VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 14, 2010

ಉಗ್ರರ ನುಸುಳುವಿಕೆ: ಕೃಷ್ಣ, ಖುರೇಷಿ ಚರ್ಚೆ

ಮುಂಬೈ ದಾಳಿ ಸಂಚುಕೋರರ ವಿರುದ್ಧದ ತನಿಖೆಯ ಪ್ರಗತಿ ಮತ್ತು ವಿಚಾರಣೆಯ ಫಲಿತಾಂಶದ ಕುರಿತು ವಿವರಣೆ ಬಯಸಿದ ಕೃಷ್ಣ, ಆದಷ್ಟು ಬೇಗ ತಪ್ಪಿತಸ್ಥರನ್ನು ಬಯಲಿಗೆಳೆದು ಶಿಕ್ಷಿಸುವಂತೆ ಆಗ್ರಹಪಡಿಸಿದರು.


ನವದೆಹಲಿ (ಪಿಟಿಐ): ದೇಶದೊಳಕ್ಕೆ ಉಗ್ರರ ನುಸುಳುವಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಬುಧವಾರ ಪಾಕ್ ವಿದೇಶ ಸಚಿವ ಷಾ ಮೆಹಮೂದ್ ಖುರೇಷಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ಈಗಲೂ ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆಗೆ ಬಳಕೆಯಾಗುತ್ತಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಪಡಿಸಲು ‘ಪರಿಣಾಮಕಾರಿ ಕ್ರಮ’ ಕೈಗೊಳ್ಳುವಂತೆ ಒತ್ತಾಯಿಸಿದರು.

ಮುಂಬೈ ದಾಳಿ ಸಂಚುಕೋರರ ವಿರುದ್ಧದ ತನಿಖೆಯ ಪ್ರಗತಿ ಮತ್ತು ವಿಚಾರಣೆಯ ಫಲಿತಾಂಶದ ಕುರಿತು ವಿವರಣೆ ಬಯಸಿದ ಕೃಷ್ಣ, ಆದಷ್ಟು ಬೇಗ ತಪ್ಪಿತಸ್ಥರನ್ನು ಬಯಲಿಗೆಳೆದು ಶಿಕ್ಷಿಸುವಂತೆ ಆಗ್ರಹಪಡಿಸಿದರು. ಜೊತೆಗೆ ಭಯೋತ್ಪಾದಕರ ಬಗೆಗಿನ ತನಿಖಾ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳುವಂತೆಯೂ ವಿನಂತಿಸಿದರು.

ಪಾಕಿಸ್ತಾನದಲ್ಲಿರುವ ಭಾರತೀಯ ಮೀನುಗಾರರು ಮತ್ತು ದೋಣಿಗಳ ಬಿಡುಗಡೆಗೂ ಮನವಿ ಮಾಡಿದ ಸಚಿವರು, ಇದಕ್ಕೆ ಪರ್ಯಾಯವಾಗಿ ಪಾಕ್ ಮೀನುಗಾರರು ಮತ್ತು ದೋಣಿಗಳನ್ನು ಭಾರತ ಬಿಡುಗಡೆ ಮಾಡುವುದೆಂದು ತಿಳಿಸಿದರು. ಈ ಸಂಬಂಧ ಈವರೆಗೆ ಕೈಗೊಂಡ ಕ್ರಮಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕೈದಿಗಳ ಸಮಸ್ಯೆ ಸೇರಿ ಎಲ್ಲ ಮಾನವೀಯ ವಿಷಯಗಳಿಗೆ ಸಂಬಂಧಿಸಿ ಪರಸ್ಪರ ಸಹಕರಿಸಲು ಉಭಯ ನಾಯಕರು ಒಪ್ಪಿದರಲ್ಲದೆ, ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

Prajavani

No comments: