VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 21, 2010

ಬಾಲ್ಯವಿವಾಹ, ಭಾರತದ ಬಗೆಹರಿಯದ ಸಮಸ್ಯೆ!


ನವದೆಹಲಿ, ಫೆ. 21: ಭಾರತದ ಬಗೆಹರಿಯದ ಸಾಮಾಜಿಕ ಸಮಸ್ಯೆಗಳಲ್ಲಿ ಬಾಲ್ಯವಿವಾಹ ಅತಿದೊಡ್ಡ ಪಿಡುಗು. ಒಂದು ಅಂದಾಜಿನ ಪ್ರಕಾರ, ಶೇ.50ಕ್ಕೂ ಹೆಚ್ಚು ನವವಧುಗಳ ವಯಸ್ಸು 18ಕ್ಕಿಂತಲೂ ಕಡಿಮೆ ಆಗಿರುತ್ತದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ತಿಳಿಸಿದರು.

ದೆಹಲಿಯ ಪಾಪುಲೇಷನ್ ಕೌನ್ಸಿಲ್ ಹಾಗೂ ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಪಾಪುಲೇಷನ್ ಸೈನ್ಸ್, ಮುಂಬಯಿ ಈ ಸಮೀಕ್ಷೆಯನ್ನು ನಡೆಸಿದೆ. 15ರ ಹರೆಯದಲ್ಲಿ ಮದುವೆಯಾಗುವವರ ಸಂಖ್ಯೆ ಶೇ.50ಕ್ಕೂ ಹೆಚ್ಚು. ಶೇ.49 ರಷ್ಟು ನವವಿವಾಹಿತರ ವಯಸ್ಸು 18ವರ್ಷ ದಾಟಿರುವುದಿಲ್ಲ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶ, ಬಿಹಾರ್, ಜಾರ್ಖಂಡ್,ಮಹಾರಾಷ್ಟ್ರ, ರಾಜಸ್ತಾನ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಬಾಲ್ಯವಿವಾಹ ಅಂಕಿ ಅಂಶ ಸಂಗ್ರಹ ಕಾರ್ಯ 2006ರಿಂದಲೇ ಶುರುವಾಗಿದ್ದು, ಈಗ ಪೂರ್ಣಗೊಂಡಿದೆ.

ಬಿಹಾರದಲ್ಲಿ ಶೇ. 77ರಷ್ಟು ಅಪ್ರಾಪ್ತ ವಯಸ್ಕರು ಮದುವೆಯಾಗಿರುವ ವರದಿ ಸಿಕ್ಕಿದೆ. ಆದರೆ, ಇವುಗಳಲ್ಲಿ ಹೆಚ್ಚಿನವು ಕುಟುಂಬದವರು ನೋಡಿ, ಒಪ್ಪಿಗೆ ಮೂಲಕ ಮದುವೆ ಜರುಗಿದವುಗಳಾಗಿವೆ. ಅಪ್ರಾಪ್ತ ಯುವತಿಯರ ಹೇಳಿಕೆ ಪ್ರಕಾರ, ತಮ್ಮ ಒಪ್ಪಿಗೆಗೆ ಇಲ್ಲಿ ಬೆಲೆಯಿಲ್ಲ. ಕುಟುಂಬದವರು ಒಪ್ಪಿದ ಮೇಲೆ ಮುಗಿಯಿತು, ತೋರಿಸಿದ ಗಂಡಿಗೆ ಕೊರಳೊಡ್ಡುವುದಷ್ಟೇ ನಮ್ಮ ಪಾಲಿಗೆ ಉಳಿಯುವುದು ಎನ್ನುತ್ತಾರೆ.

ಅಪ್ರಾಪ್ತ ವಯಸ್ಸಿಗೆ ಮದುವೆಯಾಗುವುದರ ಜೊತೆಗೆ ಬೇಡದ ವಯಸ್ಸಿನಲ್ಲಿ ತಾಯ್ತನದ ಭಾರ ಹೊರುವವರ ಸಂಖ್ಯೆಯೂ ಅಧಿಕವಾಗಿದೆ. ಇದರಿಂದ ಆರೋಗ್ಯಪೂರ್ಣ ಮಕ್ಕಳ ಜನನವೂ ಕಡಿಮೆ, ಜೊತೆಗೆ ತಾಯಿ ಆರೋಗ್ಯಕ್ಕೂ ಮಾರಕ ಎಂದು ಹಳ್ಳಿಗರಿಗೆ ಮನವರಿಕೆ ಮಾಡುವ ಅಗತ್ಯವಿದೆ ಎಂದು ಸಚಿವ ಆಜಾದ್ ಅಭಿಪ್ರಾಯಪಟ್ಟಿದ್ದಾರೆ.

ಕ್ರಪೆ - ದಟ್ಸ್ ಕನ್ನಡ

No comments: