
wd
ಚೆನ್ನೈ:ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹ ಮಾಲಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ವೀಡಿಯೋಕಾನ್ ಗ್ರೂಪ್ ಖರೀದಿ ಮಾಡಲಿದೆಯೆಂದು ಮೂಲಗಳು ವರದಿ ಮಾಡಿವೆ.
ಕಳೆದ ಭಾನುವಾರವಷ್ಟೇ ನಡೆದ ಹರಾಜಿನಲ್ಲಿ ತಂಡ ಖರೀದಿಸಲು ವಿಫಲವಾಗಿದ್ದ ವೀಡಿಯೋಕಾನ್, ಸದ್ಯ ಅಸ್ತಿತ್ವದಲ್ಲಿರುವ ತಂಡಗಳಲ್ಲಿ ಒಂದನ್ನು ಖರೀದಿಸಲು ಉತ್ಸುಕತೆ ತೋರಿದೆ.
ಭಾನುವಾರ ನಡೆದ ನೂತನ ತಂಡಗಳ ಹರಾಜಿನಲ್ಲಿ ಪುಣೆ ತಂಡವನ್ನು ಸಹಾರಾ ಇಂಡಿಯಾ ಹಾಗೂ ಕೊಚ್ಚಿ ತಂಡವನ್ನು ರೆಂಡೆವೋಸ್ ಸ್ಪೋಟ್ಸ್ ವರ್ಲ್ಡ್ ಲಿಮಿಟೆಡ್ ಖರೀದಿಸಿತ್ತು.
ಈ ಬಗ್ಗೆ ವಿಡಿಯೋಕಾನ್ ಗ್ರೂಪ್ ಮುಖ್ಯಸ್ಥ ವೇಣುಗೋಪಾಲ್ ದೂತ್ ಸ್ಪಷ್ಟನೆ ನೀಡಿದ್ದು, ತಂಡ ಖರೀದಿಸುವ ಇರಾದೆಯಿದೆಯೆಂದು ಹೇಳಿದ್ದಾರೆ. ಆದರೆ ಅದು ಪಂಜಾಬ್ ಆಗಿರಬಹುದೇ ಎಂಬುದರ ಬಗ್ಗೆ ಖಚಿತತೆ ವ್ಯಕ್ತಪಡಿಸಿಲ್ಲ.
2008ರಲ್ಲಿ 76 ಮಿಲಿಯನ್ ಡಾಲರುಗಳಿಗೆ ಪಂಜಾಬ್ ತಂಡದ ಹಕ್ಕನ್ನು ಹತ್ತು ವರ್ಷಗಳಿಗೆ ನೆಸ್ ವಾಡಿಯಾ, ಪ್ರೀತಿ ಜಿಂಟಾ, ಮೋಹಿತ್ ಬರ್ಮನ್ ಮತ್ತು ಕರಣ್ ಪೌಲ್ ಗೆದ್ದುಕೊಂಡಿದ್ದರು
No comments:
Post a Comment