VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ಮೊಬೈಲ್ ಫೋನ್ ತರಂಗಗಳಿಂದ ಜೇನ್ನೊಣಗಳ ಸಂತತಿ ಅವನತಿ

ಮೊಬೈಲ್‌ಗಳಿಂದ ಹೊರಬರುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳು ಜೇನ್ನೊಣಗಳ ಸಾವಿಗೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮೊಬೈಲ್‌ಗಳು ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳು ಅಪಾಯಕಾರಿ ತರಂಗಗಳಾಗಿದ್ದು ಇದು ಜೇನ್ನೊಣಗಳ ಸಂತತಿಗೆ ಕುತ್ತು ತಂದಿದ್ದು, ಇದೇ ಇಂದು ಜೇನುಗೂಡುಗಳ ಅವನತಿಗೂ ಕಾರಣವಾಗುತ್ತಿದೆ ಎನ್ನಲಾಗಿದೆ.

ಕರೆಂಟ್ ಸೈನ್ಸ್ ಎಂಬ ನಿಯತಕಾಲಿಕೆ ಈ ಬಗ್ಗೆ ಸುದೀರ್ಘ ವರದಿ ಪ್ರಕಟಿಸಿದೆ. ಪಂಜಾಬ್ ವಿಶ್ವವಿದ್ಯಾನಿಲಯದ ಸಂಶೋಧಕರಾದ ಪ್ರಕಾಶ್ ಶರ್ಮಾಳ್ ಹಾಗೂ ನೀಲಿಮಾ ಆರ್ ಕುಮಾರ್ ಅವರು ಮೊಬೈಲ್ ತರಂಗಗಳಿಗೆ ಜೇನ್ನೊಣಗಳ ನಡವಳಿಕೆ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದು, ಈ ತರಂಗಗಳೇ ಜೇನ್ನೊಣಗಳ ಮಾರಣ ಹೋಮಕ್ಕೆ ಕಾರಣವಾಗಿದೆ ಎಂದಿದ್ದಾರೆ. ಜೊತೆಗೆ ಗಣನೀಯ ಸಂಖ್ಯೆಯಲ್ಲಿ ಇಂದು ಜೇನುಗೂಡುಗಳು ಹಾಳಾಗುತ್ತಿರುವುದಕ್ಕೂ ಇದೇ ತರಂಗಗಳ ಪ್ರಭಾವ ಎನ್ನಲಾಗಿದೆ.

ಮೊಬೈಲ್‌ನ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳು ಯಥೇಚ್ಛವಾಗಿ ವಾತಾರವಣಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಇದು ಜೇನ್ನೊಣಗಳ ಗೂಡುಗಳಿಗೆ ಹಾನಿ ತಂದಿವೆ. ಇಂಥ ಗೂಡುಗಳಲ್ಲಿ ರಾಣಿ ಜೇನು ನೂರಾರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಆದರೆ ಈ ತರಂಗಗಳ ಪ್ರಭಾವದಿಂದ ಈ ಸಂತತಿಗೇ ಇಂದು ಧಕ್ಕೆ ಬಂದಿದೆ.

ಈ ವಿಜ್ಞಾನಿಗಳು ವಿಶ್ವವಿದ್ಯಾನಿಲಯದ ಆವರಣದಲ್ಲೇ ಇರುವ ಜೇನ್ನೊಣಗಳ ಸಂತತಿಯನ್ನು ತಮ್ಮ ಸಂಶೋಧನೆಗೆ ಬಳಸಿಕೊಂಡಿದ್ದು, ಒಂದು ಜೇನು ಗೂಡಿನ ಸಮೀಪ 900 ಮೆಗಾ ಹರ್ಟ್ಸ್ ತರಂಗಗಳನ್ನು ದಿನಕ್ಕೆ ರಡು ಬಾರಿ 15 ನಿಮಿಷಗಳ ಕಾಲ ಹರಿಬಿಡಲಾಗಿತ್ತು. ಇನ್ನೊಂದು ಜೇನುಗೂಡಿಗೆ ಯಾವುದೇ ತರಂಗಗಳಿಂದ ದೂರವಿಡಲಾಗಿತ್ತು. ತರಂಗಗಳನ್ನು ತನ್ನ ಹತ್ತಿರಕ್ಕೆ ಪಡೆದ ಜೇನುಗೂಡಿನಲ್ಲಿ 145 ಜೇನ್ನೊಣದ ಮೊಟ್ಟೆಗಳಿದ್ದರೆ, ತರಂಗಗಳಿಂದ ದೂರವಿದ್ದ ಜೇನುಗೂಡಿನಲ್ಲಿ 376 ಮೊಟ್ಟೆಗಳಿದ್ದವು.

ಅಷ್ಟೇ ಅಲ್ಲದೆ, ಜೇನ್ನೊಣಗಳ ಜೀವಕೋಶಗಳಿಗೇ ಮೊಬೈಲ್ ತರಂಗಗಳು ಹಾನಿ ಮಾಡುತ್ತವೆ. ಜೇನ್ನೊಣಗಳಲ್ಲಿ ಕೆಲಸಗಾರ ಹುಳುಗಳು ಹೂವಿಂದ ಹೂವಿಗೆ ಹಾರಿ ಪರಾಗ ಸಂಗ್ರಹಿಸುವ ಚೀಲದ ಗಾತ್ರದಲ್ಲಿ ಕಡಿಮೆಯಾಗಿದೆ. ಗಾತ್ರದಲ್ಲಿ ಕುಗ್ಗಿರುವುದೂ ಕೂಡಾ ಸಂತತಿಗೆ ಪೆಟ್ಟು ನೀಡಿದಂತಯೇ ಎಂದು ಸಂಶೋಧಕರು ಹೇಳಿದ್ದಾರೆ.

No comments: