
ಮಂಜೇಶ್ವರ: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವಾರ್ತಾ ಭಾರತಿಯ ವರದಿಗಾರ, ಮಂಗಳೂರು ವಿ.ವಿ.ಯ ಎಂಎ ವಿದ್ಯಾರ್ಥಿ ಆರೀಫ್ ಮಚ್ಚಂಪಾಡಿ ಅವರಿಗೆ ವಿನಾ ಕಾರಣ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಮಚ್ಚಂಪಾಡಿಯಲ್ಲಿರುವ ತನ್ನ ಮನೆಗೆ ತೆರೆಳುತ್ತಿದ್ದ ಆರೀಫ್‌ಗೆ ಬಡಾಜೆ ನಿವಾಸಿ ಖಲೀಲ್ ಯಾನೆ ಅಬ್ಬಕ್ಕ ಪಿಟ್ಟ ಎನ್ನುವಾತ ಹಲ್ಲೆ ನಡೆಸಿ, ಜೀವಬೆದರಿಕೆಯೊಡ್ಡಿದ್ದ. ಆರೀಫ್ ಇಲ್ಲಿನ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಆರೋಪಿ ಖಲೀಲ್ ಮೇಲೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಈಗಾಗಲೇ ಹೆದ್ದಾರಿ ದರೋಡೆ ಸೇರಿದಂತೆ ಕೊಲೆ ಯತ್ನ, ಮತ್ತಿತರ ಕುಕೃತ್ಯಗಳಲ್ಲಿ ಭಾಗಿಯಾಗಿದ್ದನೆನ್ನಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವರದಿಗಾರನ ಮೇಲಿನ ಹಲ್ಲೆ ಪ್ರಕರಣವನ್ನು ಕುಂಬಳೆ ಪ್ರೆಸ್ ಫಾರಂ ಖಂಡಿಸಿದೆ.
jayakirana
No comments:
Post a Comment