
ಪುತ್ತೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪ್ರಜಾಪ್ರಭುತ್ವ ಲಕ್ಷಣಗಳನ್ನು ಗಾಳಿಗೆ ತೂರಿದ್ದು, ನಾಯಕತ್ವ ಬೆಳೆಸುವ ಅವಕಾಶವನ್ನು ಇಲ್ಲದಾಗಿಸಿದೆ. ಹಿಂದೆ ಕೇವಲ ಸಲಹೆ ನೀಡುತ್ತಿದ್ದ ಸಂಘ ಪರಿವಾರ ರಾಜಕೀಯದಲ್ಲಿ ನಿರ್ಣಯ ತೆಗೆದು ಕೊಳ್ಳುವ ಮೂಲಕ ಸಂಘಟನೆಯ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಸ್ವಾಭಿಮಾನಿ ವೇದಿಕೆಯ ಗೌರವಾಧ್ಯಕ್ಷ ಕೆ. ರಾಮಭಟ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಬಿಜೆಪಿಯಲ್ಲಿ ಪರದೆಯ ಹಿಂದೆ ಕೋಲು ಹಿಡಿದುಕೊಂಡು ನಿಂತು ವ್ಯಕ್ತಿಗೆ ಆಯ್ಕೆ ಸ್ವಾತಂತ್ರ್ಯವನ್ನು ನೀಡಲಾಗಿದೆ. ಸಂಘ ಪರಿವಾರವೇ ಬಿಜೆಪಿ ರಾಜಕೀಯದಲ್ಲಿ ಮೂಗು ತೂರಿಸಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದು ಬಿಜೆಪಿ ಭವಿಷ್ಯಕ್ಕೆ ಪೆಟ್ಟು ನೀಡಲಿದೆ ಎಂದರು.
ಸರಕಾರಿ ಇಲಾಖೆಯ ಗುಮಾಸ್ತ ನಿಂದ ಹಿಡಿದು ಅಧಿಕಾರಿಗಳವರೆಗೆ ಎಸ್‌ಐಯಿಂದ ಹಿಡಿದು ಎಸ್ಪಿ ತನಕ ವರ್ಗಾವಣೆಯ ಉಸ್ತುವಾರಿಯನ್ನು ಸಂಘಪರಿವಾರವೇ ತೆಗೆದುಕೊಂಡಿದೆ. ಶಕ್ತಿಕೇಂದ್ರ ಎಂದು ಹೇಳುವ ಸಂಘ ಪರಿವಾರದ ವಿಭಾಗವೇ ವರ್ಗಾ ವಣೆಯ ತೀರ್ಮಾನವನ್ನು ತೆಗೆದು ಕೊಳ್ಳುತ್ತಿದೆ ಎಂದವರು ಆರೋಪಿ ಸಿದರು.
ಬಿಜೆಪಿಗೆ ಅರ್ಬುದ ರೋಗ ಬಂದಿದೆ ಎಂದು ಕೆಲ ಸಮಯದ ಹಿಂದೆ ಮೋಹನ್ ಭಾಗ್ವತ್ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ರಾಮಭಟ್, ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿಯವರಿಗೆ ಅನ್ಯಾಯವಾದಾಗಲೇ ಇದನ್ನು ಸೂಕ್ಷ್ಮವಾಗಿ ನಾನು ಹೇಳಿದ್ದೆ. ಆದರೆ ಯಾರೂ ಗಂಭೀರವಾಗಿ ತೆಗೆದುಕೊಂಡು ತಲೆಕೆಡಿಸಿಕೊಂಡಿ ರಲಿಲ್ಲ ಎಂದರು.
ಉದ್ಯಮಿ ಮುತ್ತಪ್ಪ ರೈಯವರ ಕಂಬಳ ಕಾರ್ಯಕ್ರಮಕ್ಕೆ ಹೋದರು ಮತ್ತು ಪಕ್ಷದ ಫಂಡ್‌ಗೆ ಕಪ್ಪ ನೀಡುವು ದಿಲ್ಲ ಎನ್ನುವ ಕಾರಣಕ್ಕೆ ಶಕುಂತಳಾ ಶೆಟ್ಟಿಯ ವರಿಗೆ ಟಿಕೆಟ್ ನಿರಾಕರಿಸುವ ಕೆಲಸ ಮಾಡಿದವರೇ ಈಗ ಮುತ್ತಪ್ಪ ರೈಯವರ ಹತ್ತಿರವಾಗಲು ಸ್ಪರ್ಧೆ ನಡೆಸುತ್ತಿದ್ದಾರೆ ಎಂದು ರಾಮ ಭಟ್ ವ್ಯಂಗ್ಯವಾಡಿದರು.
ಅಡಿಕೆ ಬೆಳೆಗಾರರ ಸ್ಥಿತಿ ಚಿಂತಾಜನಕ
ಮಲೆನಾಡು ಜಿಲ್ಲೆಗಳ ಅಡಿಕೆ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದ್ದು ಅಡಿಕೆ ಮಾರುಕಟ್ಟೆ ದರ ಕುಸಿತ, ಅತಿವೃಷ್ಟಿ, ಅಕಾಲಿಕ ಮಳೆಯಿಂದಾಗಿ ಅಡಿಕೆ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಸರಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಹೊಸ ಬಿಳಿಗೋಟು ಅಡಿಕೆಗೆ ಕನಿಷ್ಟ ರೂ. 100 ಮಾರುಕಟ್ಟೆ ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ಹಕ್ಕೊತ್ತಾಯ ಮಂಡಿಸಿ ಫೆಬ್ರವರಿ ತಿಂಗಳಲ್ಲಿ ಹೋರಾಟ ಆರಂಭಿಸ ಲಾಗುವುದು ಎಂದು ಶಕುಂತಳಾ ಶೆಟ್ಟಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಅಣ್ಣಾ ವಿನಯಚಂದ್ರ, ರಾಮಚಂದ್ರ ಅಮಲ ಹಾಜರಿದ್ದರು.
jayakirana
No comments:
Post a Comment