Mar 19, 2010
ಬೆಲೆ ಏರಿಕೆ ವಿರುದ್ಧ ಜಾಥಾ: ಸೈಕಲ್‌ನಿಂದ ಜಾರಿ ಬಿದ್ದ ಸಿಎಂ!
ಯುಪಿಎ ಸರ್ಕಾರದ ಬೆಲೆ ನೀತಿ ಏರಿಕೆಯನ್ನು ವಿರೋಧಿಸಿ ಬಿಜೆಪಿ ಸೈಕಲ್ ಜಾಥಾ ನಡೆಸುತ್ತಿದ್ದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜಭವನದ ಬಳಿ ಸೈಕಲ್‌ನಿಂದ ಇಳಿಯುತ್ತಿದ್ದ ವೇಳೆ ಜಾರಿಬಿದ್ದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.ಇಂದು ಬೆಳಿಗ್ಗೆ ನಗರದ ಎಂ.ಜಿ.ರಸ್ತೆಯಿಂದ ರಾಜಭವನದವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪಕ್ಷದ ಮುಖಂಡರ ಜೊತೆ ಸೈಕಲ್ ಜಾಥಾ ಹೊರಟ ಮುಖ್ಯಮಂತ್ರಿಗಳು, ಇನ್ನೇನು ರಾಜಭವನದ ಸಮೀಪ ಇಳಿಯಬೇಕೆನ್ನುವಷ್ಟರಲ್ಲಿ ಸೈಕಲ್‌ನಿಂದ ಜಾರಿ ಬಿದ್ದಿದ್ದರು. ಆದರೆ ಅವರಿಗೆ ಯಾವುದೇ ಅಪಾಯವಾಗಿಲ್ಲ, ಅಷ್ಟರಲ್ಲಿಯೇ ಮುಖ್ಯಮಂತ್ರಿಗಳ ಸಹಾಯಕರು, ಬೆಂಗಾವಲು ಪಡೆ ಅವರನ್ನು ಸಾವರಿಸಿ ತಡೆದು ಮೇಲೆಕ್ಕೆತ್ತಿದ್ದರು.ಇತ್ತೀಚೆಗಷ್ಟೇ ಇಂದೋರ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎಂಬಂತೆ ತಾವೇ ಸ್ವತಃ ಸೈಕಲ್ ಏರಿ ಸುಮಾರು 1ಕಿ.ಮೀ.ಸವಾರಿ ನಡೆಸಿ ಸಮಾವೇಶ ನಡೆಯುವ ಸ್ಥಳ ತಲುಪುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದರು.
Subscribe to:
Post Comments (Atom)
No comments:
Post a Comment