
ಕರಾಚಿ,30:ತಂಡದ ನಾಯಕತ್ವ ಹೊಣೆ ಹೊತ್ತ ಬೆನ್ನಲ್ಲೇ ತನ್ನ ಅಧಿಕಾರವನ್ನು ಚಲಾಯಿಸತೊಡಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಆಫ್ರಿದಿ ಯಾವುದೇ ಹಂತಕ್ಕೂ ತಂಡದಲ್ಲಿ ರಾಜಕೀಯ ತಾಳಲಾರೆನು ಎಂಬ ಕಠಿಣ ಸಂದೇಶವನ್ನು ಸಹ ಆಟಗಾರರಿಗೆ ರವಾನಿಸಿದ್ದಾರೆ.
ಮುಂಬರುವ ಇಂಗ್ಲೆಂಡ್ ಸರಣಿ ಮತ್ತು ಏಷ್ಯಾ ಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರನ್ನಾಗಿ ಆಫ್ರಿದಿ ಅವರನ್ನು ಪಿಸಿಬಿ ನೇಮಕ ಮಾಡಿತ್ತು. ಆ ಮೂಲಕ ಆಫ್ರಿದಿ ಟೆಸ್ಟ್‌ಗೂ ನಾಯಕರೆನಿಸಿಕೊಂಡಿದ್ದರು.
ಡ್ರೆಸ್ಸಿಂಗ್ ರೂಂ ವಾತಾವರಣವನ್ನು ಹದೆಗೆಡವಲು ಯತ್ನಿಸುವ ಪ್ರತಿಯೊಬ್ಬ ಆಟಗಾರನನ್ನು ವಜಾ ಮಾಡಲಾಗುತ್ತದೆ ಎಂದು ಆಫ್ರಿದಿ ಎಚ್ಚರಿಕೆ ನೀಡಿದರು.ತಂಡದಲ್ಲಿ ಯಾವುದೇ ನಕಾರತ್ಮಕ ಅಂಶ ಸಹಿಸತಕ್ಕುದಲ್ಲ. ಆದ್ದರಿಂದ ಎಲ್ಲರೂ ಧನಾತ್ಮಕವಾದ ಕೊಡುಗೆ ನೀಡಬೇಕು ಎಂದವರು ಹೇಳಿದರು.
wd
No comments:
Post a Comment