VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 6, 2010

ಜ್ಯೋತಿ ಬಸು ಸ್ಥಿತಿ ಮತ್ತಷ್ಟು ವಿಷಮ


ಕೊಲ್ಕತ್ತಾ, ಜ. 6 : ಸಿಪಿಐ(ಎಂ) ಪಕ್ಷದ ಹಿರಿಯ ನಾಯಕ ಜ್ಯೋತಿ ಬಸು(95) ಅವರ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಗೊಂಡಿದ್ದು, ಸಾವು ಬದುಕಿನ ಹೋರಾಟ ನಡೆಸಿದ್ದಾರೆ. ಕಳೆದ ಕೆಲ ದಿನಗಳಿಂದ ಇಲ್ಲಿನ ಎಎಂಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಲದ ಮುತ್ಸದ್ಧಿ ರಾಜಕಾರಣಿ ಜ್ಯೋತಿ ಬಸು ಅವರು ನಿಧನರಾಗಿದ್ದಾರೆ ಗಾಳಿ ಸುದ್ದಿ ಹಬ್ಬಿತ್ತು. ಆದರೂ ಕೂಡಾ ಸಂಜೆ 6.20ಕ್ಕೆ ಅವರ ಸ್ಥಿತಿಯ ಈಗಲೇ ಏನನ್ನೂ ಹೇಳುವ ಸಾಧ್ಯವಿಲ್ಲ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದೆರ, ಕೆಲ ವೆಬ್ ಸೈಟ್ ಗಳು ಜ್ಯೋತಿ ಬಸು ನಿಧನ ಎಂದ ಸುದ್ದಿ ಪ್ರಕಟಿಸಿದ್ದು, ಭಾರಿ ಗೊಂದಲಕ್ಕೆ ಕಾರಣವಾಗಿದೆ. ತುರ್ತುನಿಗಾ ಘಟಕದಲ್ಲಿರುವ ಬಸು ಅವರಿಗೆ ಕೃತಕ ಉಸಿರಾಟವನ್ನು ಒದಗಿಸಲಾಗಿದೆ.
Source - Thats Kannada

No comments: