಮೂಡಿದೆ.

ಸುರೇಶ್ ರೈನಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರಾ, ಅಜಿಂಕ್ಯಾ ರಹಾನೆ ಕೂಡಾ ಆಯ್ಕೆಗಾರರ ಸಂಭಾವ್ಯಪಟ್ಟಿಯಲ್ಲಿರುವ ಪ್ರಮುಖರು.

ಪ್ರಸಕ್ತ ರಣಜಿ ಋತುವಿನಲ್ಲಿ ಅತ್ಯಧಿಕ ರನ್ ಗಳಿಸಿದ್ದ ಮನೀಷ್ ಅಮೋಘ ಫಾರ್ಮ್‌ನಲ್ಲಿದ್ದು, ದ್ರಾವಿಡ್ ಅನುಪಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ಅದೇ ವೇಳೆ ಏಕದಿನದಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದ್ದ ದೆಹಲಿ ಆಟಗಾರ ವಿರಾಟ್ ಕೊಹ್ಲಿ ಕೂಡಾ ಟೆಸ್ಟ್‌ಗೆ ಪದಾರ್ಪಣೆಗೈಯುವ ತವಕದಲ್ಲಿದ್ದಾರೆ.

ಮತ್ತೊಂದೆಡೆ ತಮ್ಮ ಪುನರಾಗಮನವನ್ನು ಎದುರು ನೋಡುತ್ತಿರುವ ಕೈಫ್, ಪೂರ್ವ ವಲಯದ ವಿರುದ್ಧ ನಡೆದ ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ದ್ವಿಶತಕ ಹಾಗೂ ಇದೀಗ ನಡೆಯುತ್ತಿರುವ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ವಿರುದ್ಧ ಶತಕ ಬಾರಿಸಿರುವುದು ಆಯ್ಕೆಗಾರರ ಗಮನ ಸೆಳೆದಿದ್ದಾರೆ.

ಮಿಥುನ್‌ಗೆ ಸಾಧ್ಯತೆ...

ಅದೇ ವೇಳೆ ವೇಗಿಗಳ ಪಟ್ಟಿಯಲ್ಲಿನ ಶ್ರೀಶಾಂತ್ ಇನ್ನೂ ಚೇತರಿಸಿಕೊಂಡಿಲ್ಲ. ಅವರ ಬದಲು ಕರ್ನಾಟಕದ ಅಭಿಮನ್ಯು ಮಿಥುನ್‌ ಅವರನ್ನು ಆಯ್ಕೆಗೊಳಿಸುವ ಅವಕಾಶ ಹೆಚ್ಚಿದೆ. ಉತ್ತರ ಪ್ರದೇಶದ ಸುದೀಪ್ ತ್ಯಾಗಿ ಕೂಡಾ ಇದೇ ಪಟ್ಟಿಯಲ್ಲಿ ಮಿಥುನ್‌ಗೆ ಸ್ಪರ್ಧೆ ನೀಡಲಿದ್ದಾರೆ.

ಪ್ರಸಕ್ತ ವರ್ಷ ನಡೆದ ರಣಜಿ ಟ್ರೋಫಿ ಹಾಗೂ ಇದೀಗ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿನ ಭರ್ಜರಿ ಬೌಲಿಂಗ್ ಪ್ರದರ್ಶನವು ಮಿಥುನ್ ಆಯ್ಕೆಗೆ ನೆರವಾಗಲಿದೆ.

ಒಟ್ಟಿನಲ್ಲಿ ಈ ಬಾರಿ ಭಾರತೀಯ ತಂಡದಲ್ಲಿ ಕರ್ನಾಟದಿಂದ ಎರಡು ಹೊಸ ಮುಖಗಳು ಕಾಣಿಸಿಕೊಳ್ಳಲಿದೆಯೆಂಬುದು ಅಪಾರ ಕನ್ನಡಿಗರ ನಿರೀಕ್ಷೆ.

webdunai

No comments: