
ಸುಳ್ಯ: ಮಾರ್ಚ್ ೨೩: ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಬ್ಯಾಂಕಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಸ್ಥಾನ ಪಡೆದು ಅಧಿಕಾರಕ್ಕೇರಿದರೆಮೊದಲ ಬಾರಿಗೆ ಸ್ಪರ್ಧಿಸಿದ ಎಸ್.ಡಿ.ಪಿ.ಐ. ಮೂರು ಸ್ಥಾನ ಪಡೆದು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಎಸ್.ಎಂ. ಬಾಪೂ ಸಾಹೇಬ್ ಮತ್ತು ಟಿ. ಎಂ ಶಹೀದ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಅಬ್ದುಲ್ ಕಲಾಮ್ ನೇತೃತ್ವದಲ್ಲಿ ಎಸ್.ಡಿ.ಪಿ.ಐ. ಮತ್ತು ಇಕ್ಬಾಲ್ ಎಲಿಮಲೆ ನೇತೃತ್ವದಲ್ಲಿ ಕಾಂಗ್ರೆಸ್ಸಿನಲ್ಲಿ ಸ್ಥಾನ ಸಿಗದೇ ಬಂಡಾಯ ಎದ್ದು ಬಿ.ಜೆ.ಪಿ. , ಜೆ. ಡಿ.ಎಸ್ ನೇತೃತ್ವದಲ್ಲಿ ರಚಿಸಿದ ತೃತೀಯ ರಂಗದ ಅಭ್ಯರ್ಥಿಗಳು ಕಣದಲ್ಲಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳಾದ ಟಿ.ಎಂ. ಶಹೀದ್, ಎಸ್.ಎಂ. ಬಾಪೂ ಸಾಹೇಬ್ , ಬೀರಾ ಮೊಯ್ದೀನ್ , ಜಿ.ಎಂ. ಮಹಮದ್ ,ಮತ್ತು ಮೊಯ್ದೀನ್ ಕೆ.ಎಂ. ಜಯಗಳಿಸಿದರೆ ಎಸ್.ಡಿ.ಪಿ.ಐ. ಅಭ್ಯರ್ಥಿಗಳಾದ ಕೆ.ಎ. ಅಬ್ದುಲ್ ಕಲಾಮ್ , ಅಬ್ದುಲ್ ಮುನೀರ್ , ಹನೀಫ್ ಬುಶ್ರಾ , ತೃತೀಯ ರಂಗದ ಇಕ್ಬಾಲ್ ಎಲಿಮಲೆ ಮತ್ತು ಪಕ್ಷೇತರ ಅಭ್ಯರ್ಥಿ ರಿಯಾಜ್ ಜಯಗಳಿಸಿದರು. ಮಹಿಳೆಯರಿಗೆ ಮೀಸಲಾದ ಸ್ಥಾನಕ್ಕೆ ಕಾಂಗ್ರೆಸ್ಸಿನ ವಹಿದಾ ಇಸ್ಮಾಯಿಲ್ ಅವಿರೋಧವಾಗಿ ಆಯ್ಕೆಯಾದರು.
No comments:
Post a Comment