
ಶೇ.60ರಷ್ಟು ಕ್ಷೇತ್ರಗಳಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ಬೆಂಬಲಿತರು
ರೆಡ್ಡಿ ರಾಜ್ಯಪಾಲರಲ್ಲಿ ಕ್ಷಮೆ ಯಾಚಿಸಲಿ
ಸಂವಿಧಾನಬದ್ಧವಾಗಿ ಕಾನೂನು ಪರಿಪಾಲಿಸುತ್ತಿರುವ ಘನತೆವೆತ್ತ ರಾಜ್ಯಪಾಲರ ವಿರುದ್ಧ ಶಾಸಕರು, ಮಂತ್ರಿಗಳು ಲಂಗು ಲಗಾಮಿಲ್ಲದೇ ಮಾತನಾಡುವುದು ಸರಿಯಲ್ಲ. ಜನಾರ್ದನ ರೆಡ್ಡಿ ಸೇರಿದಂತೆ ಬಿಜೆಪಿಯ ಇತರರ ಕಾರ್ಯವೈಖರಿಯನ್ನು ಗಮನಿಸಿದರೆ ಅವರಿಗೆ ಅನನುಭ ವದ ಕೊರತೆಯಿರುವುದು ಎದ್ದು ಕಾಣುತ್ತದೆ. ಬಹಿರಂಗ ಟೀಕೆ ಮಾಡುತ್ತಿರುವ ಜನಾರ್ದನ ರೆಡ್ಡಿ ರಾಜ್ಯಪಾಲರ ಬಳಿ ಕ್ಷಮೆಯಾಚಿಸಬೇಕು -ಮೋಟಮ್ಮ
ಚಿಕ್ಕಮಗಳೂರು, ಮೇ 18 : ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನರನ್ನು ಕಡೆಗಣಿಸಿ ನೆರೆಯ ರಾಜ್ಯಕ್ಕೆ, ಮಠಮಾನ್ಯಗಳಿಗೆ ಮತ್ತು ಲಾಲ್‌ಬಾಗ್‌ನ ಅಭಿವೃದ್ಧಿಗಾಗಿ ವೆಚ್ಚ ಮಾಡುತ್ತಿರುವುದರಿಂದ ಗ್ರಾ.ಪಂ. ಚುನಾವಣೆ ಯಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಶೇ.60ರಷ್ಟು ಕ್ಷೇತ್ರಗಳಲ್ಲಿ ಜಯ ಸಾಸಿದ್ದು, ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು ಬೀಗಿದವರನ್ನು ಹಳ್ಳಿಗಾಡಿನ ಜನರು ನೆಲಕ್ಕಚ್ಚಿಸಿ ಇತಿಹಾಸ ಬರೆದಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಹೇಳಿದ್ದಾರೆ.
ಅವರು ಮಂಗಳವಾರ ಮೂಡಿಗೆರೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಜನಸಾಮಾನ್ಯರು ಸಂಕಷ್ಟದ ಸ್ಥಿತಿಯಲ್ಲಿದ್ದರೂ ಯಡಿಯೂರಪ್ಪ ತಮಿಳುನಾ ಡಿನ ದೇವಸ್ಥಾನವೊಂದಕ್ಕೆ 15 ಕೋಟಿ ರೂ.ಗಳ ಧಾರಾಳ ಕೊಡುಗೆ ನೀಡಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಲಾಲ್‌ಬಾಗ್ ಅಭಿವೃದ್ಧಿಗೆ 40 ಕೋಟಿ. ರೂ.ಗಳನ್ನು ಬಿಡುಗಡೆಗೊಳಿಸಿದ್ದಾರೆ. ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಹಣ ಮೀಸಲಿಡುತ್ತಿದ್ದಾರೆ. ಆದರೆ ಉತ್ತರ ಕರ್ನಾಟಕ ದಲ್ಲಿ ವಸತಿಹೀನರಾಗಿರುವ ನೆರೆ ಪೀಡಿತ ಜನರಿಗೆ ಮತ್ತು ರಾಜ್ಯದ ಎಲ್ಲಾ ವರ್ಗಗಳ ಬಡವರ ಶ್ರೇಯೋಭಿವೃದ್ಧಿಗಾಗಿ ಮುತುವರ್ಜಿ ವಹಿಸುತ್ತಿಲ್ಲ. ಜೊತೆಗೆ ಈ ಸರಕಾರದ ಶಾಸಕರು, ಮಂತ್ರಿಗಳು ಹಗರಣಗಳಲ್ಲಿ ಮುಳುಗಿರುವುದರಿಂದ ಬೇಸತ್ತಿರುವ ಜನಸಾಮಾನ್ಯರು ಸಹಜ ವಾಗಿಯೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.
ಈ ಸರಕಾರದಿಂದ ರಾಜ್ಯದ ಜನರಿಗಾಗಿ ಕನಿಷ್ಠ ಕಾರ್ಯಕ್ರಮ ಕೂಡ ನಡೆದಿಲ್ಲ. ಹುಸಿ ಭರವಸೆಗಳನ್ನು ನೀಡಿ ಅಕಾರಕ್ಕೆ ಬಂದವರ ಬಂಡವಾಳ ಏನೆಂಬುದು ಜನಸಾಮಾನ್ಯರಿಗೆ ಅರ್ಥವಾಗಿದೆ. ತುತ್ತು ಅನ್ನ, ನೀರು, ವಸತಿ, ಔಷಗಳಂತಹ ಅಗತ್ಯ ಮೂಲಭೂತ ಸೌಕರ್ಯಗಳು ಬಡವರಿಗೆ ಬೇಕಾಗಿದೆಯೇ ಹೊರತು ಮನರಂಜನಾ ತಾಣಗಳಲ್ಲ. ಹೀಗಾಗಿ ಅವರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮೋಟಮ್ಮ ತಿಳಿಸಿದರು.
ಮಲೆನಾಡು, ಕರಾವಳಿ, ಬಯಲುಸೀಮೆ ಪ್ರದೇಶಗಳಲ್ಲಿ ಕಾಂಗ್ರೆಸ್ ಅತ್ಯಕ ಸ್ಥಾನಗಳನ್ನು ಗಳಿಸಿದೆ.
ಮೂಡಿಗೆರೆಯಲ್ಲಿ ಚುನಾವಣೆ ನಡೆದ 24 ಗ್ರಾ.ಪಂ.ಯಲ್ಲಿ 12ನ್ನು ಶೇಕಡ ನೂರರಷ್ಟು ಬಹುಮತ ಸಾಸಿ ಕಾಂಗ್ರೆಸ್ ಗೆದ್ದುಕೊಂಡಿದೆ ಎಂದು ಮೋಟಮ್ಮ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಜಯರಾಂ, ತಾ.ಪಂ. ಸದಸ್ಯ ಯು.ಆರ್.ರುದ್ರಯ್ಯ, ಎಂ.ಪಿ.ಮನು, ದಶರಥ್, ಎಂ.ಎಸ್.ಅಂತ್, ಕೆ.ಎಂ.ರಘು, ಬಿಳಗುಳ ಲತ್ೀ ಹಾಜರಿದ್ದರು.
No comments:
Post a Comment