VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 9, 2010

ವಿಟ್ಲ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಿಳಾ ಘಟಕ ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ







ವಿಟ್ಲ: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿಟ್ಲ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ನ್ಯಾಷನಲ್ ವಿಮೆನ್ಸ್ ಫ್ರಂಟ್ ಪಧಾದಿಕಾರಿಗಳು ಹಣ್ಣು ಹಂಪಲು ವಿತರಿಸುವುದರ ಜೊತೆಗೆ ಅವರ ಯೋಗಕ್ಷೇಮ ವಿಚಾರಿಸಿ ಅವರಿಗೆ ಧ್ಯೆರ್ಯ ತುಂಬುವುದರ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಆಸ್ಪತ್ರೆಗೆ ಭೇಟಿ ಕೊಟ್ಟ ಎನ್. ಡಬ್ಲ್ಯೂ. ಎಫ್ . ಪುತ್ತೂರು ಜಿಲ್ಲಾ ಕಾರ್ಯದರ್ಶಿ ಆಯಿಷಾ ಬಷೀರ್ ಹಾಜಿ ಗೋಳ್ತಮಜಲು, ವಿಟ್ಲ ಕ್ಷೇತ್ರಾಧ್ಯಕ್ಷೆ ಸುಮಯ್ಯಾ ಸಿದ್ದೀಕ್ ಅವರ ಜೊತೆ ಎನ್.ಡಬ್ಲ್ಯೂ.ಎಫ್. ನ ಹಲವಾರು ಮಹಿಳೆಯರು ಜೊತೆಗಿದ್ದರು. ಡಾ: ಪ್ರಶಾಂತ್ ಮತ್ತು ಡಾ: ಗೀತಾ ಪ್ರಕಾಶ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಬುರ್ಖಾಧಾರಿ ಮಹಿಳೆಯರ ಕುರಿತು ವಿವಾದಗಳು ಬಂದು ಆಕೆಗೆ ಬುರ್ಖಾದಲ್ಲಿ ಸ್ವಾತಂತ್ರ್ಯ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿರುವ ಈ ಸಂಧರ್ಭದಲ್ಲಿ ಎನ್.ಡಬ್ಲ್ಯೂ.ಎಫ್. ನ ಬುರ್ಖಾಧಾರಿ ಮಹಿಳೆಯರು ವಿಶ್ವ ಮಹಿಳಾ ದಿನಾಚರಣೆಯಂದು ಹಮ್ಮಿಕೊಂಡ ಈ ಅರ್ಥಪೂರ್ಣ ಕಾರ್ಯಕ್ರಮ ಮುಸ್ಲಿಂ ಮಹಿಳಾ ಸಬಲೀಕರಣದ ಸಂಕೇತದಂತಿತ್ತು .



ವರದಿ : ಅಶ್ರಫ್ ಮಂಜ್ರಾಬಾದ್.
ಚಿತ್ರ ಕೃಪೆ: ಕೋಸ್ಟಲ್ ಡೈಜೆಸ್ಟ್ .

No comments: