VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 14, 2010

ಈದ್ಗಾ ಮೈದಾನ ವಿವಾದ... ಏನು?

ಮೈದಾನದಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ನೀಡುವ ಆದೇಶಗಳನ್ನು ಪ್ರಶ್ನಿಸಿ ಬಿ.ಎಸ್.ಶೆಟ್ಟರ್ ಹಾಗೂ ಮಾಜಿ ಶಾಸಕ ಎಂ.ಜಿ.ಜರತಾರಘರ ಮೊದಲಾದವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಅಸಲು ದಾವಾ ನಂಬರ್ 359/1972) ಹುಬ್ಬಳ್ಳಿ ಮುನ್ಸಿಫ್ ಕೋರ್ಟ್‌ನಲ್ಲಿ 1972ರಲ್ಲಿ ದಾಖಲು ಮಾಡಿದರು.

* ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಹೃದಯ ಭಾಗದಲ್ಲಿರುವ ಈ ಮೈದಾನವನ್ನು 5.8.1921ರಂದು ಹುಬ್ಬಳ್ಳಿ ಮುನ್ಸಿಪಾಲ್ಟಿಯವರು ಅಂಜುಮನ್ ಎ- ಇಸ್ಲಾಂ ಸಂಸ್ಥೆಗೆ ವರ್ಷಕ್ಕೆ ಒಂದು ರೂಪಾಯಿ ಬಾಡಿಗೆ ಮೇಲೆ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡುವ ಕರಾರಿನೊಂದಿಗೆ 999 ವರ್ಷಕ್ಕೆ ಲೈಸನ್ಸ್ ನೀಡಿದರು.
* 9.2.1961ರಲ್ಲಿ ಹುಬ್ಬಳ್ಳಿ ಮುನ್ಸಿಪಾಲ್ಟಿ ಶಿಫಾರಸಿನ ಮೇರೆಗೆ ಸರ್ಕಾರವು ಆದೇಶ ಹೊರಡಿಸಿ, ಅಂಜುಮನ್ ಎ- ಇಸ್ಲಾಂನವರಿಗೆ ಅಂಗಡಿ ಕಟ್ಟಲು ಅನುಮತಿ ಕೊಟ್ಟರು. ನಂತರ 8.1.1962ರಂದು ಈ ಆದೇಶವನ್ನು ಬದಲು ಮಾಡಿ, ಅಂಜುಮನ್ ಸಂಸ್ಥೆಯು ಯಾವುದೇ ತರಹದ ಕಟ್ಟಡ ಕಟ್ಟಬಹುದು ಎಂಬ ಆದೇಶ ಹೊರಡಿಸಲಾಯಿತು.

* ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಹೃದಯ ಭಾಗದಲ್ಲಿರುವ ಈ ಮೈದಾನವನ್ನು 5.8.1921ರಂದು ಹುಬ್ಬಳ್ಳಿ ಮುನ್ಸಿಪಾಲ್ಟಿಯವರು ಅಂಜುಮನ್ ಎ- ಇಸ್ಲಾಂ ಸಂಸ್ಥೆಗೆ ವರ್ಷಕ್ಕೆ ಒಂದು ರೂಪಾಯಿ ಬಾಡಿಗೆ ಮೇಲೆ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡುವ ಕರಾರಿನೊಂದಿಗೆ 999 ವರ್ಷಕ್ಕೆ ಲೈಸನ್ಸ್ ನೀಡಿದರು.
* 9.2.1961ರಲ್ಲಿ ಹುಬ್ಬಳ್ಳಿ ಮುನ್ಸಿಪಾಲ್ಟಿ ಶಿಫಾರಸಿನ ಮೇರೆಗೆ ಸರ್ಕಾರವು ಆದೇಶ ಹೊರಡಿಸಿ, ಅಂಜುಮನ್ ಎ- ಇಸ್ಲಾಂನವರಿಗೆ ಅಂಗಡಿ ಕಟ್ಟಲು ಅನುಮತಿ ಕೊಟ್ಟರು. ನಂತರ 8.1.1962ರಂದು ಈ ಆದೇಶವನ್ನು ಬದಲು ಮಾಡಿ, ಅಂಜುಮನ್ ಸಂಸ್ಥೆಯು ಯಾವುದೇ ತರಹದ ಕಟ್ಟಡ ಕಟ್ಟಬಹುದು ಎಂಬ ಆದೇಶ ಹೊರಡಿಸಲಾಯಿತು.

ಹುಬ್ಬಳ್ಳಿ: ಮೈದಾನದಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ನೀಡುವ ಆದೇಶಗಳನ್ನು ಪ್ರಶ್ನಿಸಿ ಬಿ.ಎಸ್.ಶೆಟ್ಟರ್ ಹಾಗೂ ಮಾಜಿ ಶಾಸಕ ಎಂ.ಜಿ.ಜರತಾರಘರ ಮೊದಲಾದವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಅಸಲು ದಾವಾ ನಂಬರ್ 359/1972) ಹುಬ್ಬಳ್ಳಿ ಮುನ್ಸಿಫ್ ಕೋರ್ಟ್‌ನಲ್ಲಿ 1972ರಲ್ಲಿ ದಾಖಲು ಮಾಡಿದರು. ಅಂಜುಮನ್ ಇಸ್ಲಾಂದವರಿಗೆ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶ ಕೊಡಬಾರದು. ಜಾಗೆ ನೀಡಿರುವುದು ಲೀಸ್ ಮೇಲಲ್ಲ; ಲೈಸನ್ಸ್ ಮೇಲೆ ಮಾತ್ರ. ಸಾರ್ವಜನಿಕರಿಗೆ ಈ ಮೈದಾನ ಉಪಯೋಗಿಸಲು ಹಕ್ಕು ಇದೆ ಎಂದು ತೀರ್ಮಾನಿಸಬೇಕು ಎಂದು ಮೊಕದ್ದಮೆಯಲ್ಲಿ ಕೋರಲಾಗಿತ್ತು.

1921ರಲ್ಲಿ ಮಾಡಲಾದ ವ್ಯವಹಾರದ ಪ್ರಕಾರ ಈ ಮೈದಾನವನ್ನು ನೀಡಿರುವುದು ಲೀಸ್ ಮೇಲಲ್ಲ; ಲೈಸನ್ಸ್ ಮೇಲೆ. ಮುಸ್ಲಿಂ ಬಾಂಧವರಿಗೆ ವರ್ಷಕ್ಕೆ ಎರಡು ಸಲ ಪ್ರಾರ್ಥನೆ ಸಲ್ಲಿಸಲು ಅವಕಾಶ ಇದೆ. ಈ ಮೈದಾನದಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ಕಲ್ಪಿಸುವ 1961 ಮತ್ತು 1962ರ ಸರ್ಕಾರ ಆದೇಶ ಕಾನೂನುಬಾಹಿರ. ಸಾರ್ವಜನಿಕರಿಗೆ ಈ ಮೈದಾನ ಉಪಯೋಗಿಸುವ ಹಕ್ಕು ಇದೆ. ಅಂಜುಮನ್-ಎ- ಇಸ್ಲಾಂ ನಿರ್ಮಿಸಿರುವ ಕಟ್ಟಡ ತೆಗೆದುಹಾಕಬೇಕು ಮತ್ತು ಮೈದಾನವನ್ನು ಮುಕ್ತವಾಗಿ ಸಾರ್ವಜನಿಕರಿಗೆ ಉಪಯೋಗಕ್ಕೆ ಕೊಡಬೇಕು ಎಂದು ಹುಬ್ಬಳ್ಳಿ ಮುನ್ಸಿಫ್ ನ್ಯಾಯಾಲಯವು 7.12.1973ರಂದು ತೀರ್ಪು ನೀಡಿತು.

ಈ ತೀರ್ಪಿನ ವಿರುದ್ಧ ಹುಬ್ಬಳ್ಳಿ ಸಿವಿಲ್ ಕೋರ್ಟ್‌ನಲ್ಲಿ ಮೇಲ್ಮನವಿಯನ್ನು 1974ರಲ್ಲಿ ಅಂಜುಮನ್ ಇಸ್ಲಾಂ ಸಲ್ಲಿಸಿತು. ಸಿವಿಲ್ ಕೋರ್ಟ್ 12.10.1982ರಂದು ಹುಬ್ಬಳ್ಳಿ ಮುನ್ಸಿಫ್ ಕೋರ್ಟ್ ಅದೇಶವನ್ನು ಎತ್ತಿಹಿಡಿಯಿತು. ತದನಂತರ ಹೈಕೋರ್ಟ್‌ನಲ್ಲಿ ಮತ್ತೆ ಮೇಲ್ಮನವಿ ಸಲ್ಲಿಸಲಾಯಿತು. 18.6.1992ರಂದು ಕೆಳಗಿನ ಎರಡೂ ಕೋರ್ಟ್‌ಗಳ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದು ತೀರ್ಪು ನೀಡಿತು.

1995ರಂದು ಅಂಜುಮನ್ ಇಸ್ಲಾಂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಉಭಯ ಪಕ್ಷಗಳು ಸೌಹಾರ್ದಯುತವಾಗಿ ವಿವಾದ ಇತ್ಯರ್ಥ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಸಲಹೆ ನೀಡಿತು. ಹಲವು ಸುತ್ತಿನ ಮಾತುಕತೆಗಳು ನಡೆದರೂ ಉಭಯತ್ರರು ಸಂಧಾನಕ್ಕೆ ಬರಲಿಲ್ಲ. ಅಂತಿಮವಾಗಿ 2010ರಂದು ಜ. 13ರಂದು ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಹೊರಬಿದ್ದಿತು.

ಸಂಘ ಪರಿವಾರದ ಹೋರಾಟ...
1992ರ ಜನವರಿ 26ರಂದು ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷ ಮುರಳಿ ಮನೋಹರ ಜೋಶಿ ನೇತೃತ್ವದಲ್ಲಿ ಕಾಶ್ಮೀರದ ಶ್ರೀನಗರ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವ ಆಂದೋಲನ. ಅದೇ ದಿನ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದ ಎಬಿವಿಪಿ, ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದರಿಂದ ವಿವಾದಕ್ಕೆ ತೀವ್ರತೆ.

ಈಗಿನ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಸಂಚಾಲಕರಾಗಿ ರಾಷ್ಟ್ರಧ್ವಜ ಸಂರಕ್ಷಣಾ ಸಮಿತಿ ರಚನೆ.

ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಅನಂತಕುಮಾರ ಮೊದಲಾದವರ ನೇತೃತ್ವದಲ್ಲಿ 1992ರ ಆಗಸ್ಟ್ 15ರಂದು ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಸಂಘ ಪರಿವಾರದಿಂದ ಹೋರಾಟಕ್ಕೆ ಚಾಲನೆ.

1994ರ ಆಗಸ್ಟ್ 15ರಂದು ಹೋರಾಟಕ್ಕೆ ಉಮಾ ಭಾರತಿ ಪ್ರವೇಶ. ಅಂದು ಕರ್ಫ್ಯೂ, ಪ್ರತಿಬಂಧಕಾಜ್ಞೆಯ ಸಂದರ್ಭದಲ್ಲಿ ದೇಶಪಾಂಡೆ ನಗರದಲ್ಲಿ ನಡೆದ ಗೋಲಿಬಾರ್‌ನಲ್ಲಿ ಐವರು ಸ್ಥಳದಲ್ಲೇ ಸಾವು. ಗಾಯಗೊಂಡಿದ್ದ ಹಲವರು ಆಸ್ಪತ್ರೆಗೆ. ಗಾಯಗೊಂಡವರ ಪೈಕಿ ಮರುದಿನ ಒಬ್ಬನ ಸಾವು. ಗೋಲಿಬಾರ್‌ಗೆ ಒಟ್ಟು ಆರು ಮಂದಿ ಬಲಿ.

ಗೋಲಿಬಾರ್ ತನಿಖೆಗೆ ನ್ಯಾ. ರಾಜಶೇಖರ ಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚನೆ. ಮೂರು ವರ್ಷ ವಿಚಾರಣೆ. ಪೊಲೀಸರು ಗೋಲಿಬಾರ್ ತಪ್ಪು ಎಂದು ಆಯೋಗ ಹೇಳಿತು. ಆರು ಮಂದಿ ಸತ್ತವರ ಕುಟುಂಬಕ್ಕೆ 5ರಿಂದ 10 ಲಕ್ಷ ರೂಪಾಯಿವರೆಗೆ ಸರ್ಕಾರದಿಂದ ಪರಿಹಾರ ಧನ ನೀಡಲಾಯಿತು.

* 1994ರ ಆಗಸ್ಟ್ 15ರ ಘಟನೆಗೆ ಸಂಬಂಧಿಸಿದಂತೆ ಉಮಾ ಭಾರತಿ ಹಾಗೂ ಇತರ ಹಲವರ ವಿರುದ್ಧ ಕೊಲೆ ಯತ್ನ ಹಾಗೂ ಸ್ಫೋಟಿಸುವ ಯತ್ನ ಪ್ರಕರಣ ದಾಖಲು.

* 1995ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಮಧ್ಯಸ್ಥಿಕೆಯಲ್ಲಿ ಅಂಜುಮನ್-ಎ-ಇಸ್ಲಾಂ ಪದಾಧಿಕಾರಿಗಳೇ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ವಿವಾದಕ್ಕೆ ತಾತ್ಕಾಲಿಕ ತೆರೆ.

* ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ 1994ರಲ್ಲಿ ದಾಖಲಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರೆಂಟನ್ನು ಹುಬ್ಬಳ್ಳಿಯ ನ್ಯಾಯಾಲಯ ಹೊರಡಿಸಿದ ಹಿನ್ನೆಲೆಯಲ್ಲಿ 2004ರ ಆಗಸ್ಟ್‌ನಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಉಮಾ ಭಾರತಿ ರಾಜೀನಾಮೆ ನೀಡಬೇಕಾಯಿತು.

Prajavani

No comments: