VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 7, 2010

ಮಂಗಳೂರು: ಕಲ್ಲಿದ್ದಲು ಲಾರಿಗೆ ಬೆಂಕಿ

ಮಂಗಳೂರು: ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಗೆ ಮೂಲ್ಕಿ ಸಮೀಪದ ಪಡು ಪಣಂಬೂರು ಬಳಿ ಬುಧವಾರ ರಾತ್ರಿ ಬೆಂಕಿ ಹೊತ್ತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.

ಎನ್‌ಎಂಪಿಟಿಯಿಂದ ಹುಬ್ಬಳ್ಳಿ ಕಾರ್ಖಾನೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಗೆ ಅತಿ ಉಷ್ಣತೆಯಿಂದ ಬೆಂಕಿ ತಗುಲಿದೆ. ಲಾರಿ ಡ್ರೈವರ್ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಕದ್ರಿ ಹಾಗೂ ಪಾಂಡೇಶ್ವರದಿಂದ ತೆರಳಿದ ಅಗ್ನಿಶಾಮಕ ವಾಹನಗಳು ಸ್ಟೇಷನ್ ಅಧಿಕಾರಿ ಚಂದ್ರನಾಥ್ ನೇತೃತ್ವದಲ್ಲಿ ಬೆಂಕಿ ತಹಬದಿಗೆ ತರುವಲ್ಲಿ ಯಶಸ್ವಿಯಾದವು. ಉಡುಪಿ-ಮಂಗಳೂರು ಹೆದ್ದಾರಿಯಲ್ಲಿ ಎರಡು ಗಂಟೆ ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು.

source: prajaavaani

No comments: