ಮೂಲ್ಕಿ: ದಿನವಿಡಿ ಟಿವಿ ನೋಡಿ ಸಮಯ ವ್ಯರ್ಥ ಮಾಡದೆ ಓದುವ ಬಗ್ಗೆ ಗಮನ ಹರಿಸು ಎಂದು ಮಗಳಿಗೆ ತಾಯಿ ಬುದ್ಧಿವಾದ ಹೇಳಿದ್ದನ್ನೇ ನೆಪ ಮಾಡಿಕೊಂಡ ಪ್ರತಿಭಾವಂತ ವಿದ್ಯಾರ್ಥಿನಿ ಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ನಿನ್ನೆ ಮೂಲ್ಕಿ ಬಳಿ ನಡೆದಿದೆ.
ಕೊಳಚಿಕಂಬಳದ ಗಣೇಶ್ ಪೂಜಾರಿ ಎಂಬವರ ಮಗಳು ಪ್ರಥ್ವಿನಿ (20) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ. ಈಕೆ ಪುತ್ತೂರಿನ ವಿವೇಕಾನಂದ ಇಂಜಿನಿಯರ್ ಕಾಲೇಜಿನ ತೃತೀಯ ವರ್ಷದ ಸಿವಿಲ್ ಇಂಜಿನಿಯರ್ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು. ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಈಕೆ ತಾಯಿ ಮತ್ತು ಇಬ್ಬರು ಸಹೋದರರೊಂದಿಗೆ ವಾಸವಾಗಿದ್ದಳು.
ತಾಯಿ ಶೋಭಾ ಮಗಳಿಗೆ ಬುದ್ದಿವಾದ ಹೇಳಿ ದ್ದೇ ಪ್ರಥ್ವಿನಿ ಆತ್ಮಹತ್ಯೆ ಮಾಡಲು ಕಾರಣ ಎಂದು ಹೇಳಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯಾದ ಈಕೆಯ ಸಾವು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ.
source: jayakirana
Jan 6, 2010
Subscribe to:
Post Comments (Atom)
No comments:
Post a Comment