ಕಾಸರಗೋಡು, ಎ.೬: ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನಿರ್ವಹಣೆ ವೆಚ್ಚಕ್ಕೆ ನಿಯಂತ್ರಣ ಹೇರಲು ಸರಕಾರ ಕ್ರಮ ತೆಗೆದುಕೊಳ್ಳುತ್ತಿದ್ದರೂ ನಮ್ಮ ಸಚಿವರಿಗೆ ಬೇಕು `ಲಕ್ಷುರಿ ಕಾರುಗಳು'!
ಹಿಂದೆಲ್ಲ ಸಚಿವರುಗಳಲ್ಲಿ ಅಂಬಾಸಿಡರ್ ಕಾರುಗಳಿಗಾಗಿ ಪೈಪೋಟಿ ನಡೆಯುತ್ತಿತ್ತು. ಆದರೆ ಇಂ ದು ಅಂಬಾಸಿಡರ್ ಕಾರು ಯಾರಿಗೂ ಬೇಡ ಎಂಬ ಸ್ಥಿತಿ ನಿರ್ಮಾಣವಾಗಿದೆ. ಬದಲಾಗಿ ಆಡಂ ಬರ ಕಾರುಗಳೇ ಆಗಬೇಕು ನಮ್ಮ ಸಚಿವರುಗಳಿಗೆ. ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಸಹಿತ ಕೇರಳದ ಐವರು ಸಚಿವರುಗಳು ಈಗಲೂ ಅಂಬಾಸಿಡರ್ ಕಾರುಗಳನ್ನೇ ಬಳಸುತ್ತಿದ್ದಾರೆ. ಉಳಿದ ಸಚಿವರುಗಳಿಗೆ ಆಡಂಬರದ ಕಾರುಗಳೇ ಬೇಕು.
ಕಳೆದ ನಾಲ್ಕು ವರ್ಷಗಳಿಂದ ಸಚಿವರುಗಳಿಗಾಗಿ ವಾಹನ ಖರೀದಿಸಿದ ಬಾಬ್ತು ೨,೨೩,೫೪,೭೦೩ ರೂ. ವ್ಯಯಿಸಲಾಗಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಬಹಿರಂಗಪಡಿಸಿದ್ದಾರೆ. ಕಾರ್ಮಿಕ ಖಾತೆ ಸಚಿವ ಪಿ.ಕೆ.ಗುರುದಾಸನ್, ಕಾನೂನು ಸಚಿವ ಎ. ವಿಜಯ ಕುಮಾರ್, ಸಹಕಾರಿ ಖಾತೆ ಸಚಿವ ಎಸ್.ಶರ್ಮ ಮಾತ್ರವೇ ಅಂಬಾಸಿಡರ್ ಕಾರುಗಳ ನ್ನು ಬಳಸುತ್ತಿದ್ದಾರೆ.
ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್, ಆಹಾರ ಖಾತೆ ಸಚಿವ ಸಿ.ದಿವಾಕರನ್, ನೀರಾವರಿ ಖಾತೆ ಸಚಿವ ಎಂ.ಕೆ. ಪ್ರೇಮಚಂದ್ರನ್, ಶಿಕ್ಷಣ ಸಚಿವ ಎಂ.ಎ. ಬೇಬಿ ಮತ್ತು ಆರೋಗ್ಯ ಖಾತೆ ಸಚಿವೆ ಪಿ.ಕೆ.ಶ್ರೀಮತಿ ಟೀಚರ್ ಸ್ಕೋಡಾ ಕಾರುಗಳನ್ನು ಉಪಯೋಗಿಸುತ್ತಿದ್ದಾರೆ.
ಅರಣ್ಯ ಖಾತೆ ಸಚಿವ ಬಿನೋಯಿ ವಿಶ್ವಂ, ಕೃಷಿ ಸಚಿವ ಮುಲ್ಲಕ್ಕರ ರತ್ನಾಕರನ್, ಸ್ಥಳೀಯಾಡಳಿತ ಖಾತೆ ಸಚಿವ ಪಾಲೋಳಿ ಮುಹಮ್ಮದ್ ಕುಟ್ಟಿ, ಕಂದಾಯ ಸಚಿವ ಕೆ.ಪಿ.ರಾಜೇಂದ್ರನ್, ಮುಜರಾ ಯಿ ಖಾತೆ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಸ್ಕೋರ್ಪಿಯೋ ವಿಕ್ಟರ್ ವಾಹನ ಬಳಸುತ್ತಿದ್ದಾರೆ.
ಸಾರಿಗೆ ಸಚಿವ ಜೋಸ್ ತೆಟ್ಟಿಯಿಲ್, ಕೈಗಾರಿಕಾ ಸಚಿವ ಎಳಮರಂ ಕರೀಂ ಮತ್ತು ಲೋಕೋ ಪಯೋಗಿ ಖಾತೆ ಸಚಿವ ಪಿ.ಜೆ.ಜೋಸೆಫ್ ಟೊಯೋಟಾ ಇನ್ನೋವಾ ಬಳಸುತ್ತಿದ್ದಾರೆ. ಗೃಹ ಸಚಿವರ ಸಲಹೆಗಾರ ಮತ್ತು ಪ್ರವಾಸೋದ್ಯಮ ನಿರ್ದೇಶಕ ಟೊಯೋಟಾ ಕರೋಲಾ ವಾಹನಗಳ ನ್ನು ಬಳಸುತ್ತಿದ್ದಾರೆ. ವಿದ್ಯುತ್ ಖಾತೆ ಸಚಿವ ಎ.ಕೆ.ಬಾಲನ್, ವಿತ್ತ ಸಚಿವ ಡಾ.ಥೋಮಸ್ ಐಸಾ ಕ್ ಹೊರತಾಗಿರುವ ಇತರ ಸಚಿವರುಗಳಿಗೆ ಪ್ರವಾಸೋದ್ಯಮ ಖಾತೆಯಿಂದ ವಾಹನ ಒದಗಿಸಿ ಕೊಡಲಾಗಿದೆ. ವಿತ್ತ ಸಚಿವರಿಗೆ ಮಾರಾಟ ತೆರಿಗೆ ಇಲಾಖೆಯ ವತಿಯಿಂದ ವಾಹನ ನೀಡಲಾ ಗಿದೆ.
ಸಚಿವರಿಗಿಂತಲೂ ಒಂದು ಹೆಜ್ಜೆ ಮುಂದೆ ಎಂಬಂತೆ ಮುಖ್ಯಮಂತ್ರಿಯವರ ಪ್ರಿನ್ಸಿಪಲ್ ಸೆಕ್ರೆಟರಿ ಮಿಸ್ತುಬಿಸಿ ಲ್ಯಾಸ್ಸರ್ ಮತ್ತು ಮುಖ್ಯಮಂತ್ರಿಗಳ ಸಲಹೆಗಾರ ಫೋರ್ಡ್ ಕಾರನ್ನು ಬಳಸುತ್ತಿದ್ದಾರೆ. ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಬಳಸುತ್ತಿರುವ ವಾಹನ ಕೋರಾಲಾ ಆಲ್ಟೀಸ್. ಸಚಿವರ ಇಲಾಖೆಯ ಇತರ ಉನ್ನತ ಅಧಕಾರಿಗಳು ಇದೇ ರೀತಿ ಆಡಂಬರದ ವಾಹನಗಳನ್ನೇ ಬಳಸುತ್ತಿದ್ದಾರೆ.
Subscribe to:
Post Comments (Atom)
No comments:
Post a Comment