
ಪ್ರತಿವರ್ಷ 45,000ಕ್ಕೂ ಹೆಚ್ಚು ಹಜ್ ಯಾತ್ರಿಗಳು ಹಾಗೂ 10,000ಕ್ಕೂ ಹೆಚ್ಚು ಉಮ್ರಾ ಯಾತ್ರಿಗಳು ದಕ್ಷಿಣ ಭಾರತದಿಂದ ಸೌದಿ ಅರೇಬಿಯಾದಲ್ಲಿನ ಪವಿತ್ರ ಸ್ಥಳಗಳಿಗೆ ತೆರಳುತ್ತಾರೆ.
ಸದ್ಯ ಅವರು ವೀಸಾ ಪಡೆಯಲು ದೆಹಲಿ ಅಥವಾ ಮುಂಬೈಗೆ ತೆರಳಬೇಕಿದೆ. ಬೆಂಗಳೂರಿನಲ್ಲಿ ವೀಸಾ ಕಚೇರಿ ಆರಂಭಿಸಿದರೆ ಯಾತ್ರಿಗಳಿಗೆ ಅನುಕೂಲವಾಗಲಿದೆ ಎಂದು ನಿಯೋಗದ ಅಧ್ಯಕ್ಷ ಐ.ಎ. ಸಿದ್ಧಿಕಿ ಹಾಗೂ ಕಾಂಗ್ರೆಸ್ ಮುಖಂಡ ಸಲೀಂ ಅಹ್ಮದ್ ಅವರು ಕೃಷ್ಣ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ವಾರ್ತೆ
No comments:
Post a Comment