ಶನಿವಾರಸಂತೆ: ಭಾರತಿ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀ ಕ್ಷೆಗಳು  ನಡೆಯುತ್ತಿದ್ದು, ಶೇ 90ಕ್ಕಿಂತಲೂ ಅಧಿಕ ಅಂಗವೈಕಲ್ಯ ಇರುವ ಎಂ.ಧಾತ್ರಿ ಎಂಬ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿ  ಪ್ರಶಂಸೆಗೆ ಪಾತ್ರ ಳಾಗಿದ್ದಾಳೆ.
ಮೆದುಳುಬಳ್ಳಿಯ ಊನದಿಂದ ಬಳಲುತ್ತಿರುವ ಧಾತ್ರಿಗೆ ನಡೆಯಲಾಗದು. ಸರಿಯಾಗಿ ಕುಳಿತು ಕೊಳ್ಳಲಾಗದು.  ಮಾತನಾಡಲಾಗದು. ಕುತ್ತಿಗೆಗೂ ಬಲ ಇಲ್ಲ. ಒಂದು ಕೈಯನ್ನು ತಲೆಗೆ ಆಧಾರ ವಾಗಿ ಇಟ್ಟುಕೊಂಡು ಬರೆಯುವುದು, ಓದುವುದು ಈಕೆಯ ರೂಢಿ.
ಆಲೂರಿನ ಸಿದ್ಧಾಪುರ ಪದವಿಪೂರ್ವ ಕಾಲೇಜಿನಲ್ಲಿ ಖಾಸಗಿ ಅಭ್ಯರ್ಥಿ ಈ ಧಾತ್ರಿ. ಈಗ ಈಕೆ ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾಳೆ. ಕನ್ನಡ ಮತ್ತು ರಾಜ್ಯಶಾಸ್ತ್ರ ಪರೀಕ್ಷೆ ಬರೆದಿರುವ ಧಾತ್ರಿ ಮುಂದಿನ ಪರೀಕ್ಷೆಯ ಸಿದ್ಧತೆಯಲ್ಲಿದ್ದಾಳೆ. ಕುರ್ಚಿಯಲ್ಲಿ ಕುಳಿತು ಬರೆಯಲಾಗದೇ ನೆಲದ ಮೇಲೆ ಚಾಪೆ ಹಾಸಿಕೊಂಡು ಕುಳಿತು ಪ್ರಯಾಸದಿಂದ ಪರೀಕ್ಷೆ ಬರೆಯುತ್ತಿರುವ  ಧಾತ್ರಿಯ ಉತ್ಸಾಹ ಎಲ್ಲರನ್ನು ಬೆರಗುಗೊಳಿಸುತ್ತಿದೆ. ಎಡಗೈಯನ್ನು ಕುತ್ತಿಗೆಗೆ ಆಧಾರವಾಗಿಟ್ಟು ಕುಳಿತು ಬರೆಯುತ್ತಿದ್ದಾಳೆ.
ಮನೆಯಲ್ಲೆ ಅಧ್ಯಯನ ಮಾಡಿಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಳಾಗಿರುವ ಧಾತ್ರಿ ಇದೀಗ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾಳೆ. ಬೆಳಿಗ್ಗೆ 5 ಗಂಟೆಗೆ ಎದ್ದು ಅಭ್ಯಾಸದಲ್ಲಿ ತೊಡ ಗುವ ಧಾತ್ರಿ ರಾತ್ರಿ 11 ಗಂಟೆಯವರೆಗೂ ಓದುತ್ತಿರುತ್ತಾಳೆ. ಈ ವಿದ್ಯಾರ್ಥಿನಿಯ ಪ್ರಯತ್ನ ಮತ್ತು ಪ್ರತಿಭೆಗೆ ತಂದೆ ಎಂ.ನಾಗೇಶ್ ಹಾಗೂ ತಾಯಿ ಜಯಲಕ್ಷ್ಮಿಯವರೇ ಪ್ರೋತ್ಸಾಹಕರು.
ಶೇಕಡ 90ಕ್ಕಿಂತಲೂ ಅಧಿಕ ಅಂಗವೈಕಲ್ಯ ಇರುವ ಧಾತ್ರಿ ಪುಸ್ತಕ, ದಿನಪತ್ರಿಕೆಗಳನ್ನು ತಪ್ಪದೆ ಓದುತ್ತಾಳೆ. ಟಿವಿ ನೋಡುವುದು ಅದರಲ್ಲೂ ಕ್ರಿಕೆಟ್ ಮ್ಯಾಚ್ ನೋಡುವುದೆಂದರೆ ಅಚ್ಚುಮೆಚ್ಚು. ಚಿತ್ರ ಬರೆಯುತ್ತಾಳೆ. ಚುಟುಕು, ಕವನ ಬರೆದು ಬಹುಮಾನ ಗಳಿಸಿದ್ದಾಳೆ.
Subscribe to:
Post Comments (Atom)
No comments:
Post a Comment