VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 18, 2010

ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷರಿಂದ ರಾಹುಲ್ ಗಾಂಧೀ ಭೇಟಿ


ನವದೆಹಲಿ: ಎಸ್.ಐ.ಓ. ರಾಷ್ಟ್ರೀಯ ಅಧ್ಯಕ್ಷ ಸುಹೈಲ್ .ಕೆ.ಕೆ. ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಹನಾಜ್ ಅಲಿ ರೀಹಾನ್ ಇತ್ತೀಚಿಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸುಮಾರು ಮೂವತ್ತು ನಿಮಿಷಗಳ ಕಾಲ ದೇಶದ ವಿವಿಧ ಸಮಸ್ಯೆಗಳು ಮತ್ತು ವಿಧ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು.

ತಮ್ಮ ಭೇಟಿಯ ಅವಧಿಯಲ್ಲಿ ರಾಹುಲ್ ಗಾಂಧಿಯವರು ಎಸ್.ಐ.ಓ ಮುಸ್ಲಿಂ ವಿಧ್ಯಾರ್ಥಿಗಳ ಶೈಕ್ಷಣಿಕ ಜಾಗೃತಿಗಾಗಿ ಹಮ್ಮಿಕೊಳ್ಳುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು. ಮುಸ್ಲಿಂ ವಿಧ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ, ಮುಸ್ಲಿಂ ವಿಧ್ಯಾರ್ಥಿನಿಯರ ಶೈಕ್ಷಣಿಕ ಸಮಸ್ಯೆ , ಮದರಸ ವಿಧ್ಯಾಭ್ಯಾಸ ಮತ್ತು ಇತರ ಸಮಸ್ಯೆಗಳ ಕುರಿತು ನಡೆದ ಈ ಚರ್ಚೆಯಲ್ಲಿ ಅತ್ಯುತ್ಸಾಹದಿಂದ ರಾಹುಲ್ ಗಾಂಧೀ ತಮ್ಮ ಸಲಹೆ ನೀಡಿದರು.

No comments: