ಅತ್ತಿಮಬ್ಬೆ ವೇದಿಕೆ, ಗದಗ: ‘ನಮಗೀಗ ಎಂಥ ಕಾವ್ಯ ಬೇಕು? ತತ್ವಪದದ ಕಾವ್ಯ ಬೇಕೇ? ಬಸವಣ್ಣನ ತತ್ವಾನುಭ ವಗಳ ಮನಸ್ಸು ಅಗತ್ಯವಿದೆಯೇ?’
76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಆಶಯ ಭಾಷಣ ಮಾಡಿದ ಕವಿ ಅಲ್ಲಮ ಪ್ರಭು ಬೆಟ್ಟದೂರ ಕೇಳಿದ ಪ್ರಶ್ನೆ ಇದು.
ಈಗಿನ ಸಾಹಿತ್ಯ, ಸಾಮಾಜಿಕ ಸಂದರ್ಭವನ್ನೂ ಅವರೇ ಪ್ರಸ್ತಾಪಿಸಿ ‘ಜಾಗತೀಕರಣದ ಹೆಸರಲ್ಲಿ ಬಹುರಾ ಷ್ಟ್ರೀಯ ಕಂಪೆನಿಗಳು ನಮ್ಮ ಹುಡು ಗರಿಗೆ ರಜೆ ಕಸಿದುಕೊಂಡು ಶೋಷಿ ಸುತ್ತಿವೆ. ವೇಶ್ಯಾವಾಟಿಕೆ ನಡೆಸಲು ಪರವಾನಿಗೆ ಬೇಕೆಂದು ಶಾಸಕರು ಕೇಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯಾವ ಕಾವ್ಯ ಬೇಕು’ ಎಂದರು.
ಈಗಿನ ವಿಘಟನೆಯ ಕಾಲಘಟ್ಟ ದಲ್ಲಿ ಶಾಂತಿ ಸಹನೆ ಹಾಗೂ ಮಾನ ವೀಯತೆಯನ್ನು ಅರಸುವ ಕಾವ್ಯದ ಅಗ ತ್ಯ ವಿದೆ ಎಂದು ಉತ್ತರಿಸಿದರು.
ಅಧ್ಯಕ್ಷತೆ ವಹಿಸಿದ್ದ ದೊಡ್ಡರಂಗೇ ಗೌಡರು, ‘ಪ್ರೀತಿ-ಪ್ರೇಮ ಕುರಿತು ಗಂಟೆಗಟ್ಟಲೇ ಕವಿತೆ ಓದುವ ಕಾಲ ವಲ್ಲ ಇದು. ಜೊತೆಗೆ ಅಧ್ಯಾತ್ಮದ ಕುರಿತು ಓದುವ ಕಾಲ ಈಗಲ್ಲ. ಪರಂ ಪರೆಯನ್ನು ಮರೆಯದೆ, ಪೂರ್ವ ಸೂರಿಗಳ ಕಾವ್ಯ ಅರಿತು, ಈ ಮಣ್ಣಿನ ಕವಿತೆ ಬರೆಯಬೇಕಿದೆ. ಜೊತೆಗೆ ಕವಿತೆ ಅರಿವಿಗೆ, ಜಾಗೃತಿಗೆ, ಪರಾಮರ್ಶೆಗೆ ಒಡ್ಡಿಕೊಳ್ಳಲು ಸಾಧನ. ಹೀಗಾಗಿ ಪ್ರಸ್ತುತ ಸಮಾಜಕ್ಕೆ ಕವಿತೆ ಅಸ್ತ್ರ ವಾಗಲಿ, ಮಾರಕಾಸ್ತ್ರವಾಗದಿರಲಿ’ ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಕವಿತೆ ವಾಚಿಸಿದ 32 ಮಂದಿ ಕವಿಗಳು ಮುಖ್ಯವಾಗಿ ಪ್ರಸ್ತಾ ಪಿ ಸಿದ್ದು ಸದ್ಯದ ರಾಜಕೀಯ ಸ್ಥಿತಿಗತಿ, ಕೋಮು ಸೌಹಾರ್ದ ಕೆದಕುವ ಘಟನೆಗಳನ್ನು. ‘ಯಾವಾಗ ಕವಿತೆ ಹೊರ ಬ ರುತ್ತದೆ ಕವಿತೆ? ಉತ್ತರ ಗೊತ್ತಿಲ್ಲ’ ಎಂದು ಕವಿತೆ ಆರಂಭಿಸಿದ ಎಚ್.ಎಲ್. ಪುಷ್ಪ, ‘ನೆನಪುಗಳು ನೆಟ್ಟ ಗಾ ಗಲು ಎಷ್ಟೊಂದು ಮಾತು ಮೀರಿದ ನಿಶಬ್ದ’ ಎಂದು ನಿವೇದಿಸಿದರು.
ಮುಕ್ಕೋಟಿ ದೇವತೆಗಳ ಕರ ಮುಗಿದು ಕೇಳುತ್ತೇನೆ ಅಯ್ಯಗಳಿರಾ, ನಾನು ಸಾಕಿದ ಹಸುವಿನ ಮೇಲೆಯೇ
ಏಕೆ ನೀವು ವಾಸವಾಗಿದ್ದೀರಿ?... ಎಂದು ಪ್ರಶ್ನಿಸುವ ಮೂಲಕ ಕವಿತೆ ಶುರು ಮಾಡಿದ ಬಿ.ಎಂ. ಹನೀಫ್, ಸನಾ ತನನೂ ನಿರಾಕಾರನೂ ಆದ ಅಲ್ಲಾ ಹುನನ್ನು ಕೇಳುತ್ತೇನೆ. ರಕ್ತ ಚೆಲ್ಲುವ ನಿನ್ನ ಜಿಹಾದಿಗೆ ಏನರ್ಥ’ ಎಂದು ಕೇಳುವ ಮೂಲಕ ಪ್ರಸ್ತುತ ದೇಶದ ವಿದ್ಯಮಾನಗಳನ್ನು ಅತ್ಯಂತ ವ್ಯಂಗ್ಯ ವಾಗಿ ಕವಿತೆ ಮೂಲಕ ಕಟ್ಟಿಕೊಟ್ಟರು.
ಗುಡಿ, ಚರ್ಚು, ಮಸೀದಿಗಳ ಇಂದಿನ ಅವಸ್ಥೆ ಬಿಂಬಿಸಿದ ಟಿ. ಯಲ್ಲ ಪ್ಪರ ‘ದೇವರ ಹೆಣಗಳ ಚರಮಗೀತೆ’, ಸಂಗಮೇಶ ಉಪಾಸೆ, ನಿರ್ಮಲಾ ಶೆಟ್ಟರ ಹಾಗೂ ಚಂದ್ರಶೇಖರ ಹಿರೇಮಠರ ನೆರೆಹಾ ವಳಿಯ ಅನಾಹುತ ಕುರಿತ ಕವಿತೆ ಗಳಿದ್ದವು.
ಚಿಂತಾಮಣಿ ಕೊಡ್ಲೆಕೆರೆ ಅವರ ‘ಭೋಗದಲ್ಲಿ ಇಲ್ಲ ಸುಖ, ಕೇಳು ನನ್ನ ಸುಖ’, ಡಿ.ಎಸ್. ರಾಮಸ್ವಾ ಮಿಯ ಬೆಂಕಿಕಡ್ಡಿಗಳು, ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ನೆರೆಹಾ ವಳಿ ಬಂದರೂ ಕುಡಿಯುವ ನೀರು ಮುಟ್ಟಲಾಗದೆ ಹಿಂಸೆ ಅನುಭ ವಿಸಿದ ದಲಿತರಿಗೆ ಕಾಡಿದ ಅಸ್ಪೃಶ್ಯತೆ ಕುರಿತ ಸುಬ್ಬು ಹೊಲೆಯಾರ್‌ರ ‘ತಥಾಗತನ ಉಸಿರು ತಾಗಿ ಹೋದಂತೆ’ ಕವಿತೆ ಗಮನ ಸೆಳೆದವು.
source: ಗಣೇಶ ಅಮೀನಗಡ / ಪ್ರಜಾವಾಣಿ ವಾರ್ತೆ
Feb 22, 2010
Subscribe to:
Post Comments (Atom)
No comments:
Post a Comment