VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 15, 2010

ಶಾರ್ಜಾ: ಬ್ಯಾರೀಸ್ ಕಲ್ಚರಲ್ ಫೋರಂ ವಾರ್ಷಿಕ ಕ್ರೀಡಾಕೂಟ - ಮಾರ್ಚ್ 19 ರಂದು


ಶಾರ್ಜಾ, ಮಾರ್ಚ್ 15: ಇದೇ ಶುಕ್ರವಾರ ತಾ.19ರಂದು ಬ್ಯಾರೀಸ್ ಕಲ್ಚರಲ್ ಫೋರಂ ಶಾರ್ಜಾ ವಿಭಾಗದ ಆಶ್ರಯದಲ್ಲಿ ಈ ಸಾಲಿನ ಬಿ.ಸಿ.ಎಫ್ ಕ್ರೀಡಾ ಕೂಟ ನೆಡೆಯಲಿದೆ ಎಂದು ಕ್ರೀಡಾ ಸಮಿತಿಯ ಅದ್ಯಕ್ಷ ಮಹಮ್ಮದ್ ಶಹದಾರವರು ತಿಳಿಸಿದ್ದಾರೆ.
ಶಾರ್ಜಾ ನ್ಯಾಶನಲ್ ಪೈಂಟ್ ರೌಂಡ್ ಅಬೌಟ್ ಹತ್ತಿರ ಇರುವ ಗಲ್ಫ್ ಏಷಿಯನ್ ಇಂಗ್ಲೀಷ್ ಸ್ಕೂಲ್ ಹೊರಾಂಗಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆಯವರೆಗೆ ನೆಡೆಯಲಿರುವ ಈ ಕ್ರೀಡಾ ಕೂಟವು ದಿನ ಪೂರ್ತಿ ನಕ್ಕು ನಲಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಲ್ಲಾ ಬ್ಯಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕೀಡಾ ಕೂಟವನ್ನು ಯಶಸ್ವಿಯಾಗಿಸಲು ಸಹಕರಿಸಬೇಕೆಂದು ಕ್ರೀಡಾ ಸಮಿತಿ ಕರೆ ನೀಡಿದೆ.
ಬಿ.ಸಿ.ಎಫ್ ಅಧ್ಯಕ್ಷ ಡಾ.ಬಿ.ಕೆ.ಯುಸುಫ್, ಕಾರ್ಯದರ್ಶಿ ಡಾ.ಕಾಪು ಮಹಮ್ಮದ್, ಉಪಾಧ್ಯಕ್ಷ ಅಬು ಸಾಲಿಹ ಹಾಗೂ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ನೋಯಲ್ ಅಲ್ಮೇಡಾ ಬಾಗವಹಿಸಲಿರುವ ಈ ಸಡಗರದಲ್ಲಿ ಮದ್ಯಾಹ್ನ ಸ್ವಾದಿಷ್ಟ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ವಿವರಗಳಿಗೆ ಕ್ರೀಡಾ ಸಮಿತಿಯ ಅಧ್ಯಕ್ಷ ಮಹಮ್ಮದ್ ಶಹದಾ ( 050-7152888), ಉಪಾಧ್ಯಕ್ಷರುಗಳಾದ ಹುಮಾಯೂನ್ (050- 5451034), ಅಬ್ದುಲ್ ಲತೀಫ್ (050-6530518) ಹಾಗೂ ಇರ್ಶಾದ್ (050-8714373), ಅಬ್ದುಲ್ ರಹಿಮಾನ್ ಸಜಿಪ, ಆಫಿಕ್ ಹುಸೈನ್ (050- 5883943) ಮತ್ತು ಮಹಮ್ಮದ್ ಇಕ್ಬಾಲ್ (050-5149106) ರವರನ್ನು ಸಂಪರ್ಕಿಸಬಹುದಾಗಿದೆ.

No comments: