VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 18, 2010

ತುಂಡು ಲಂಗ, ಕುಡಿತವೂ ಅತ್ಯಾಚಾರಕ್ಕೆ ಕಾರಣ: ಮಹಿಳೆಯರು





ಲಂಡನ್, ಗುರುವಾರ, 18 ಫೆಬ್ರವರಿ 2010( 11:01 IST )

ತುಂಡು ಲಂಗ ಹಾಕಿಕೊಂಡು ಸುತ್ತಾಡುವುದು, ಪುರುಷರೊಂದಿಗೆ ಮದ್ಯ ಸೇವಿಸುವುದು ಮುಂತಾದ ಕಾರಣಗಳಿಂದ ಮಹಿಳೆ ಹೆಚ್ಚಾಗಿ ಅತ್ಯಾಚಾರಗೊಳಗಾಗುತ್ತಾಳೆ, ಇದಕ್ಕೆ ಸ್ವತಃ ಅತ್ಯಾಚಾರಕ್ಕೊಳಗಾದ ಮಹಿಳೆಯೂ ಕಾರಣ ಎಂದು ಆಂಗ್ಲ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅರ್ಧದಷ್ಟು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್‌ನ 'ಡೈಲಿ ಮೇಲ್' ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಒಂದು ಸಾವಿರ ವಯಸ್ಕ ಪುರುಷ-ಮಹಿಳೆಯರನ್ನು ಸಂದರ್ಶನ ನಡೆಸಲಾಗಿತ್ತು.


ಮಹಿಳೆಯೊಬ್ಬಳ ಮೇಲೆ ದಾಳಿ ನಡೆದಿದ್ದರೆ, ಅದಕ್ಕೆ ಅತ್ಯಾಚಾರಕ್ಕೊಳಗಾದವಳೇ ಭಾಗಶಃ ಹೊಣೆ ಎಂದು ಪುರುಷರಿಗಿಂತಲೂ ಮಹಿಳೆಯರು ಅದರಲ್ಲೂ 18ರಿಂದ 24ರ ಹರೆಯದ ನಡುವಿನ ಶೇ.54ರಷ್ಟು ಯುವತಿಯರು ಅಭಿಪ್ರಾಯಪಟ್ಟಿದ್ದಾರೆ

ಲಂಡನ್‌ನಲ್ಲಿನ ಲೈಂಗಿಕ ಕಿರುಕುಳಕ್ಕೊಳಗಾದವರ ನೆಮ್ಮದಿ ಕೇಂದ್ರಗಳಲ್ಲೊಂದಾದ 'ವೈಟ್ ಚಾಪೆಲ್ ಕೇಂದ್ರ'ದ ವ್ಯವಸ್ಥಾಪಕಿ ಎಲಿಜಬೆತ್ ಹ್ಯಾರಿಸನ್ ಕೂಡ ಇದೇ ಮಾತನ್ನು ಧ್ವನಿಸುತ್ತಾರೆ. 'ನ್ಯಾಯಾಲಯಗಳಲ್ಲಿರುವ ಮಹಿಳೆಯರ ಪ್ರಕರಣಗಳನ್ನು ನೋಡುವಾಗ ಆಕೆ ಬಹುತೇಕ ಸಂದರ್ಭಗಳಲ್ಲಿ ಕುಡಿದಿರುತ್ತಾಳೆ ಅಥವಾ ತುಂಡು ಲಂಗ ತೊಟ್ಟಿರುತ್ತಾಳೆ. ನಾನು ಹಾಗೆ ನಡೆದುಕೊಳ್ಳುವುದಿಲ್ಲ, ಹಾಗಾಗಿ ನನಗೆ ಅಂತಹ ಪರಿಸ್ಥಿತಿ ಎದುರಾಗದು' ಎಂದು ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.

18ರಿಂದ 24 ವರ್ಷದ ನಡುವಿನವರ ಪ್ರಕಾರ ಬಾರ್ ಸಂಭಾಷಣೆಯಲ್ಲಿ ತೊಡಗಿರುವುದು ಅಥವಾ ತಮ್ಮ ಜತೆಗಾರರೊಂದಿಗೆ ಕುಡಿಯಲು ಮುಂದಾಗುವುದು ಅತ್ಯಾಚಾರ ಪ್ರಕರಣಗಳಿಗೆ ಇಂಬು ನೀಡುತ್ತದೆ. ಹಾಗಾಗಿ ಇದು ಕೂಡ ಒಂದು ಕಾರಣ ಎಂದು ಹೇಳಿಕೊಂಡಿದ್ದಾರೆ.

ಈ ವಯಸ್ಸಿನ ಶೇ.24ರಷ್ಟು ಮಂದಿಯ ಪ್ರಕಾರ ತುಂಡು ಲಂಗ ಧರಿಸುವುದು, ಕುಡಿಯುವುದು ಅಥವಾ ಅತ್ಯಾಚಾರಿಯೊಂದಿಗೆ ಸಂಭಾಷಣೆ ನಡೆಸುವುದು ಕೂಡ ಬಲಿಪಶುವಿನ ಪರಿಸ್ಥಿತಿಗೆ ಭಾಗಶಃ ಹೊಣೆಯಾಗಿರುತ್ತದೆ.

ಶೇ.14ರಷ್ಟು ಮಹಿಳೆಯರ ಪ್ರಕಾರ ಅತ್ಯಾಚಾರವೆನ್ನುವುದು ಕೆಲವು ಸಂದರ್ಭಗಳಲ್ಲಿ ಆಹ್ವಾನಿಸಿಕೊಂಡದ್ದಾಗಿರುತ್ತದೆ. ಹತ್ತರಲ್ಲಿ ಒಬ್ಬರ ಪ್ರಕಾರ ಪ್ರಚೋದನಾಕಾರಿಯಾಗಿ ನರ್ತಿಸುವುದು, ಸರಸ-ಸಲ್ಲಾಪ ಅಥವಾ ಪಾರದರ್ಶಕ ಉಡುಪುಗಳನ್ನು ಧರಿಸುವುದರಿಂದ ಮಹಿಳೆ ಬಲಿಪಶುವಾಗಲು ಕಾರಣಳಾಗುತ್ತಾಳೆ.

ತನ್ನ ಜತೆಗಾತಿ ಸೆಕ್ಸ್ ಬಯಸದೇ ಇದ್ದರೂ ತಾನು ಆಕೆಯ ಜತೆ ಸೆಕ್ಸ್ ನಡೆಸಿದಲ್ಲಿ ಅದನ್ನು ಅತ್ಯಾಚಾರ ಎಂದು ನಾವು ಯೋಚಿಸುವುದಿಲ್ಲ ಎಂದು ಶೇ.35ರಷ್ಟು ಪುರುಷರು ಹೇಳಿದ್ದಾರೆ. ಅಲ್ಲದೆ ಶೇ.13ರಷ್ಟು ಪುರುಷರು ತಾವು ವಿಪರೀತ ಪಾನಮತ್ತರಾಗಿದ್ದಾಗ ತಾವೇನು ಮಾಡುತ್ತಿದ್ದೇವೆ ಎಂಬುದು ತಿಳಿಯದೆ ಜತೆಗಾತಿಯೊಂದಿಗೆ ಮಿಲನ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ.
webdunia

No comments: