VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 11, 2010

ಅಯ್ಯಬ್ಬಾ...ಶೇ.33 ಜಾರಿಯಾದ್ರೆ ನಮ್ಮ ಗತಿಯೇನು?: ಸಿದ್ದರಾಮಯ್ಯ

ನಿಮ್ಮೊಬ್ಬರನ್ನೇ ತಡೆದುಕೊಳ್ಳಲು ಆಗುತ್ತಿಲ್ಲ, ಇನ್ನು ಶೇ.33ರಷ್ಟು ಮಂದಿ ಮಹಿಳೆಯರು ಸದನದೊಳಗೆ ಬಂದು ಬಿಟ್ಟರೆ ನಮ್ಮ ಗತಿಯೇನು? - ಹೀಗೆ ಆತಂಕ ವ್ಯಕ್ತಪಡಿಸಿದವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ!

ಇದಕ್ಕೆ ಕಾರಣ ಇಲ್ಲದಿಲ್ಲ. ವಿಧಾನಮಂಡಲದ ಕಲಾಪದ ಶೂನ್ಯ ವೇಳೆಯಲ್ಲಿ ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಂಘಕ್ಕೆ ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ 12 ಕೋಟಿ ರೂ. ಬಿಡುಗಡೆ ಮಾಡದ ಕುರಿತು ಕಾಂಗ್ರೆಸ್‌ನ ರಮನಾಥ ರೈ ಅವರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಶಾಸಕಿ ಶೋಭಾ ಕರಂದ್ಲಾಜೆ ಜೋರು ಧ್ವನಿಯಲ್ಲಿ ವಾದ ಮಂಡಿಸಿದರು.

ಈ ಸಂದರ್ಭದಲ್ಲಿ ತಮಾಷೆ ಮಾಡಿದ ಸಿದ್ದರಾಮಯ್ಯ, ಸಚಿವ ಸ್ಥಾನ ಹೋದ ನಂತರ ಸದನದಲ್ಲಿ ಸುಮ್ಮನಾಗಿದ್ದ ಶೋಭಾ ಅವರು, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದ ಕೂಡಲೇ ಧ್ವನಿ ಎತ್ತರಿಸಿ ಬಿಟ್ಟಿದ್ದಾರೆ. ಇವರೇ ಈ ರೀತಿ ಮಾಡಿದರೆ ನಮಗೆ ತಡೆಕೊಳ್ಳಲು ಕಷ್ಟವಾಗುತ್ತಿದೆ. ಇನ್ನು ಶೇ. 33ರಷ್ಟು ಮಹಿಳೆಯರು ಸದನಕ್ಕೆ ಆಗಮಿಸಿದರೇ ನಮ್ಮ ಗತಿ ಏನು ಎಂದು ಛೇಡಿಸಿದರು.

ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಂಘದ ಪುನಶ್ಚೇತನಕ್ಕೆ ಹಣ ಬಿಡುಗಡೆ ಮಾಡಬೇಕೆಂದು ಶಾಸಕ ರಮನಾಥ ರೈ ಆಗ್ರಹಿಸಿದಾಗ, ಸದನದಲ್ಲಿ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಈ ಸಂದರ್ಭದಲ್ಲಿ ಎದ್ದು ನಿಂತ ಬಿಜೆಪಿ ಸರ್ಕಾರವನ್ನು ಟೀಕಿಸುವ ಬದಲು ರಮನಾಥ ರೈ ಮೊದಲು ದಕ್ಷಿಣ ಕನ್ನಡ ಸಂಪರ್ಕಿಸಲು ಇರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಸಮರ್ಪಕವಾಗಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿಬೇಕೆಂದು ಅವರು ಒತ್ತಾಯಿಸಿದರು.

No comments: